ತನ್ನ ಕುಟುಂಬಕ್ಕಾಗಿ ಪದವಿಯನ್ನು ತೊರೆದು ಈ ಯುವತಿ ಮಾಡಿದ ಕೆಲಸ ನಿಜಕ್ಕೂ ಶ್ಲಾಘನೀಯ.!

0
272

ಲಾರಿ ಚಾಲನೆ ಮಾಡುವುದು ಎಂದರೆ ಸಾಮಾನ್ಯ ಮಾತಲ್ಲ.! ಹೌದು, ಯಾಕೆಂದರೆ ಲಾರಿ ಲಘು ವಾಹನವಲ್ಲ ಬದಲು ಭಾರಿ ಗಾತ್ರದ, ತೂಕದ ವಾಹನಗಳು. ಇಂಥ ವಾಹನಗಳನ್ನು ಚಲಾಯಿಸಲು ಒಂದು ರೀತಿಯ ತಾಕತ್ತು ಖಂಡಿತ ಇರಲೆಬೇಕು.! ಅದರಲ್ಲೂ ನಮ್ಮ ದೇಶದ ಪ್ರತಿಯೊಬ್ಬ ಲಾರಿ ಚಾಲಕನನ್ನು ನೆನೆಪಿಸಿಕೊಂಡರೆ ಒಮ್ಮೆ ಎದೆ ಝಲ್ ಎನ್ನುತ್ತದೆ. ಯಾಕೆಂದರೆ ಲಾರಿಗಳಲ್ಲಿ ಭಾರಿ ಲೋಡ್ ಹೊತ್ತೊಯ್ಯಲ್ಲೂ 6,8, 10, 14 ಚಕ್ರಗಳನ್ನು ಬಳಸಲಾಗುತ್ತದೆ.

 

 

ಇಂಥ ಒಂದು ಲಾರಿಗಳನ್ನು ಚಾಲಕರು ಸಾವಿಗೆ ಹೆದರದೇ ದೈರ್ಯದಿಂದ ಎಂಥ ಭಯಂಕರ ರಸ್ತೆಗಳಲ್ಲಿಯಾದರೂ ಚಲಾಯಿಸುತ್ತಾರೆ. ಅದಕ್ಕೆ ನಿಜವಾಗಲೂ ಅವರನ್ನು ಮೆಚ್ಚಬೇಕು. ಸಾಮಾನ್ಯವಾಗಿ ನಾವು ನೀವು ಗಮನಿಸಿ ನೋಡುವುದಾದರೆ ಲಾರಿ ಚಾಲಕರು ಹೆಚ್ಚಾಗಿ ಗಂಡಸರು, ಯುವಕರು ಚಾಲಕರಾಗಿ ಕೆಲಸ ನಿರ್ವಹಿಸುತ್ತಾರೆ. ಆದರೆ ಇಲ್ಲೊಬ್ಬರು 25 ವರ್ಷದ ಮಹಿಳಾ ಚಾಲಕಿ ಬೃಹತ್ ಗಾತ್ರದ ಲಾರಿಯನ್ನು ಚಾಲನೆ ಮಾಡುವ ಮೂಲಕ ಆನೇಕರ ಗಮನ ಸೆಳೆದಿದ್ದಾರೆ.

 

 

ಹೌದು, ಮಧ್ಯಪ್ರದೇಶದ ಮಂಡ್ಲ ಜಿಲ್ಲೆಯಲ್ಲಿ ವಾಸವಿರುವ ತಬ್ಸಂ ಆಲಿ ಎಂಬ ಯುವತಿ ಯಾವುದಕ್ಕೂ ಹೆದರದೆ ದೈರ್ಯದಿಂದ ಈ ಒಂದು ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾತ್ರಿ-ಹಗಲು ಎಂಬುದನ್ನು ಲೆಕ್ಕಿಸದೇ ಹೈವೆಗಳಲ್ಲಿ ಲಾರಿಯನ್ನು ಚಾಲನೆ ಮಾಡುತ್ತಾರೆ. ಹೆಮ್ಮೆಯ ವಿಚಾರ ಎಂದರೆ ಮಧ್ಯಪ್ರದೇಶದ ಮೊದಲ ಏಕೈಕ ಮಹಿಳಾ ಚಾಲಕಿ, ಬೃಹತ್ ಲಾರಿಯನ್ನು ಚಾಲನೆ ಮಾಡಲು ಲೈಸನ್ಸ್ ಪಡೆದುಕೊಂಡಿರುವುದು. ಆಲಿ ಅವರು ಚಾಲನೆ ಮಾಡುವ ಲಾರಿ 10 ಚಕ್ರದ್ದು, ಹೀಗಾಗಿ ಈ ವಾಹನವನ್ನು ಓಡಿಸುವುದು ಸುಲಭದ ಮಾತೇ ಅಲ್ಲ ಎಂಬುದು ಪ್ರತಿಯೊಬ್ಬರ ಹೇಳಿಕೆ.

 

 

ವೃತ್ತಿಯಲ್ಲಿ ಲಾರಿ ಚಾಲಕಿಯಾಗಿರುವ ತಬ್ಸಂ ಆಲಿ ಶಾಲೆಗೆ ಹೋಗದೆ ವಿದ್ಯಾರ್ಹತೆ ಪಡೆಯದೆ ಲಾರಿ ಚಾಲಕಿ ಆಗಿದ್ದಾರೆ ಎಂದು ತಿಳಿದುಕೊಳ್ಳಬೇಡಿ. ಪಿಯುಸಿ ಮುಗಿಸಿ, ಪದವಿ ಮಾಡಲು ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡು, ಕಲಾ ವಿಭಾಗವನ್ನು ಸಂಪೂರ್ಣವಾಗಿ ಮುಗಿಸಿಕೊಂಡು, ಕಲಾ ಪದವಿಯನ್ನು ಪಡೆದುಕೊಂಡಿದ್ದಾರೆ. ಆದರೆ ತನ್ನ ಕುಟುಂಬದ ಪರಿಸ್ಥಿತಿಗೆ ಸೋತು ಅವರು ತನ್ನ ಕನಸ್ಸಾದ ವಿದ್ಯಾಬ್ಯಾಸವನ್ನು ಬಿಟ್ಟು ಲಾರಿ ಚಾಲಕರಾಗುತ್ತಾರೆ. ಮನೆಯಲ್ಲಿರುವ ತನ್ನ ಅಮ್ಮ ಮತ್ತು ಐವರು ತಂಗಿಯರಿಗಾಗಿ ತಮ್ಮ ಕನಸ್ಸೆಂಬ ಹೂವು ಅರಳುವ ಮುನ್ನ ಚಿವುಟಿ ಹಾಕುತ್ತಾರೆ. ಪ್ರತಿದಿನ ಲಾರಿ ಚಾಲನೆ ಮಾಡುವ ವೃತ್ತಿಯನ್ನು ತೆಗೆದುಕೊಂಡಿರುವ ಆಲಿಯವರು ನಿತ್ಯ ಮಧ್ಯೆಪ್ರದೇಶ ಮತ್ತು ಛತ್ತಿಸ್ ಘಡ್ ರಾಜ್ಯದ ನಡುವೆ ಪ್ರಯಾಣ ಮಾಡುತ್ತಾರೆ.

 

 

ಕನಿಷ್ಠ ಪಕ್ಷ ಅಂದರೂ 200-225 ಕಿ.ಮೀ ಲಾರಿಯನ್ನು ಚಲಾಯಿಸುತ್ತಾರೆ. ಯಾವುದೇ ಕ್ಲೀನರ್ ಅಥವಾ ಸಹಾಯಕನನ್ನು ಇಟ್ಟುಕೊಳ್ಳದೇ ಒಬ್ಬರೇ ಕೆಲಸ ನಿರ್ವಹಿಸುತ್ತಾರೆ. ಅವರು ಸಹಾಯ ಪಡೆಯುವುದು ಒಮ್ಮೆ ಲೋಡ್ ಮತ್ತು ಅನ್ ಲೋಡ್ ಸಮಯದಲ್ಲಿ ಮಾತ್ರ ಬಿಟ್ಟರೆ ಮತ್ತೆಲ್ಲೂ ಸಹಾಯ ತೆಗೆದುಕೊಳ್ಳುವುದಿಲ್ಲ.! ಕುಟುಂಬದಲ್ಲಿರುವ ಒಟ್ಟು 9 ಜನರನ್ನು ತಬ್ಸಂ ಆಲಿ ಒಬ್ಬರೇ ತಮ್ಮ ಶ್ರಮದಿಂದ ಸಾಕುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿಯಲ್ಲಿ ತುಂಬ ಕಷ್ಟದಲ್ಲಿ ಇರುವ ಬಡ ಕುಟುಂಬದವರು. ಹಾಗಾಗಿ ಅವರು ತಮ್ಮ ಶ್ರಮದಿಂದ ಬರುವ ಸಂಪೂರ್ಣ ಲಾಭವನ್ನು ಕುಟುಂಬದವರ ಜೀವನಕ್ಕೆ ಧಾರೆ ಎಳೆಯುತ್ತಿದ್ದಾರೆ. ತಬ್ಸಂ ಆಲಿಯವರು ತಮ್ಮ ಲಾರಿಯನ್ನು ರಸ್ತೆಗೆ ಇಳಿಸಿದರೆ ಸಾಕು ಊರಿನ ಪ್ರತಿಯೊಬ್ಬರು ಬಾರಿ ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಾರೆ.

 

 

ಯಾಕೆಂದರೆ ಅವರ ವ್ಯಕ್ತಿತ್ವ, ಮುಗ್ದ ಮಾತುಗಳು ಮತ್ತು ರಾಜ್ಯದ ಹಾಗೂ ಊರಿನ ಮೊದಲ ಹೆಣ್ಣು ಮಗಳು ಪುರುಷನ ಕೆಲಸವನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿರುವುದು ಅವರಿಗೆ ಒಂದು ಹೆಮ್ಮೆ, ಖುಷಿಯ ಸಂಗತಿಯಾಗಿ ಉಳಿದಿದೆ. ತಂದೆ ಮತ್ತು ತಮ್ಮ ಇಬ್ಬರು ಲಾರಿ ಚಾಲಕರಾಗಿರುವ ಕಾರಣ ತಬ್ಸಂ ಆಲಿಯವರಿಗೂ ಕೂಡ ಲಾರಿ ಚಾಲನೆ ಮಾಡುವುದು ಸುಲಭವಾಯಿತು. ತಂದೆ, ಮಗಳು ಲಾರಿ ಚಾಲನೆಯನ್ನು ಬೇಗ ಕಲಿತ್ತಿದ್ದನ್ನು ನೋಡಿ ಬಹಳ ಸಂತಸವಾಗುತ್ತಾರೆ. ತಬ್ಸಂ ಆಲಿಯವರು ಹೇಳುವ ಹಾಗೆ ತನ್ನ ತಾಯಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಅವರ ಆರೋಗ್ಯದ ಪರಿಸ್ಥಿತಿ ತೀವ್ರ ಹದಗೆಟ್ಟಿದೆ.

 

 

ಈ ಕಾರಣದಿಂದ ಅವರ ಮನೆಯಲ್ಲಿ ತೀವ್ರ ಕಷ್ಟ ಹೆಚ್ಚಾಗಿದ್ದು, ತಾಯಿಯ ಆರೋಗ್ಯಕ್ಕೆ ಸಾಕಷ್ಟು ಹಣದ ಅವಶ್ಯಕತೆ ಇದ್ದ ಪರಿಣಾಮ ತಬ್ಸಂ ಆಲಿಯವರು ದುಡಿಯುವುದಕ್ಕೆ ನಿಲ್ಲುತ್ತಾರೆ. ಜೊತೆಗೆ ತನ್ನ ಮಿಕ್ಕ ಐದು ಸಹೋದರಿಯರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಿ ಅವರನ್ನು ವಿದ್ಯಾಂವಂತರಾಗಿ ಮಾಡಬೇಕೆಂಬ ಮಹಾದಾಸೆ ನನ್ನದ್ದು ಎಂದು ಹೇಳುತ್ತಾರೆ.! ತಬ್ಸಂ ಆಲಿ ಅವರ ಈ ಒಂದು ಕೆಲಸವನ್ನು ಗುರುತಿಸಿದ ಮಧ್ಯಪ್ರದೇಶ ರಾಜ್ಯ 2015 ರಲ್ಲಿ ಅವರಿಗೆ ಚಿನ್ನದ ಪದಕ ನೀಡಿ, ರಾಜ್ಯದ ಮೊದಲ ಹೆಣ್ಣು ಮಗಳು ಲಾರಿಯನ್ನು ಚಲಾಯಿಸುತ್ತಿರುವುದು ಎಂದು ಹೇಳಿ ಗೌರವಿಸಿತ್ತು.

 

 

ಜೊತೆಗೆ ಆನೇಕ ಸಂಘ, ಸಂಸ್ಥೆಗಳಿಂದ ಕೂಡ ಅವರ ಕೆಲಸಕ್ಕೆ ಪ್ರಶಸ್ತಿಗಳು ಲಭಿಸಿದೆ. ತಬ್ಸಂ ಆಲಿಯವರು ತಮ್ಮ ಕುಟುಂಬಕ್ಕಾಗಿ ತಮ್ಮ ಕನಸ್ಸನ್ನು ಮರೆತು, ತನ್ನ 5 ಜನ ತಂಗಿಯರ ವಿದಾಭ್ಯಾಸಕ್ಕೆ ಶ್ರಮಿಸುತ್ತಿರುವ ಅವರ ನಿಸ್ವಾರ್ಥ ಗುಣ ಹಾಗೂ ಶ್ರಮಕ್ಕೆ ನಮ್ಮ ಪ್ರೀತಿಯ ಶುಭ ಹಾರೈಕೆಗಳು.

LEAVE A REPLY

Please enter your comment!
Please enter your name here