ದೇಶ ಕಂಡ ಪ್ರಮುಕ ಮಹಿಳಾ ನಾಯಕಿ ಸುಷ್ಮಾ ಸ್ವರಾಜ್ ಅವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅಚ್ಚರಿ ಎಂದರೆ ಸಾವಿಗೂ ಮುನ್ನ ಅವರು ಮಾಡಿದ್ದ ಟ್ವೀಟ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಸಾಮಾಜಿಕ ತಾಣಗಳಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿದೆ.
ಹೌದು, ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿಯ ವಿಶೇಷ ಸ್ಥಾನಮಾನ ಹಿಂಪಡೆದ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಮಂಗಳವಾರ ಟ್ವೀಟ್ ಮಾಡಿದ್ದ ಸುಷ್ಮಾ ಸ್ವರಾಜ್ ಅವರು “ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನನ್ನ ಜೀವಮಾನದಲ್ಲಿ ಈ ದಿನವನ್ನು ನೋಡಲು ನಾನು ಬಹುದಿನಗಳಿಂದಲೂ ಕಾಯುತ್ತಿದೆ” ಎಂದು ಬರೆದುಕೊಂಡಿದ್ದರು. ಜೀವಮಾನವಿಡೀ ಕಾಯುತ್ತಿದ್ದ ಇದೇ ದಿನವೇ ಅವರು ಕಾಲನ ಕರೆಗೆ ಓಗೊಟ್ಟಿದ್ದು ಕಾಕತಾಳಿಯವೇ ಸರಿ.
ಹೋರಾಟದ ಮೂಲಕವೇ ರಾಜಕೀಯ ಬದುಕು ಕಟ್ಟಿಕೊಂಡಿದ್ದ ಸುಷ್ಮಾ ಸ್ವರಾಜ್ ಅವರು ದೇಶದ ಧಿಮಂತ ಮಹಿಳಾ ರಾಜಕಾರಣಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ಕಳೆದ ಬಾರಿಯ ಮೋದಿ ಸರ್ಕಾರದಲ್ಲಿ ವಿದೇಶಾಂಗ ಸಚಿವೆಯಾಗಿ ಅವರು ಮಾಡಿದ ಕಾರ್ಯ ಸದಾ ಸ್ಮರಣೀಯ. ಜನಸ್ನೇಹಿಯಾಗಿ ಸರ್ಕಾರವನ್ನು ರೂಪಿಸುವಲ್ಲಿ ಅವರ ಪಾತ್ರ ಹಿರಿದಾಗಿದೆ. ಇಂತಹ ಧಿಮಂತ ನಾಯಕಿಯ ಆತ್ಮಕ್ಕೆ ಆ ದೇವರು ಶಾಂತಿ ದಯಪಾಲಿಸಲಿ.