ಅಪಾರ್ಟ್ ಮೆಂಟ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ನಟಿ..!

0
372

ಸಿನಿಮಾಗಳಲ್ಲಿ ನಟಿಸಲು ಒಳ್ಳೆಯ ಅವಕಾಶಗಳು ಸಿಗಲಿಲ್ಲ ಎಂಬ ಕಾರಣಕ್ಕೆ ಹಾಗೂ ವೈಯಕ್ತಿಕವಾಗಿ ಮನನೊಂದಿದ್ದ ಉದಯೋನ್ಮುಖ ನಟಿ ಕಮ್ ಮಾಡೆಲ್ ಪರ್ಲ್ ಪಂಜಾಬಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹೌದು, ಪರ್ಲ್ ಪಂಜಾಬಿ ಮುಂಬಯಿನಲ್ಲಿ ತಾನಿರುವ ಅಪಾರ್ಟ್ಮೆಂಟ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಮಧ್ಯರಾತ್ರಿ 12.15 ರಿಂದ 12.30 ರೊಳಗೆ ನಡೆದಿದೆ ಎನ್ನಲಾಗಿದೆ.

ಅಂದ ಹಾಗೆ ಇವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಇದು ಮೊದಲಲ್ಲ, ಈ ಹಿಂದೆ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನ ನಡೆಸಿದ್ದಳಂತೆ. ಇನ್ನು ಮಾಡೆಲ್ ಕಮ್ ನಟಿಯಾಗಿರುವ ಇವರಿಗೆ ಅನೇಕ ದಿನಗಳಿಂದ ಬಾಲಿವುಡ್ ನಲ್ಲಿ ನಟಿಸಲು ಪ್ರಯತ್ನ ನಡೆಸುತ್ತಿದ್ದರು. ಆದ್ರೆ ಅವಕಾಶ ಸಿಕ್ಕಿರಲಿಲ್ಲ.ಇದರಿಂದ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.

ಇನ್ನ ಅಪಾರ್ಟ್ಮೆಂಟ್ ಮೇಲಿಂದ ಪೆರ್ಲ್ ಜಿಗಿದಾಗ, ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here