ಟಿ 20 ಯನ್ನು ಒಲಿಂಪಿಕ್ಸ್ ನಲ್ಲಿ ಸೇರಿಸ ಬೇಕು – ರಾಹುಲ್ ದ್ರಾವಿಡ್

0
75
t20 olampics

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜನಪ್ರಿಯವಾಗಿರುವ ಟಿ 20 ಪಂದ್ಯವು ಎಲ್ಲರ ಗಮನ ಸೆಳೆಯುತ್ತಾ ಇದೆ. ಎಲ್ಲೆಡೆ ಸದ್ದು ಮಾಡುತ್ತಾ ಇದೆ. ಇತ್ತೀಚೆಗೆ ಯುಎಇ ಯಲ್ಲಿ ಮುಗಿದ ಐಪಿಎಲ್ ಟೂರ್ನಿ ಯಶಸ್ವಿ ಆಗಿ ಮುಗಿದಿದೆ ಅಲ್ಲದೆ ಎಲ್ಲರನ್ನೂ ರಂಜಿಸಿದೆ ಎಂಬುದು ಸತ್ಯ. ಕಷ್ಟದ ಸಮಯದಲ್ಲಿ ಯಶಸ್ವಿ ಆಗಿ ನಡೆದಿದ್ದು ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಯಿತು. ಇದರ ಜೊತೆಗೆ ಮುಂಬೈ ಇಂಡಿಯನ್ಸ್ ತಂಡ ವಿಜಯಶಾಲಿ ಆಗಿ ಹೊರಹೊಮ್ಮಿ ಡೆಲ್ಲಿ ಕ್ಯಾಪಿಟಲ್ ತಂಡ ರನ್ನರ್ ಅಪ್ ಸ್ಥಾನ ಅಲಂಕರಿಸಿತು.


ಇದರ ಬೆನ್ನಲ್ಲೆ ಭಾರತೀಯ ಕ್ರಿಕೆಟ್ ನ ದಂತಕಥೆ, ದಿಗ್ಗಜ ಆಟಗಾರ, ದೀ ಗ್ರೇಟ್ ವಾಲ್, ಸಹನಾಮೂರ್ತಿ, ರಾಹುಲ್ ದ್ರಾವಿಡ್ ಅವರು ಕ್ರಿಕೆಟ್ ಅನ್ನು ಒಲಂಪಿಕ್ಸ್ ನಲ್ಲಿ ಸೇರಿಸಿದರೆ ಕ್ರಿಕೆಟ್ ಗೆ ಇನ್ನಷ್ಟು ಜನಪ್ರಿಯತೆ ಸಿಗಲಿದೆ ಎಂದು ರಾಹುಲ್ ದ್ರಾವಿಡ್ ಅವರು ಪ್ರತಿಷ್ಠಿತ ವೆಬ್ಸೈಟ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರಿಸುವುದು ದೊಡ್ಡ ಸವಾಲು ಎಂದು ಗೊತ್ತಿದೆ ಆದರೆ ಇತ್ತೀಚೆಗೆ ನಡೆದ ಐಪಿಎಲ್ ಟೂರ್ನಿ ಪ್ರೇಕ್ಷಕರು ಇಲ್ಲದೆ ಇದ್ದರೂ ಅತ್ಯಂತ ಯಶಸ್ವಿ ಆಗಿ ನಡೆದಿದ್ದು ನಾವೆಲ್ಲ ನೋಡಿದ್ದೇವೆ. 75 ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಕ್ರಿಕೆಟ್ ಅನ್ನು ಆಡುತ್ತಾ ಇದ್ದಾರೆ, ಅಲ್ಲದೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜನಪ್ರಿಯತೆ ಕಂಡುಕೊಳ್ಳುತ್ತಿದೆ, ಇವೆಲ್ಲವನ್ನೂ ನೋಡಿದ ಮೇಲೆ ಸ್ಪರ್ಧಾತ್ಮಕ ಟಿ 20 ಪಂದ್ಯವನ್ನು ಒಲಿಂಪಿಕ್ಸ್ ನಲ್ಲಿ ಸೇರಿಸ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


2018 ರಲ್ಲಿ ಐಸಿಸಿಯೂ ನಡೆಸಿದ ಸಮೀಕ್ಷೆಯ ಪ್ರಕಾರ ಶೇಕಡ 87ರಷ್ಟು ಅಭಿಮಾನಿಗಳು ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕ್ರಿಕೆಟ್ ಆಟವು 1900 ರ ಪ್ಯಾರಿಸ್ ಒಲಿಂಪಿಕ್ಸ್ ನ ಭಾಗವಾಗಿತ್ತು. 1988ರ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ, 2010 ಮತ್ತು 2014ರ ಏಷ್ಯನ್ ಗೇಮ್ಸ್ ನಲ್ಲಿ ಸಹ ಸ್ಥಾನ ಪಡೆದುಕೊಂಡಿತ್ತು , ಆದರೆ ಈ ಕ್ರೀಡಾಕೂಟಕ್ಕೆ ಬಿಸಿಸಿಐ ಭಾರತ ತಂಡವನ್ನು ಕಳಿಸಿಕೊಡಲು ಒಪ್ಪಿಗೆ ಸೂಚಿಸಿಲ್ಲ.

ಇದೇ ಮೊದಲಲ್ಲ ಈ ಹಿಂದೆ ಇಂಗ್ಲೇಂಡ್ ನ ಆಟಗಾರ ಇಯನ್ ಮಾರ್ಗನ್, ಸ್ಯಾಮ್ ಬಿಲ್ಲಿಂಗ್ಸ್ ಮತ್ತು ವೆಸ್ಟ್ಇಂಡೀಸ್ ಆಟಗಾರ ಕಾರ್ಲ್ ಬ್ರಾಥ್ವೆಟ್ ಟಿ 20ಯನ್ನೂ ಒಲಿಂಪಿಕ್ಸ್ ಗೆ ಸೇರಿಸ ಬೇಕು ಎಂದು ಅಭಿಪ್ರಾಯ ಪಟ್ಟಿದ್ದರು.ಮುಂದೆ 2022ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಹಾಗೂ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಅದೇನೇ ಇದ್ದರೂ ಕ್ರಿಕೆಟ್ ಎನ್ನುವ ಈ ಜೆಂಟಲ್ ಮೆನ್ ಗೇಮ್ ಅನ್ನು ಒಲಿಂಪಿಕ್ಸ್ ಗೆ ಸೇರಿಸುವುದರಿಂದ ಕ್ರಿಕೆಟ್ ಇನ್ನಷ್ಟು ಜನಪ್ರಿಯತೆ ಪಡೆಯುವುದರ ಜೊತೆಗೆ ಹೆಚ್ಚಿನ ಮನರಂಜನೆ ಅನ್ನು ಕ್ರಿಕೆಟ್ ಪ್ರೇಮಿಗಳಿಗೆ ಕೊಡುತ್ತದೆ ಆದಷ್ಟು ಬೇಗನೆ ಇದು ಸಾಧ್ಯವಾಗಲಿ ಕ್ರಿಕೆಟ್ ಒಲಿಂಪಿಕ್ಸ್ ಅಲ್ಲು ರಾರಜಿಸಲಿ ಎನ್ನುವುದು ಕ್ರಿಕೆಟ್ ಪ್ರಿಯರ ಆಶಯ.

LEAVE A REPLY

Please enter your comment!
Please enter your name here