ಅನರ್ಹ ಶಾಸಕರ ಪ್ರಕರಣಕ್ಕೆ ಭಾರೀ ತಿರುವು..! ಸುಪ್ರೀಂ ನಲ್ಲಿ ಏನಾಯ್ತು ಗೊತ್ತಾ…?!

0
402

೧೫ ಶಾಸಕರ ಅನರ್ಹತೆಯ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದ್ದು, ಸುಪ್ರೀಂ ನೀಡುವ ಆದೇಶದ ಮೇಲೆ ಇಡೀ ರಾಜ್ಯದ ಚಿತ್ತ ನೆಟ್ಟಿದೆ. ಈ ನಡುವೆ ಉಪಚುನಾವಣೆ ಘೋಷಣೆಯಾಗಿದ್ದು, ಅನರ್ಹತೆಯ ವಿಚಾರಣೆಗೆ ಮತ್ತಷ್ಟು ಮಹತ್ವ ಬಂದಿದೆ. ಇನ್ನು ಅನರ್ಹತೆ ರದ್ದು ಕೋರಿ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಇದೀಗ ಧಿಡೀರ್ ತಿರುವು ಸಿಕ್ಕಿದೆ. ಹೌದು, ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರ ಪ್ರಶ್ನಿಸಿ, ಅನರ್ಹತೆ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು.

ಆರಂಭದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದಿಸಿದ್ದರು. ಈಗ ಸ್ಪೀಕರ್ ಪರ ವಕೀಲರಾಗಿ ಹಿರಿಯ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸುತ್ತಿದ್ದಾರೆ. ಅಚ್ಚರಿ ಎಂದರೆ ಇದೀಗ ಸ್ಪೀಕರ್ ರಮೇಶ್ ಕುಮಾರ್ ಪರ ವಕೀಲರಾಗಿ ವಾದ ಮಂಡಿಸುತ್ತಿರುವ ತುಷಾರ್ ಮೆಹ್ತಾ ಅವರು, ಅನರ್ಹ ಶಾಸಕರ ವಾದವನ್ನೇ ಬೆಂಬಲಿಸಿ ಪ್ರತಿವಾದ ಮಂಡಿಸುತ್ತಿದ್ದಾರೆ. ಹೀಗಾಗಿ ಇಡೀ ಪ್ರಕರಣಕ್ಕೆ ಭಾರೀ ತಿರುವು ದೊರೆತಿದೆ.ಇನ್ನು ಆರಂಭದಲ್ಲಿ ವಾದ ಮಂಡಿಸಿದ್ದ ಅಭಿಷೇಕ್ ಮನು ಸಿಂಘ್ವಿ ಅನರ್ಹ ಶಾಸಕರ ನಿಲುವನ್ನು ವಿರೋಧಿಸಿದ್ದರು. ಆದರೆ ತುಷಾರ್ ಮೆಹ್ತಾ ಅನರ್ಹರ ನಿಲುವನ್ನು ಬೆಂವಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here