ಕನ್ನಡದಲ್ಲೂ ಅಬ್ಬರಿಸುತ್ತಿದೆ ಸೈರಾ ನರಸಿಂಹ ರೆಡ್ಡಿ !

0
220

ಸೈರಾ ನರಸಿಂಹ ರೆಡ್ಡಿ, ಸುರೇಂದರ್ ರೆಡ್ಡಿ ನಿರ್ದೇಶಿಸಿದ್ದಾರೆ ಮತ್ತು ಕೊನಿಡೆಲಾ ಪ್ರೊಡಕ್ಷನ್ ಕಂಪನಿ ಬ್ಯಾನರ್ ಅಡಿಯಲ್ಲಿ ರಾಮ್ ಚರಣ್ ನಿರ್ಮಿಸಿದ್ದಾರೆ..
ತೆಲುಗು ಸೇರಿದಂತೆ ಕನ್ನಡ ತಮಿಳು ಮಲೆಯಾಳಂ ಹಿಂದಿ ಸೇರಿದಂತೆ ಐದು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ತೆಲುಗಿನ ಬಿಗ್ ಬಜೆಟ್ ಸಿನಿಮಾ..

1857 ರ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸುಮಾರು 30 ವರ್ಷಗಳ ಮೊದಲು, ಸೈ ರಾ ನರಸಿಂಹ ರೆಡ್ಡಿ ಅವರು ಬ್ರಿಟಿಷರ ವಿರುದ್ಧ ದಂಗೆ ಎದ್ದ ಸ್ವಾತಂತ್ರ್ಯ ಹೋರಾಟಗಾರ ಉಯ್ಯಲವಾಡ ನರಸಿಂಹ ರೆಡ್ಡಿ ಅವರ ಕಥೆ ಇದಾಗಿದೆ!

ಇನ್ನು ಚಿತ್ರದಲ್ಲಿ
ಮೆಗಾ ಸ್ಟಾರ್ ಚಿರಂಜೀವಿ
ಅಮಿತಾಬ್ ಬಚ್ಚನ್ (ಅತಿಥಿ ಗೋಚರತೆ)
ಜಗಪತಿ ಬಾಬು
ಸುದೀಪ್
ವಿಜಯ್ ಸೇತುಪತಿ

ನಯನತಾರಾ
ಅನುಷ್ಕಾ ಶೆಟ್ಟಿ
ತಮನ್ನಾ
ರವಿ ಕಿಶನ್
ನಿಹಾರಿಕಾ ಕೊನಿಡೆಲಾ ಹೀಗೆ ದೊಡ್ಡ ತಾರಾ ಬಳಗವೇ ಇದೆ .. !

ಬ್ರಿಟಿಷರ ವಿರುದ್ಧ ದಂಗೆ ಎದ್ದ ಸ್ವಾತಂತ್ರ್ಯ ಹೋರಾಟಗಾರ ಉಯ್ಯಲವಾಡ ನರಸಿಂಹ ರೆಡ್ಡಿ ಜೀವನಾಕಥೆಯಾಧಾರಿತ ಚಿತ್ರದಲ್ಲಿ ಚಿರಂಜೀವಿ ಸಖತ್ ಆಗಿ ನಟಿಸಿದ್ದಾರೆ.ಚಿತ್ರದ ಟೀಸರ್ ನೆನ್ನೆಯಷ್ಟೇ ಬಿಡುಗಡೆಯಾಗಿದ್ದು ಸಖತ್ ಸದ್ದು ಮಾಡುತ್ತಿದೆ ..
ವಿಶೇಷವೇನೆಂದರೆ ಕನ್ನಡದಲ್ಲಿಯೂ ಸಹ ಟೀಸರ್ ಬಿಡುಗಡೆಯಾಗಿದ್ದು ಕನ್ನಡ ಪ್ರೇಕ್ಷಕರಿಗೆ ಸಿನಿಮಾ ಮೇಲಿನ ನಿರೀಕ್ಷೆ ಮತ್ತು ಸುದೀಪ್ ಅವರನ್ನು ಕಂಡು ಫಿದಾ ಆಗಿದ್ದಾರೆ !

ಇನ್ನು ಟೀಸರ್ನಲ್ಲಿ ಉಯ್ಯಲವಾಡ ನರಸಿಂಹ ರೆಡ್ಡಿಪಾತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರು ಬೆಚ್ಚಿ ಬೀಳಿಸುವಂತೆ ಮಾಡಿದ್ದಾರೆ .. ಉಳಿದಂತೆ ಚಿತ್ರದ ಬಹುತಾರಾ ಬಳಗವನ್ನು ಟೀಸರ್ ನಲ್ಲಿ ನೋಡಬಹುದು …
ಇನ್ನು ಚಿತ್ರದ ಮೇಕಿಂಗ್ ಮತ್ತು ಬ್ಯಾಗ್ ರೋಂಡ್ ಸೌಂಡ್ ಚಿತ್ರದ ಹೈಲೈಟ್ ಅಂತಾನೇ ಹೇಳಬಹುದು !

ಇನ್ನು ಚಿತ್ರಕ್ಕೆ ಸಂಗೀತ ಮತ್ತು ಹಾಡುಗಳನ್ನು ಅಮಿತ್ ತ್ರಿವೇದಿ , ಜೂಲಿಯಸ್ ಪ್ಯಾಕಿಯಮ್ ನೀಡಿದ್ದಾರೆ!ಒಟ್ಟಾರೆ ಸೈರಾ ನರಸಿಂಹ ರೆಡ್ಡಿ ವಿಶ್ವಾದ್ಯಂತ ಅಪ್ಪಳಿಸಲು ಅಕ್ಟೋಬರ್ 2 ರಂದು ಬಿಡುಗಡೆಯಾಗುತ್ತಿದೆ ಹಾಗೂ ಕನ್ನಡ ಪ್ರೇಕ್ಷಕರು ಸಿನಿಮಾವನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ಕಾದು ನೋಡಬೇಕಿದೆ

LEAVE A REPLY

Please enter your comment!
Please enter your name here