ರಾಷ್ಟ್ರ ರಾಜಕಾರಣದ ಧೀಮಂತ ನಾಯಕಿ, ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಇನ್ನು ನೆನಪು ಮಾತ್ರ. ಅವರಿಲ್ಲದ ಈ ಹೊತ್ತಲ್ಲಿ ಅವರ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಳ್ಳುವ ಕೆಲಸವಾಗುತ್ತಿದೆ. ಸುಷ್ಮಾ ಅವರ ನೆನಪಿನಲ್ಲಿ ಅವರ ಸಾಧನೆಗಳ ಮೆಲುಕು ಹಾಕುವ ಕಾರ್ಯವಾಗುತ್ತಿದೆ.
ಸುಷ್ಮಾ ಸ್ವರಾಜ್ ಭಾರತೀಯರ ಜನಪ್ರಿಯತೆಯನ್ನು ಮಾತ್ರವಲ್ಲದೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಜನರ ಪ್ರೀತಿಗೂ ಪಾತ್ರರಾಗಿದ್ರು. ಅದಕ್ಕೆ ಸಾಕ್ಷಿ ಸೋಶಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ್ದು..! ಟ್ವಿಟರ್ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ್ದ ಮಹಿಳಾ ರಾಜಕಾರಣಿಗಳ ಪಟ್ಟಿಯಲ್ಲಿ ನಮ್ಮ ಸುಷ್ಮಾ ಸ್ವರಾಜ್ ನಂಬರ್ 1 ಸ್ಥಾನದಲ್ಲಿದ್ರು.
2018ರಲ್ಲಿ ಟ್ವಿಪ್ಲೊಮಸಿ ಸಂಸ್ಥೆ ಮಾಡಿದ ಸೋಶಿಯಲ್ ಮೀಡಿಯಾ ಸರ್ವೆ ಈ ವಿಷ್ಯವನ್ನು ಹೇಳಿದೆ. ಟ್ವಿಟರ್ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ನಾಯಕರ ಪಟ್ಟಿಯನ್ನು ಟಿಪ್ಲೊಮಸಿ ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ ಮಹಿಳಾ ರಾಜಕಾರಣಿಗಳ ಪೈಕಿ 13.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಸುಷ್ಮಾ ಸ್ವರಾಜ್ ಮೊದಲ ಸ್ಥಾನದಲ್ಲಿದ್ರು.
10 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಜೋರ್ಡಾನ್ನ ರಾಣಿ ಕ್ವೀನ್ ರಾನಿಯಾ ಅಲ್ ಅಬ್ದುಲ್ಲಾ ಎರಡನೇ ಸ್ಥಾನದಲ್ಲಿದ್ರು. ಪುರುಷ ಮತ್ತು ಮಹಿಳಾ ನಾಯಕರ ಒಟ್ಟಾರೆ ಪಟ್ಟಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಸ್ಥಾನದಲ್ಲಿ, ನಮ್ಮ ಪ್ರಧಾನಿ ನರೇಂದ್ರ ಮೋದಿ ತೃತೀಯ ಸ್ಥಾನದಲ್ಲಿಯೂ ಹಾಗೂ ಸುಷ್ಮಾ ಸ್ವರಾಜ್ 8ನೇ ಸ್ಥಾನದಲ್ಲಿಯೂ ಇದ್ರು.