ಆರ್ ಆರ್ ನಗರ ಎಲೆಕ್ಷನ್ ಗೆ ಮುನಿರತ್ನಗೆ ಸುಪ್ರೀಂ ಗ್ರೀನ್ ಸಿಗ್ನಲ್

0
37

ಬೆಂಗಳೂರು: ಆರ್ ಆರ್ ನಗರದಲ್ಲಿ ನಕಲಿ ಮತದಾರರ ಗುರುತಿನ ಚೀಟಿ ಸಿಕ್ಕಿದ್ದು ಆಕಸ್ಮಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುವ ಮೂಲಕ ಮುನಿರತ್ನಗೆ ಬಿಗ್ ರಿಲೀಫ್ ನೀಡಿದೆ. ಅರ್ಜಿ ವಿಚಾರಣೆ ನಡೆಸಿರುವ ಮುಖ್ಯ ನ್ಯಾ. ಎಸ್ ಎ ಬೋಬ್ಡೆ ನೇತೃತ್ವದ ತ್ರಿ ಸದಸ್ಯ ಪೀಠ ಚುನಾವಣೆ ಗೆ ತಡೆ ನೀಡಲು ನಿರಾಕರಿಸಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಆರ್ ಆರ್ ನಗರ ಆಕಾಂಕ್ಷಿ ಮುನಿರತ್ನ, 2018 ರಲ್ಲಿ ನಕಲಿ ಗುರುತಿನ ಚೀಟಿ ಅವ್ಯವಹಾರವಾಗಿದೆ ಎಂದು ಹೈಕೋರ್ಟ್ ನಲ್ಲಿ ಪ್ರಕರಣ ದಾಖಲು ಆಗಿತ್ತು. ಹೈಕೋರ್ಟ್ ನಲ್ಲಿ ನನ್ನ ಪರವಾಗಿ ಬಂತು. ಬಳಿಕ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ರು. ಆದರೆ ಸುಪ್ರೀಂಕೋರ್ಟ್ ಆ ಅರ್ಜಿ ಸತ್ಯಕ್ಕೆ ದೂರವಾಗಿದ್ದು ಎಂದು ಹೇಳುವ ಮೂಲಕ ನ್ಯಾಯದ ಪರ ತೀರ್ಪು ನೀಡಿದ್ದಾರೆ ಎಂದು ಸಂತಸ ಹಂಚಿಕೊಂಡರು.

“ಅನುಭವಿಸಿದ ನೋವು ನನಗೆ ಗೊತ್ತು ”

ಬಿಜೆಪಿ ಪಕ್ಷಕ್ಕೆ 14 ಜನ ಒಂದೇ ವೇದಿಕೆಯಲ್ಲಿ ಸೇರ್ಪಡೆ ಆಗಿದ್ದೇವೆ.
ಟಿಕೇಟ್ ಸ್ವಲ್ಪ ವಿಳಂಬ ಆಗಿರಬಹುದು. ಆದರೆ ನಮ್ಮ ನಾಯಕರು ತೀರ್ಮಾನ ಮಾಡ್ತಾರೆ. ಪ್ರತಿ ಬಾರಿ ನಕಲಿ ವೊಟರ್ ಐಡಿ ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರ ಆದಾಗ ನೋವನ್ನು ಅನುಭವಿಸಿದ್ದೇನೆ.
ನಾನು ಅನುಭವಿಸಿದ ನೋವು ನನಗೇ ಗೊತ್ತು. ಇವತ್ತು 25000 ಮತಗಳು ನನ್ನ ಪರ ಬಂದಿದೆ ಎಂದು ಕೋರ್ಟ್ ಹೇಳಿದೆ. ಇವತ್ತು ಸ್ಪಷ್ಟೀಕರಣ ಕೊಡ್ತೇನೆ, ಚುನಾವಣೆ ಆಯೋಗದಿಂದ ಹಿಡಿದು ಎಲ್ಲಾ ತನಿಖೆಯಲ್ಲೂ ಒಂದು ಮತವೂ ನಕಲಿ ಇಲ್ಲ ಎಂದು ಹೇಳಿದ್ದಾರೆ ಎಂದರು.

“ತುಳಸಿ ಮೇಲೆ ವೈಯಕ್ತಿಕ ದ್ವೇಷ ಇಲ್ಲ”

ತಂದೆ ಮಗ, ಅಣ್ಣ ತಂಮ್ಮಂದಿರು, ಸ್ನೇಹಿತರು ಕೆಲವು ಸಲ ಜಗಳ ಆಡ್ತಾರೆ. ಮತ್ತೆ ಒಂದಾಗ್ತಾರೆ. ಹಾಗೆ ನಾವು ಒಂದೇ ಪಕ್ಷದಲ್ಲಿ ಇದ್ದೇವೆ ಒಟ್ಟಾಗಿ ಕೆಲಸ ಮಾಡ್ತೀವಿ. ಮುನಿರಾಜು ಗೌಡ ಅವರು ಆ ಸಂದರ್ಭದಲ್ಲಿ ಆ ನಿರ್ಧಾರ ತೆಗೆದುಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇದೆಲ್ಲಾ ಸಹಜ. ವೈಯಕ್ತಿಕ ದ್ವೇಷ ಏನು ಇಲ್ಲ, ಅವರಿಗೂ ಮುಂದೆ ಒಳ್ಳೆಯದಾಗಲಿ ಎಂದು ತಿಳಿಸಿದರು.

ಕಾಂಗ್ರೆಸ್ ಮಹಿಳಾ ಅಭ್ಯರ್ಥಿ ವಿಚಾರದ ಕುರಿತು ಮಾತನಾಡಿದ ಅವರು, ಚುನಾವಣೆಯಲ್ಲಿ ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು. ಆ ಹೆಣ್ಣು ಮಗಳ ಬಗ್ಗೆ ನಾನು ಏನು ಮಾತನಾಡೊಲ್ಲ, ಈ ಹಿಂದೆ ಸ್ಪರ್ಧೆ ಮಾಡಿದ್ರೇ ಏನಾದ್ರು ಹೇಳಬಹುದಿತ್ತು. ನನಗಿರುವ ಒಂದೇ ಗುರಿ, ಉಳಿದಿರುವ ಕೆಲಸ ಆಗಬೇಕು ಅಷ್ಟೇ. ಟಿಕೇಟ್ ವಿಚಾರವಾಗಿ ಪಕ್ಷದ ತೀರ್ಮಾನಕ್ಕೆ ಬದ್ದವಾಗಿರ್ತೇನೆ ಎಂದರು.

ಇನ್ನು ಚುನಾವಣೆ ದಿನಾಂಕ ಪ್ರಕಟವಾಗಿದ್ದು ಅಕ್ಟೋಬರ್ 16ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಹೀಗಾಗಿ ನಿಗದಿತ ವೇಳಾಪಟ್ಟಿಯಂತೆ ನವೆಂಬರ್ 3ಕ್ಕೆ ಆರ್ ಆರ್ ನಗರದಲ್ಲಿಯೂ ಉಪಚುನಾವಣೆ ನಡೆಯಲಿದೆ. ಕೋರ್ಟ್ ಆದೇಶದಿಂದ ರಿಲೀಫ್ ಆಗಿರುವ ಮುನಿರತ್ನ ಆರ್ ಆರ್ ನಗರದಲ್ಲಿ ಸ್ಪರ್ಧಿಸುವ ಹಾದಿ ಸುಗಮವಾಗಿದೆ.

LEAVE A REPLY

Please enter your comment!
Please enter your name here