ವಿಷ್ಣು ದಾದಾ ಹುಟ್ಟು ಹಬ್ಬಕ್ಕೆ ಕಿಚ್ಚ ಸುದೀಪ್ ಭಾವುಕ ಟ್ವೀಟ್..!

0
378

ಕನ್ನಡ ಚಿತ್ರರಂಗದ ಮೇರು ನಟ ದಿ. ಸಂಪತ್‍ಕುಮಾರ್ ಅಲಿಯಾಸ ವಿಷ್ಣುವರ್ಧನ್ ಅವರಿಗೆ ಇಂದು 70ನೇ ಹುಟ್ಟು ಹಬ್ಬದ ಸಂಭ್ರಮ. ಅವರು ನಮ್ಮನ್ನೆಲ್ಲ ಅಗಲಿ ವರ್ಷಗಳೇ ಉರುಳಿದರು ಅವರ ಮೇಲಿರುವ ಅವರ ಅಭಿಮಾನಿಗಳ ಪ್ರೀತಿ ಮಾತ್ರ ಇನ್ನು ಕಮ್ಮಿ ಆಗಿಲ್ಲ. ಕರ್ನಾಟಕದಾದ್ಯಂತ ಇಂದು ವಿಷ್ಣು ದಾದಾ ಅಭಿಮಾನಿಗಳು ಎಲ್ಲೆಡೆ ಹುಬ್ಬು ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಇನ್ನು ನಟ ಕಿಚ್ಚ ಸುದೀಪ್ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ.

ವಿಷ್ಣುವರ್ಧನ್ ನೆನಪಿಗಾಗಿ ಸುದೀಪ್ ಅವರ ಟ್ವಿಟರ್ ಅಕೌಂಟ್‍ನ ಡಿಪಿಯಲ್ಲಿ ವಿಷ್ಣುದಾದಾನ ಫೋಟೋ ಹಾಕಿಕೊಂಡಿದ್ದಾರೆ. ಇದರ ಜೊತೆಗೆ ಸುದೀಪ್ ವಿಷ್ಣುವರ್ಧನ್ ನೆನೆದು ಭಾವುಕ ಟ್ವೀಟ್ ಮಾಡಿದ್ದಾರೆ.

“ಹುಟ್ಟು ಹಬ್ಬದ ಶುಭಾಶಯ ಅಪ್ಪಾಜಿ. ನಿಮ್ಮ ಮೇಲೆ ಪ್ರೀತಿ ಎಷ್ಟುಇದ್ಯೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವು ಅಷ್ಟೇ ಇದೆ. ಅನಾಥರಾಗಿದ್ದೀವಿ. ಬಹಳ ಬೇಗ ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ, ಆದರೆ ನಿಮ್ಮ ಅಗತ್ಯ ನಮಗಿತ್ತು. ನಿಮ್ಮನ್ನು ನೆನೆಯುವ, ಪ್ರೀತಿಸುವ, ಅಭಿಮಾನಿಯಲೊಬ್ಬ. ಕಿಚ್ಚ” ಎಂದು ಬರೆದುಕೊಂಡಿದ್ದಾರೆ.

ಇನ್ನು “ನಿಮ್ಮ ಜೊತೆ ಅಭಿನಯಿಸುವ ಹಾಗೂ ನಿಮ್ಮ ಪಾತ್ರವನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದ್ದು ನನಗೆ ದೊಡ್ಡ ಗೌರವದ ಸಂಗತಿ” ಎಂದು ವಿಷ್ಣುವರ್ಧನ್ ಫೋಟೋ ಹಾಕಿ ಇದು ಫ್ಯಾನ್ ಮೊಮೆಂಟ್ ಎಂದು ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here