ಡಿಸಿಎಂ ಹುದ್ದೆಗೆ ಅಚ್ಚರಿಯ ಹೆಸರುಗಳು, ಬಿಎಸ್‍ವೈಗೆ ಬಿಗ್ ಶಾಕ್..!

0
1008

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ 17 ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೇ ಇದೀಗ ಖಾತೆ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ. ಈ ನಡುವೆ ಸಿಎಂ ಯಡಿಯೂರಪ್ಪ ಅವರಿಗೆ ಮತ್ತೊಂದು ಶಾಕ್ ಕೊಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.

ಹೌದು, ಬಿ.ಎಸ್.ಯಡಿಯೂರಪ್ಪನವರಿಗೆ ಶಾಕ್ ನೀಡಲು ಡಿಸಿಎಂ ಹುದ್ದೆಯ ಲಿಸ್ಟ್ ನಲ್ಲಿ ಅಚ್ಚರಿಯ ಹೆಸರುಗಳನ್ನು ಬಿಜೆಪಿ ಹೈಕಮಾಂಡ್ ತೇಲಿಬಿಟ್ಟಿದೆ. ಬಿಜೆಪಿ ಸರ್ಕಾರದಲ್ಲಿ ಮೂವರು ಡಿಸಿಎಂಗಳಿಗೆ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಡಿಸಿಎಂ ಹುದ್ದೆಗೆ ನೂತನ ಪಟ್ಟಿ ರಚಿಸುವಂತೆ ಸೂಚಿಸಿದ್ದಲ್ಲದೇ, ಆ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಅಚ್ಚರಿಯ ವ್ಯಕ್ತಿಯನ್ನು ಸೇರಿಸುವ ಮೂಲಕ, ಯಡಿಯೂರಪ್ಪನವರಿಗೆ ಶಾಕ್ ನೀಡಿದೆ.

ಹೌದು, ಹೈಕಮಾಂಡ್ ಮಾಡಿರುವ ಡಿಸಿಎಂ ಲಿಸ್ಟ್ ನಲ್ಲಿ ಡಾ.ಅಶ್ವತ್ಥ್ ನಾರಾಯಣ್, ಗೋವಿಂದ ಕಾರಜೋಳ, ಲಕ್ಷ್ಮಣ್ ಸವದಿ ಹೆಸರುಗಳು ನೂತನ ಲಿಸ್ಟ್ ನಲ್ಲಿ ಸೇರ್ಪಡೆಗೊಂಡಿವೆ. ಈ ಲಿಸ್ಟ್ ಯಡಿಯೂರಪ್ಪನವರಿಗೆ ಶಾಕ್ ನೀಡಿದೆ. ಇನ್ನೊಂದೆಡೆ ರಾಜ್ಯದ ಪ್ರಮುಖ ಲಿಂಗಾಯತ ನಾಯಕರ ಹೆಸರು ಲಿಸ್ಟ್ ಮಾಡುವಂತೆ ಸೂಚನೆ ನೀಡಿದ್ದು, ಇಂತಹ ಪಟ್ಟಿಯಲ್ಲಿ ಯಡಿಯೂರಪ್ಪ, ಶೆಟ್ಟರ್ ಹೊರತುಪಡಿಸಿ, ಪಟ್ಟಿ ಮಾಡುವಂತೆ ಸೂಚಿಸಿದೆಯಂತೆ. ಈ ಬೆಳವಣಿಗೆ ಕೂಡಾ ಭಾರೀ ಸಂಚಲನ ಹುಟ್ಟಿಸಿದೆ. ಈ ಮೂಲಕ ಯಡಿಯೂರಪ್ಪಗೆ ಪರ್ಯಾಯ ಲಿಂಗಾಯತ ನಾಯಕರಿಗೆ ಹೈಕಮಾಂಡ್ ಅವಕಾಶ ಮಾಡಿಕೊಡುತ್ತಿದೆ ಎಂದು ಹೇಳಲಾಗುತ್ತಿದೆ. ಹೈಕಮಾಂಡ್‍ನ ಈ ನಡೆ ಯಡಿಯೂರಪ್ಪನವರ ಬೆಂಬಲಿಗರನ್ನು ಕೆರಳಿಸಿದೆ.

LEAVE A REPLY

Please enter your comment!
Please enter your name here