‘ನದಿ’ಗಳ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿಯ ಸಂಗತಿಗಳು..!

0
104

• ಹೆಚ್ಚು ಪ್ರಮಾಣದ ಹರಿಯುವ ನೀರಿನ ಒಂದು ಸಮೂಹಕ್ಕೆ ನದಿ ಎನ್ನಬಹುದು.

• ನದಿಗಳು ಸರೋವರದಲ್ಲಿ, ಬುಗ್ಗೆ ಅಥವಾ ಊಟೆಯಲ್ಲಿ ಅಥವಾ ಕೆಲವು ಚಿಕ್ಕ ಕೊಳಗಳ ಸಮ್ಮಿಲನದಲ್ಲಿ ಉದ್ಭವಿಸುತ್ತವೆ.

• ಭೂಖಂಡದ ಯಾ ದ್ವೀಪದ ಮೈಮೇಲೆ ಹರಿಯುವ ನೈಸರ್ಗಿಕ ಮೂಲದ ಜಲಪ್ರವಾಹ (ರಿವರ್). ಸ್ಥಲಾಕೃತಿಕವಾಗಿ ಸಂಬಂಧಿತವಾಗಿರುವ (ಟೋಪೊಗ್ರಾಫಿಕಲಿ ಕನೆಕ್ಟೆಡ್) ನೆಲದ ಹರವಿನಿಂದ ನೀರನ್ನು ಬಸಿಯುವ ನದೀ ವ್ಯವಸ್ಥೆಯ ಭಾಗವೇ ನದಿ. ಈ ಹರವಿಗೆ ನದೀಪಾತ್ರವೆಂದು ಹೆಸರು.

• ನೀರು, ಮಂಜು, ಹಿಮ ಮೊದಲಾದ ಜಲರೂಪಗಳಲ್ಲಿ ನದೀವ್ಯವಸ್ಥೆ ಆರಂಭವಾಗುವುದು. ಈ ಜಲರೂಪಗಳು ಒಡನೆ ನೆಲದ ಮೇಲಿನ ಪ್ರವಾಹವಾಗಿ ಹರಿದುಹೋಗಬಹುದು ಅಥವಾ ಭೂಗತಪ್ರವಾಹಗಳಾಗಿ ಹರಿಯಬಹುದು.

• ನದಿಗಳಿಗೆ ಮಳೆಯ ಪ್ರಮಾಣದ ಜತೆಗೆ ಅವು ಹರಿವ ನೆಲಭಾಗದ ಮೇಲ್ಮೈ ಲಕ್ಷಣವೂ ಅಷ್ಟೆ ಮುಖ್ಯವಾದುದು.

• ಉಗಮದಿಂದ ತೊಡಗಿ ಸಾಗರಸಂಗಮದವರೆಗೆ ನದಿ ಮಾಡುವ ಕೆಲಸಗಳು ಹಲಬಗೆಯವು. ಭೂವ್ಯಾಪಾರಕಾರಕಗಳ ಪೈಕಿ ನದಿಗೆ ಅಗ್ರಸ್ಥಾನ. ಇದರ ಕಾರ್ಯಾಚರಣೆ ಬಹು ವ್ಯಾಪಕ ಹಾಗೂ ಸತತ. ನದಿ ಹರಿಯುವ ಪ್ರದೇಶದ ದಿಬ್ಬ, ಬೆಟ್ಟ, ಕಣಿವೆ, ಜಲಪಾತ, ಮೈದಾನ ಮೊದಲಾದ ಭೂಸ್ವರೂಪಗಳಲ್ಲೆಲ್ಲ ನದಿಯ ಕೈವಾಡವನ್ನು ಗುರುತಿಸಬಹುದು. ನೆಲಮಟ್ಟ ಸಮುದ್ರ ಮಟ್ಟಕ್ಕಿಂತ ಸುಮಾರು 0.8 ಕಿ.ಮೀ ನಷ್ಟು ಹೆಚ್ಚಾಗಿದೆ. ಈ ಅಂತರವನ್ನು ಭೂಸವೆತದಿಂದ ಆದಷ್ಟು ಕಡಿಮೆ ಮಾಡುವುದೇ ನದಿಯ ಮುಖ್ಯ ಕೆಲಸ.

• ನದಿ ಹುಟ್ಟುವುದು ಸಾಮಾನ್ಯವಾಗಿ ಬೆಟ್ಟ ಅಥವಾ ಪರ್ವತಪ್ರದೇಶಗಳಲ್ಲಿ. ಇದೇ ನದಿಯ ಮೂಲ. ಇದಕ್ಕೆ ಮಳೆಯ ನೀರು ಅಥವಾ ಹಿಮಗಡ್ಡೆಗಳೇ ಆಶ್ರಯ. ಇಲ್ಲಿ ನದಿಯನ್ನು ಗುರುತಿಸುವುದು ಬಲು ಕಷ್ಟ. ಬೆಟ್ಟದ ಮೇಲೆ ಬಿದ್ದ ಮಳೆಯ ಅಥವಾ ಹಿಮಗಡ್ಡೆ ಕರಗಿ ಉಂಟಾದ ನೀರು ಇಳಿಜಾರಿನ ಕೊರಕಲುಗಳಲ್ಲಿ ಝರಿಗಳಂತೆ ಹರಿದು ಕೆಳಗಿಳಿಯುತ್ತದೆ.

• ಇನ್ನು ಭಾರತದಲ್ಲಿ ಹಿಮಾಲಯದ ನದಿಗಳಿಗೆ ಬಲುಮಟ್ಟಿಗೆ ಹಿಮಗಡ್ಡೆಗಳೇ ಆಶ್ರಯ. ದಕ್ಷಿಣ ಭಾರತದ ನದಿಗಳಿಗೆ ಮಳೆಯ ನೀರೇ ಮೂಲ.

• ನದಿಯ ಕಾರ್ಯ ಅದು ಹರಿಯುವ ವೇಗ ಮತ್ತು ಅದರ ನೀರಿನ ಪ್ರಮಾಣವನ್ನು ಅವಲಂಬಿಸಿದೆ. ಇವು ಹೆಚ್ಚಿದಷ್ಟೂ ಆದರೆ ಕ್ರಿಯಾಶಕ್ತಿಯೂ ತೀವ್ರಗೊಳ್ಳುವುದು. ವೇಗ ಮುಖ್ಯವಾಗಿ ಅದು ಹರಿವ ನೆಲಭಾಗದ ಇಳಿಜಾರನ್ನು ಅನುಸರಿಸಿದೆ. ನದಿಯ ಮೂಲದಿಂದ ತೊಡಗಿ ಸಮುದ್ರವನ್ನು ಸೇರುವ ಮುಖದವರೆಗೆ ಪಾತ್ರದ ಮಟ್ಟವನ್ನು ಗುರುತಿಸಿದಲ್ಲಿ ಅದು ಕ್ರಮೇಣ ಕಡಿಮೆ ಆಗುತ್ತ ಹೋಗಿ ಮುಖದ ಭಾಗದಲ್ಲಿ ಸಮುದ್ರಮಟ್ಟಕ್ಕೆ ಸಮವಾಗುತ್ತದೆ. ಇದೇ ನದಿಯ ಇಳಿಜಾರು ಅಥವಾ ಓಟ. ನದಿ ಹರಿಯುವ ಪ್ರತಿ ಏಕಮಾನ ಉದ್ದಕ್ಕೂ ಉಂಟಾಗುವ ತಗ್ಗೇ ಇಳಿಜಾರು. ಇದು ಒಂದೇ ತೆರನಾಗಿರುವುದಿಲ್ಲ.

• ದಕ್ಷಿಣ ಭಾರತದ ಅನೇಕ ನದಿಗಳು ಈ ಮಿತಿಯನ್ನು ಮುಟ್ಟಿವೆ. ನದಿಯ ಕ್ರಿಯಾಶಕ್ತಿಗೆ ಅನುಗುಣವಾಗಿ ಅದರಲ್ಲಿ ಮೂರು ಹಂತಗಳನ್ನು ಗುರುತಿಸಬಹುದು: ಹರೆಯ, ಇಳಿಹರೆಯ, ಮುಪ್ಪು. ಯಾವುದೇ ನದಿ ಒಂದೇ ವೇಳೆ ಈ ಎಲ್ಲ ಹಂತಗಳನ್ನು ಅದರ ಪಾತ್ರದ ವಿವಿಧ ಭಾಗಗಳಲ್ಲಿ ತೋರಿಸುವುದು.

• ಸವೆತದ ಸಾಮಥ್ರ್ಯ ಹರೆಯದಲ್ಲಿ ಅಧಿಕವಾಗಿದ್ದು ನೀರು ರಭಸದಿಂದ ಪ್ರವಹಿಸಿ ಬೆಟ್ಟಗಳನ್ನೇ ಕೊರೆದು ನುಚ್ಚುನೂರು ಮಾಡಬಲ್ಲದು. ಈ ಹಂತದ ಪಾತ್ರ ಕಿರಿದು ಹಾಗೂ ಆಳವಾಗಿರುತ್ತದೆ. ಕಡಿದಾದ ದಂಡೆ, ಕಂದರ ಮತ್ತು ಜಲಪಾತಗಳು ಸಾಮಾನ್ಯವಾಗಿದ್ದು ನದಿ ಸದಾ ಭೋರ್ಗರೆಯುತ್ತಿರುವುದು.

LEAVE A REPLY

Please enter your comment!
Please enter your name here