ಪೈರಸಿ ಭೂತಕ್ಕೆ ಸಿಕ್ಕು ಮಕಾಡೆ ಮಲಗುತ್ತಿದೆ ಬಹುನಿರೀಕ್ಷಿತ ಸೈರಾ ಚಿತ್ರ ! ಇದುವರೆಗೂ ಆದ ಕಲೆಕ್ಷನ್ ಎಷ್ಟು ಗೊತ್ತಾ ?

0
63

ಅ..2ರಂದು ಪಂಚಭಾಷೆಯಲ್ಲಿ ತೆರೆಗಪ್ಪಳಿಸಿದ ಬಹು ನಿರೀಕ್ಷಿತ ಮೆಗಾಸ್ಟಾರ್ ಚಿರಂಜೀವಿ ಮುಖ್ಯಭೂಮಿಕೆಯ ಸೈರಾ ಚಿತ್ರ ಸದ್ಯ ತನ್ನ ಕಲೆಕ್ಷನ್ 60 ಕೋಟಿ ಮೇಲೆ ದಾಟಿದೆ.

18ನೇ ಶತಮಾನದಲ್ಲಿನ ನರಸಿಂಹ ರೆಡ್ಡಿ ಹೆಸರಿನ ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಚಿತ್ರ ಕಥೆಯನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಿದೆ ಚಿತ್ರತಂಡ. ಸೈರಾ ನರಸಿಂಹ ರೆಡ್ಡಿ ಈಗಾಗಲೇ 3 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಅಲ್ಲದೇ ಈ ಚಿತ್ರ ಕನ್ನಡದಲ್ಲೂ ಏಕಕಾಲದಲ್ಲಿ ರಿಲೀಸ್ ಆಗಿದ್ದು, ಕಿಚ್ಚ ಸುದೀಪ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ಬಾದ್ ಶಾ ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್ ಸೇರಿದಂತೆ ಬಹುತಾರಾಗಣವೇ ಅಭಿನಯಿಸಿರುವುದರಿಂದ ಸೈರಾ ನರಸಿಂಹ ರೆಡ್ಡಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಯೆ ಸೈರಾ ಕೇವಲ ರಿಲೀಸ್ ಆದ 2 ದಿನದಲ್ಲೇ 40 ಕೋಟಿ ಬಾಚಿಕೊಂಡಿದೆ. ಅಲ್ಲದೇ ಹಿಂದಿಯಲ್ಲಿ ಸೈರಾ ಸಿನಿಮಾ 3 ಕೋಟಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ತೆಲುಗು,ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದೆಯಲ್ಲಿ ಡಬ್ ಆಗಿ ತೆರೆಗೆ ಬಂದಿದೆ. ಎಲ್ಲಾ ಭಾಷೆಗಳಿಂದಲೂ ಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲಾ ಭಾಷೆಯ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ 70 ಕೋಟಿ ದಾಟಿದೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಸೈರಾ ಮೊದಲ ದಿನದ ಕಲೆಕ್ಷನ್ 14 ಕೋಟಿ ಆಗಿದೆ. ಒಟ್ಟಾರೆ ಮೊದಲ ದಿನ ಸೈರಾ ಸಿನಿಮಾ ಬರೋಬ್ಬರಿ 92 ಕೋಟಿ ಬಾಚಿಕೊಂಡಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಮುಂದಾಗಿದ್ದ ಇದೇ ಸೈರಾ ನರಸಿಂಹರೆಡ್ಡಿ ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಗಂಟೆಗಳಲ್ಲಿ ಪೈರಸಿಗೆ ಒಳಗಾಗಿ ಕಲೆಕ್ಷನ್ ಅನ್ನು ಹಳ್ಳ ಹಿಡಿಸಿಕೊಂಡಿದೆ. ಚಿತ್ರತಂಡ ಅಂದಾಜು ಮಾಡಿದ ಮೊತ್ತ ಈಗ ಗಗನಕುಸುಮವಾದಂತಿದೆ. ಕಳೆದೆರಡು ವರ್ಷದಿಂದ ಚಿತ್ರೀಕರಣವಾಗಿದ್ದ ಈ ಸಿನಿಮಾ ಬಹು ಕೋಟಿ ವೆಚ್ಚದಲ್ಲಿ ಚಿತ್ರೀಕರಣಗೊಂಡಿತ್ತು. ಆದರೆ ಅದೇ ಚಿತ್ರವನ್ನು ತಮಿಳು ರಾಕರ್ಸ್ ತಂಡ ಪೈರಸಿ ಮಾಡಿದೆ.

ಈ ಹಿಂದೆ ಅದೇ ವೆಬ್ ಸೈಟ್ ಗೆ ಪೈಲ್ವಾನ್, ಕುರುಕ್ಷೇತ್ರ, ಸಾಹೋ, ಕಬೀರ್ ಸಿಂಗ್, ಭಾರತ್ ಸೇರಿ ಬಹುತೇಕ ಹೊಸ ಚಿತ್ರಗಳನ್ನು ಪೈರಸಿಗೊಳಿಸಿ ಕಲೆಕ್ಷನ್ ಅನ್ನು ಹಳ್ಳಕ್ಕೆ ಬೀಳುವಂತೆ ಮಾಡಿತ್ತು. ಈ ಕುರಿತು ಚಿತ್ರತಂಡ ಸೈಬರ್ ಕ್ರೈಂ ಗೆ ದೂರು ದಾಖಲಿಸಿದ್ದರೂ ಈ ತಮಿಳು ರಾಕರ್ಸ್ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಕೆಲಸವನ್ನು ಮಾಡಿಕೊಂಡೇ ಮುನ್ನಡೆಯುತ್ತಿದ್ದಾರೆ

LEAVE A REPLY

Please enter your comment!
Please enter your name here