ಸುಮಲತಾರವರ ಮನೆಗೆ ಸರ್ಪೈಸ್ ಭೇಟಿ ನೀಡಿದ ಯಶ್ ಫ್ಯಾಮಿಲಿ.!

0
148
Loading...

ರಾಕಿಂಗ್ ಸ್ಟಾರ್ ಯಶ್ ಸದ್ಯ ‘ಕೆಜಿಎಫ್ ಚಾಪ್ಟರ್ 2’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇತ್ತೀಚೆಗಷ್ಟೇ ಯಶ್ ಹಾಗೂ ರಾಧಿಕಾ ಮತ್ತು ಐರಾ ಮೂವರು ಕೂಡ ನಟಿ ಹಾಗೂ ಸಚಿವೆ ಸುಮಲತಾ ಅಂಬರೀಶ್ ರವರ ಮನೆಗೆ ಭೇಟಿ ನೀಡಿದ್ದಾರೆ. ಹೌದು, ಸುಮಲತಾರವರು ಮಂಡ್ಯ ಚುನಾವಣೆಯಲ್ಲಿ ಗೆದ್ದ ಬಳಿಕ ರಾಜಕೀಯದಲ್ಲಿ ನಿರತರಾಗಿದ್ದರೇ, ಇತ್ತ ಯಶ್ ‘ಕೆಜಿಎಫ್ ಚಾಪ್ಟರ್ 2’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ವಿಶೇಷವೆಂದರೇ, ಇತ್ತೀಚೆಗಷ್ಟೇ ಯಶ್ ಫ್ಯಾಮಿಲಿ ಸುಮಲತಾರವರ ಮನೆಗೆ ಭೇಟಿ ನೀಡಿದ್ದು, ಕುಶಲೋಪರಿ ನಡೆಸಿದ್ದಾರೆ.

ಈ ಫೋಟೋಗಳನ್ನು ಸ್ವತಃ ಸುಮಲತಾರವರು ತಮ್ಮ ಸೋಶೀಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಯಶ್ ರವರ ಬಾಂಧವ್ಯ ತುಂಬಾ ಗಟ್ಟಿಯಾಗಿದೆ. ತಮ್ಮ ಪ್ರತಿಯೊಂದು ಹೆಜ್ಜೆಗಳಲ್ಲಿ ಬೆನ್ನುಲುಬಾಗಿ ಇದ್ದ ಅಂಬಿಯವರನ್ನು ಯಶ್ ಸದಾಕಾಲ ಪೂಜಿಸುತ್ತಿರುತ್ತಾರೆ. ಅಂಬಿಯವರ ಮರಣದ ಸಂದರ್ಭದಲ್ಲಿ ಪ್ರತಿಯೊಂದು ಕೆಲಸವನ್ನು ಮನೆಮಗನಂತೆ ನಿಂತು ನೋಡಿಕೊಂಡ ಯಶ್ ಸುಮಲತಾರವರಿಗೆ ತುಂಬಾ ಅಚ್ಚು ಮೆಚ್ಚು.

Loading...

LEAVE A REPLY

Please enter your comment!
Please enter your name here