ಸೆಪ್ಟೆಂಬರ್ ೪ರವರೆಗೆ ಈ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆಗೆ ಬ್ರೇಕ್..!!

0
149

ಸೆಪ್ಟೆಂಬರ್ ೦೪ರವರೆಗೆ ಕಲ್ಲು ಗಣಿಗಾರಿಕೆಯನ್ನು ನಡೆಸದಂತೆ ಜಿಲ್ಲೆಯ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಹೌದು, ಮಂಡ್ಯ ಜಿಲ್ಲೆಯ ತಹಶೀಲ್ದಾರ್ ಪ್ರಮೋದ್.ಎಲ್.ಪಾಟೀಲ್ ಆದೇಶ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಅಣೆಕಟ್ಟು ಭರ್ತಿಯಾಗಿರುವ ಹಿನ್ನೆಲೆ ಅದರ ಹೆಚ್ಚಿನ ಸುರಕ್ಷತೆಗಾಗಿ ಕಲ್ಲು ಗಣಿಗಾರಿಕೆಗೆ ತಡೆ ನಿಷೇಧ ಹೇರಲಾಗಿದೆ. ಡ್ಯಾಂನ ಸುರಕ್ಷತೆಯ ಅಂಗವಾಗಿ ಬೇಬಿ ಬೆಟ್ಟದ ವ್ಯಾಪ್ತಿಯ ಚಿನಕುರಳಿ, ಹೊನಗಾನಹಳ್ಳಿ, ಭೋಗನಹಳ್ಳಿ, ಮಾಳಸಂದ್ರ, ಅಲ್ಪಳ್ಳಿ,ಕಟ್ಟೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸೆಕ್ಷನ್ ೧೪೪ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಕೃಷ್ಣರಾಜ ಸಾಗರ ಡ್ಯಾಂ ನಿಂದ ೨೦ ಕಿಲೋಮೀಟರ್ ದೂರದಲ್ಲಿರುವ ಪ್ರದೇಶಗಳಲ್ಲಿ ಕಲ್ಲು ಗಣಿಗಾರಿಕೆಯನ್ನು ಸೆಪ್ಟೆಂಬರ್ ನಾಲ್ಕರವರೆಗೆ ಗಂಭೀರವಾಗಿ ನಿಷೇಧಿಸಲಾಗಿದ್ದು, ಕೆಆರ್.ಎಸ್ ಡ್ಯಾಂ ಈಗಾಗಲೇ ಹೆಚ್ಚು ಮಳೆಯಿಂದ ಗರಿಷ್ಠ ಮಟ್ಟವನ್ನು ತುಂಬಿಕೊಂಡಿದೆ. ಡ್ಯಾಂ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕಲ್ಲು ಗಣಿಗಾರಿಕೆಯಿಂದ ಯಾವ ತೊಂದರೆ ಉಂಟಾಗದಿರಲಿ ಎಂಬ ಮುನ್ನೆಚ್ಚರಿಕೆ ಕ್ರಮದಿಂದ ತಹಶೀಲ್ದಾರ್ ಪ್ರಮೋದ್.ಎಲ್. ಪಾಟೀಲ್ ಜವಾಬ್ದಾರಿಯುತವಾಗಿ ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here