ವಿಶ್ವದ ಅತಿ ಚಿಕ್ಕ ದೇಶಗಳ ಅಚ್ಚರಿಯ ಮಾಹಿತಿ..!

0
140

ವಿಶ್ವದಲ್ಲಿ ನೂರಾರು ದೇಶಗಳಿವೆ. ಆದರೆ ಕೆಲವೊಂದು ದೇಶ ಎಷ್ಟು ಚಿಕ್ಕದಾಗಿದೆ ಎಂಬುದನ್ನು ಕೇಳಿದರೆ ಆಶ್ಚರ್ಯವಾಗುತ್ತದೆ. ವಿಶ್ವದ ಅತಿ ಚಿಕ್ಕ ದೇಶಗಳ ಬಗ್ಗೆ ಇಲ್ಲಿದೆ ನೋಡಿ ಅಚ್ಚರಿ ಮಾಹಿತಿ.

ಯುರೋಪ್ ಖಂಡದಲ್ಲಿರುವ ವ್ಯಾಟಿಕನ್ ಸಿಟಿ ದೇಶವನ್ನು ವಿಶ್ವದ ಅತ್ಯಂತ ಚಿಕ್ಕ ದೇಶ. ಈ ದೇಶ ಕೇವಲ 44 ಹೆಕ್ಟೇರ್ ಭೂಮಿ ಹೊಂದಿದೆ. ಈ ದೇಶದ ಜನಸಂಖ್ಯೆ ಕೇವಲ 840 ಮಾತ್ರ. ಇನ್ನು ವ್ಯಾಟಿಕನ್ ನಗರದ ನಂತರ, ಮೊನಾಕೊ ವಿಶ್ವದ ಎರಡನೇ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ದೇಶ. ಈ ದೇಶದ ಒಟ್ಟು ಜನಸಂಖ್ಯೆಯು ಸುಮಾರು 38,499..!

ಇನ್ನು ನೌರು ಪೆಸಿಫಿಕ್ ಮಹಾಸಾಗರದಲ್ಲಿರುವ ಒಂದು ದ್ವೀಪ ದೇಶ. ಈ ದೇಶದ ವಿಸ್ತೀರ್ಣ 21.3 ಚದರ ಕಿಲೋಮೀಟರ್. 2016 ರ ಜನಸಂಖ್ಯಾ ಗಣತಿಯ ಪ್ರಕಾರ, ಈ ದೇಶದ ಒಟ್ಟು ಜನಸಂಖ್ಯೆ ಸುಮಾರು 13,049 ಆಗಿದೆ. ಪಶ್ಚಿಮ ಯುರೋಪಿನಲ್ಲಿರುವ ಲಿಚ್ಟೆನ್‍ಸ್ಟೈನ್ ವಿಶ್ವದ ಆರನೇ ಚಿಕ್ಕ ದೇಶ. ಸ್ವಿಟ್ಜಲೆರ್ಂಡ್ ಮತ್ತು ಆಸ್ಟ್ರಿಯಾ ದೇಶದ ಜೊತೆ ಗಡಿಯನ್ನು ಹಂಚಿಕೊಂಡಿರುವ ಈ ದೇಶದ ಜನಸಂಖ್ಯೆಯು ಸುಮಾರು 37,666. ಇನ್ನು ಮಾಲ್ಡೀವ್ಸ್- ವಿಶ್ವದ ಸಣ್ಣ ದೇಶಗಳಲ್ಲಿ ಎಣಿಸಲಾಗಿದ್ದರೂ, ಪ್ರವಾಸೋದ್ಯಮದ ದೃಷ್ಟಿಯಿಂದ ಈ ದೇಶ ವಿಶ್ವ ಪ್ರಸಿದ್ಧ. ‘ಹಿಂದೂ ಮಹಾಸಾಗರದ ಮುತ್ತು’ ಎಂದೂ ಕರೆಯುವ ಈ ದೇಶದ ಜನಸಂಖ್ಯೆ 4 ಲಕ್ಷ 17 ಸಾವಿರ.

LEAVE A REPLY

Please enter your comment!
Please enter your name here