ನಟಿ ವಿಜಯಲಕ್ಷ್ಮಿ ಗೋಳಿನ ಕಥೆ..!

0
179

ಕನ್ನಡದ ಖ್ಯಾತ ನಟಿ ವಿಜಯಲಕ್ಷ್ಮಿ ಇದೀಗ ಮತ್ತೆ ಆರ್ಥಿಕ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಈ ಹಿಂದೆ ತೀವ್ರ ಆರೋಗ್ಯ ಸಮಸ್ಯೆಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯ ವೆಚ್ಚಕ್ಕಾಗಿ ಸ್ಯಾಂಡಲ್‍ವುಡ್ ನಟರ ಬಳಿ ಮನವಿ ಮಾಡಿಕೊಂಡಿದ್ದ ವಿಜಯ ಲಕ್ಷ್ಮಿಯವರು ಈಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಈ ಬಾರಿ ವಿಜಯಲಕ್ಷ್ಮಿ ಅವರು ವಿಡಿಯೋದಲ್ಲಿ “ನನ್ನ ಆರೋಗ್ಯ ಸಮಸ್ಯೆಯ ಕಾರಣದಿಂದ ನನ್ನ ತಾಯಿ ಹಾಗೂ ಸಹೋದರಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನನ್ನ ಚಿಕಿತ್ಸೆಗೆ ಹಣದ ಅವಶ್ಯಕತೆಯಿದೆ. ಹೀಗಾಗಿ ನಾನು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿ ನನ್ನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತೇನೆ. ರಜನಿಕಾಂತ್ ಅವರು ನನ್ನ ಕೊನೆಯ ಭರವಸೆ. ನನ್ನ ಮನವಿಯನ್ನು ರಜನಿಕಾಂತ್ ಬಳಿ ಹೇಳುವಂತೆ ಅಭಿಮಾನಿಗಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಹತಾಶೆಯಿಂದ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅಲ್ಲದೆ ರಜನಿಕಾಂತ್ ನನ್ನ ಮನವಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ನನಗೆ ಸಹಾಯ ಮಾಡುತ್ತಾರೆ ಎಂದು ಭಾವಿಸುತ್ತೇನೆ” ಎಂದಿದ್ದಾರೆ.

LEAVE A REPLY

Please enter your comment!
Please enter your name here