ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪು ಎತ್ತಿ ಹಿಡಿದ ಸುಪ್ರೀಂ ಕೋರ್ಟ್: ಮಲ್ಯಗೆ ಮತ್ತೊಮ್ಮೆ ಮುಖಭಂಗ

0
115

ಕಿಂಗ್ ಪಿಷರ್ ಏರ್‍ಲೈನ್ಸ್‍ಗಾಗಿ ಸಾಲ ಪಡೆದು ತೀರಿಸಲಾಗದೇ ದೇಶದಿಂದ ತಲೆಮರೆಸಿಕೊಂಡಿದ್ದ ಉದ್ಯಮಿ ವಿಜಯ್ ಮಲ್ಯ ಅವರ ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ ಸಂಸ್ಥೇಯ ಮೇಲೆ ಪಡೆದ ಸಾಲದ ಬಾಕಿ ವಸೂಲಿಗಾಗಿ ಸಂಸ್ಥೇಯನ್ನು ಬರ್ಖಾಸ್ತು ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮಲ್ಯಪರ ವಕೀಲರು ಸಲ್ಲಿಸಲಾಗಿದ ಅರ್ಜಿಯನ್ನು ಸುಪ್ರೀಕೋರ್ಟ್ ಸೋಮವಾರ ಪರಿಶೀಲಿಸಿ ಈ ತೀರ್ಪು ನೀಡಿದೆ. ಈ ತೀರ್ಪಿನಿಂದ ಮಲ್ಯರಿಗೆ ತೀರ್ವ ಮುಖಭಂಗವಾಗಿದೆ.

ಇದುವರೆಗೆ ಸುಮಾರು 3600 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲಾಗಿದ್ದು, ಮಲ್ಯ ಮತ್ತು ಯುಬಿಎಚ್‍ಎಲ್‍ನಿಂದ ಇನ್ನೂ 11000 ಕೋಟಿ ರೂಪಾಯಿ ಬಾಕಿ ವಸೂಲಿ ಮಾಡಬೇಕಿದೆ ಎಂದು ಎಸ್‍ಬಿಐ ನೇತೃತ್ವದ ಬ್ಯಾಂಕ್‍ಗಳ ಸಮೂಹವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಕೋರ್ಟ್‍ಗೆ ತಿಳಿಸಿದರು. ಜಾರಿ ನಿರ್ದೇಶನಾಲಯಗಳು ಕಂಪನಿಯ ಆಸ್ತಿಗಳನ್ನು ಮುಟ್ಟುಗೊಳು ಹಾಕಿಕೊಳ್ಳ ಬಾರದು. ಏಕೆಂದರೆ ಅವುಗಳ ಋಣಭಾರದಲ್ಲಿರುವ ಆಸ್ತಿಗಳಾಗಿದ್ದು ಅವುಗಳ ಮೇಲೆ ಜಾರಿ ನಿರ್ದೇಶನಾಲಯಗಳಿಗಿಂಗ ಬ್ಯಾಂಕ್‍ಗಳಿಗೆ ಹೆಚ್ಚಿನ ಅಧಿಕಾರವಿದೆ ಅದ್ದರಿಂದ ಬ್ಯಾಂಕ್‍ಗಳಿಗೆ ಆಗಿರುವ ಅನ್ಯಾಯವನ್ನು ಸರಿದೂಗಿಸಿ ಕೊಳ್ಳಲು ಅನುವು ಮಾಡಿಕೊಡಬೇಕೆಂದು ವಕೀಲ ರೋಹಟ್ಗಿ ವಾದಿಸಿದರು.

ಹೈಕೋರ್ಟ್ 2018ರಲ್ಲಿ ನೀಡಿದ್ದ ತೀರ್ಪಿನ ವರದಿ:
2018 ಫೆಬ್ರವರಿಯಲ್ಲಿ ಬ್ಯಾಂಕ್‍ಗಳು ಹೂಡಿದ ಕೇಸಿನ ಅನ್ವಯ ಹೈಕೋರ್ಟ್ ಆದೇಶದ ಪ್ರಕಾರ, ಯುಎಚ್‍ಬಿಎಲ್ ಸಾಲದಾರಿಗೆ ನೀಡಬೇಕಿರುವ ಒಟ್ಟು ಬಾಕಿ ಸುಮಾರು 7000 ಕೋಟಿ ರೂಪಾಯಿ ಆಗಿದೆ. ವಿವಿಧ ಬ್ಯಾಂಕ್‍ಗಳಿಗೆ ನೀಡಬೇಕಿರುವ ಬಾಕಿ ಮೊತ್ತ 14000 ಕೋಟಿ ರೂಪಾಯಿಯನ್ನು ನೀಡಬೇಕಿರುವುದರಿಂದ ಯುಬಿಯ ಕಂಪನಿಯನ್ನು ಬಖಾಸ್ತು ಮಾಡಬೇಕೆಂದು ತೀರ್ಪು ನೀಡಿತ್ತು.

ಸುಪ್ರೀಂ ಕೊರ್ಟ್ ತೀರ್ಪು:
ವಿವಿಧ ಬ್ಯಾಂಕ್ ಗಳಿಗೆ ನೀಡಬೇಕಿರುವ 14000 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಯುಬಿಎಚ್‍ಎಲ್ ಸೆಪ್ಟೆಂಬರ್ 30ರಂದು ಸುಪ್ರೀಂಕೋರ್ಟ್‍ಗೆ ತಿಳಿಸಿತ್ತು. ಕಂಪನಿಯ ಸೊತ್ತಿನ ಮೌಲ್ಯ ಒಟ್ಟು ಸಾಲಕ್ಕಿಂತ ಹೆಚ್ಚಿದೆ ಎಂದಿತ್ತು. ಕಂಪನಿಯ ಆಸ್ತಿ ಮೌಲ್ಯ ಒಟ್ಟು ಸಾಲಕ್ಕಿಂತ ಅಧಿಕವಾಗಿರುವುದರಿಂದ ಕಂಪನಿಯನ್ನು ಬರ್ಖಾಸ್ತುಗೊಳಿಸಲು ನಿರ್ದೇಶನ ನೀಡುವುದು ಸೂಕ್ತವಲ್ಲ. ಅಲ್ಲದೇ ಈಗಾಗಲೇ ಜಾರಿ ನಿರ್ದೇಶನಾಲಯ ಹಲವಾರು ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದರಿಂದ ಬ್ಯಾಂಕ್‍ಗಳಿಗೆ ಏನೂ ಸಿಗುವುದಿಲ್ಲ ಎಂದು ಯುಬಿ ಪರ ವಾದ ಮಾಡಿದ ಹಿರಿಯ ವಕೀಲ ಸಿ.ಎಸ್.ವೈದ್ಯನಾಥನ್ ಹೇಳಿದರು.

ಸುಪ್ರೀಂ ಕೋರ್ಟ್ ನ ಈ ತೀರ್ಪು 102 ವರ್ಷ ಹಳೆಯ ಮಾತೃ ಸಂಸ್ಥೆ ಯುಎಚ್‍ಬಿಎಲ್ ಅನ್ನು ಬರ್ಖಾಸ್ತುಗೊಳ್ಳುವುದು ಸಂಪೂರ್ಣ ಖಚಿತಗೊಂಡಂತಾಗಿದೆ. ಸುಪ್ರೀಂ ಕೋರ್ಟ್‍ನ ಈ ತೀರ್ಪು ಮಿತಿ ಮೀರಿ ಸಾಲ ಮಾಡಿ ತಲೆಮರೆಸಿಕೊಂಡವರಿಗೆ ಎಚ್ಚರಿಕೆಯ ಕರೆ ಗಂಟೆಯಾದರೇ, ಸಾಲ ನೀಡಿ ದಿವಾಳಿ ಹಂತಕ್ಕೆ ತಲುಪಿರುವ ಬ್ಯಾಂಕ್‍ಗಳಿಗೆ ಆಶಾಕಿರಣವಾಗಿದೆ.

LEAVE A REPLY

Please enter your comment!
Please enter your name here