ಸ್ವಾಭಿಮಾನಕ್ಕಾಗಿ ಇಲ್ಲಿ ಗೆರಿಲ್ಲಾ ವಾರ್ ನಡೆದಿತ್ತು..!

0
205

ಇಲ್ಲಿ ರಾಜಕೀಯ ಹಕ್ಕುಗಳಿಗಾಗಿ ಹೋರಾಡಿದ್ದು ಎರಡು ಬೇರೆ ಬೇರೆ ಬಣ್ಣದ ಜನರು. ಆದರೆ ಹರಿದದ್ದು ಮಾತ್ರ ಕೆಂಪು ರಕ್ತ. ಆಫ್ರಿಕಾ ಖಂಡದ ದಕ್ಷಿಣದ ದೇಶ ಜಿಂಬಾಬೆ.್ವ ಇಲ್ಲಿ 15ನೇ ಶತಮಾನದಲ್ಲಿ ‘ಬಂಟು’ ಎಂಬ ಜನಾಂಗ ವಲಸೆ ಬಂದು ನೆಲೆಸಿತ್ತು ಆದರೆ 19 ನೇ ಶತಮಾನದಲ್ಲಿ ಆಗಮಿಸಿದ ಆ ಜನರಿಂದ ಇಲ್ಲಿ ರಕ್ತದ ಹೊಳೆಯೇ ಹರಿಯಿತು. ಹೌದು, 19ನೇ ಶತಮಾನದಲ್ಲಿ ಜಿಂಬಾಬ್ವೆ ಪ್ರವೇಶಿಸಿದ ಬ್ರಿಟಿಷರು ಇಲ್ಲಿ ಸೌತ್ ಆಫ್ರಿಕನ್ ಕಂಪನಿ ಆರಂಭಿಸಿದ್ದರು, ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದ ಮಿಷನರಿಗಳು ಮತಪ್ರಚಾರದಲ್ಲಿ ತೊಡಗಿದವು.

ಬ್ರಿಟಿಷರು ‘ಆಫ್ರಿಕನ್ ರೊಡಿಷಿಯಾ’ ಎಂದು ಕರೆದು ಅಲ್ಲಿ ಗಣಿಗಾರಿಕೆ ಆರಂಭಿಸಿದ್ರು. ಅಲ್ಲಿಗೆ ಜಿಂಬಾಬ್ವೆ ಪೂರ್ಣ ಹಕ್ಕು ಬ್ರಿಟಿಷರ ಕೈವಶವಾಗಿತ್ತು. ಬ್ರಿಟಿಷ್ ಆಡಳಿತ ಅಲ್ಲಿ ಬಿಳಿಯರ ಆಳ್ವಿಕೆಗೆ ಮುನ್ನಡಿ ಬರೆದಿತ್ತು. ಬಹುಸಂಖ್ಯಾತ ಕಪ್ಪು ಜನರ ಮೇಲೆ ಬಿಳಿಯ ಜನರ ದಬ್ಬಾಳಿಕೆಗಳು ಹೆಚ್ಚಾದವು. ಅಲ್ಲಿ ವರ್ಣಬೇಧ ಭಾರೀ ಸಮಸ್ಯೆಯನ್ನು ಉಂಟುಮಾಡಿತ್ತು. ಕಪ್ಪುಜನಗಳಿಗೆ ಯಾವುದೇ ಹಕ್ಕುಗಳನ್ನು ನೀಡಲು ಬ್ರಿಟಿಷ್ ಅಧಿಕಾರಿಗಳು ಒಪ್ಪಲಿಲ್ಲ. ಅಂದಿನ ಪ್ರಧಾನಿ ಇಯಾನ್ ಸ್ಮಿತ್ ಆಫ್ರಿಕನ್ ರೊಡಿಷಿಯಾ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿದ ಬಳಿಕ ಅಲ್ಲಿ ಕ್ರಾಂತಿ ಶುರುವಾಯ್ತು. ಕಪ್ಪುಜನರು ತಮ್ಮ ರಾಜಕೀಯ ಹಕ್ಕುಗಳಿಗೆ ಹೋರಾಟಕ್ಕಿಳಿದ್ರು.

1965ರ ಬಳಿಕ ಜಿಂಬಾಬ್ವೆ ನಡೆದ ಘಟನೆಗಳು ಇಡೀ ವಿಶ್ವ ಸಮುದಾಯಕ್ಕೆ ಅವಮಾನ ಮಾಡಿದಂತಿತ್ತು, ನಾಗರಿಕತೆಯ ಪಾಠ ಹೇಳುತ್ತಿದ್ದವರು ಜಿಂಬಾಬ್ವೆಯಲ್ಲಿ ನಡೆಸಿದ ಶೋಷಣೆ ಮತ್ತು ಮನುಷ್ಯರ ಕೊಲೆಗಳು ಬ್ರಿಟಿಷರ ಕೈಗಳಿಗೆ ಕೆಂಪು ರಕ್ತದ ಕಲೆಯನ್ನು ಹತ್ತಿಸಿತ್ತು. ಇಲ್ಲಿ ಜನರು ತಮ್ಮ ಹಕ್ಕುಗಳಿಗೆ ಅದರಲ್ಲೂ ಜನಾಂಗೀಯ ಘರ್ಷಣೆಯಿಂದ ರೋಸಿಹೋಗಿದ್ದರು. ಅವರು ತಮ್ಮದೇ ಆಧಿಕಾರ ಹೊಂದಲು ‘ಗೆರಿಲ್ಲಾ ವಾರ್’ ಶುರು ಮಾಡಿದ್ದರು. ಆದರು ಇಲ್ಲಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆ ವಹಿಸಿದರು ಜಿಂಬಾಬ್ವೆಯಲ್ಲಿ ಶಾಂತಿ ನೆಲಸಲಿಲ್ಲ.

ವಿವಿಧ ದೇಶಗಳು ಮಾತುಕತೆಯ ಹೆಸರಿನಲ್ಲಿ ಜಿನಿವಾದಲ್ಲಿ ಸಭೆ ಸೇರಿದ್ದರು ಆದರೆ ಅದು ಫಲಕೊಡಲಿಲ್ಲ. 1980 ಸುಮಾರಿಗೆ ಸತತ ಹೋರಾಟದ ಪ್ರಯತ್ನದಿಂದ ಜಿಂಬಾಬ್ವೆ ಸ್ವತಂತ್ರವಾಗಿ ತನ್ನದೇ ಆಡಳಿತ ಸ್ಥಾಪಿಸಿಕೊಂಡಿತು. ಬಹುಸಂಖ್ಯಾತ ಕಪ್ಪು ಜನರ ನಾಯಕನೊಬ್ಬ ಆಡಳಿತ ಚುಕ್ಕಾಣಿ ಹಿಡಿದ ಇದರಿಂದ ಜಿಂಬಾಬ್ವೆಯಲ್ಲಿ ತಮ್ಮದೇ ಅಧಿಕಾರ ಬಯಸಿದ್ದ ಕೋಟ್ಯಂತರ ಕಪ್ಪುಜನಗಳ ಆಸೆ ಈಡೇರಿದಂತಾಗಿತ್ತು. ಈ ಮೂಲಕ ಕಪ್ಪು ಜನರ ಹೋರಾಟಕ್ಕೆ ಇದೊಂದು ಸ್ಪೂರ್ತಿಯ ಪಾಠವಾಯಿತು.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here