ನೆರೆ ಸಂತ್ರಸ್ತರ ನೆರವಿಗೆ ನಿಂತ ‘ಭರಾಟೆ’ ಚಿತ್ರತಂಡ !

0
120

ಪ್ರಕೃತಿಯ ವಿಕೋಪಕ್ಕೆ ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ !
ಭಾರೀ ಮಳೆಯಿಂದ ಪ್ರವಾಹಕ್ಕೆ ಸಿಲುಕಿರುವ ಉತ್ತರ ಕರ್ನಾಟಕದ ಮಂದಿಯ ನೋವು ಮುಗಿಲು ಮುಟ್ಟಿದೆ !ಬಿಡದ ಮಳೆಯಿಂದ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ !
ಹಲವು ಜಿಲ್ಲೆಗಳು ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿದೆ.ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರವಾಹ ಮುಂದುವರಿಯುತ್ತಿದೆ. ಇತ್ತ ಕೊಡಗು ಜಿಲ್ಲೆ, ಈ ವರ್ಷವೂ ಪ್ರವಾಹದ ಸಹ ಹೊಡೆತಕ್ಕೆ ಸಿಲುಕಿದೆ! ಮಲೆನಾಡಿನಲ್ಲೂ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದ್ದೆ.

ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸಲು ರಾಜ್ಯದ ಎಲ್ಲಾ ಅಧ್ಯಾಪಕರ ಒಂದು ದಿನದ ಸಂಬಳವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಿದ್ದಾರೆ.
ಜೊತೆಗೆ ಸಿನಿಮಾ ನಟರು ಸಹಿತ ಉತ್ತರ ಕರ್ನಾಟಕ ಜನರ ನೆರವಿಗೆ ನಿಂತಿದೆ ! ದರ್ಶನ್, ಸುದೀಪ್, ಪುನೀತ್, ಶಿವಣ್ಣ ಸೇರಿದಂತೆ ಹಲವಾರು ಚಂದನವನದ ಕಲಾವಿದರು ತಮ್ಮ ಕೈಯಲ್ಲಿ ಆದ ಸಹಾಯವನ್ನು ಮಾಡುವ ಮೂಲಕ ಮಾನವೀಯತೆ ದೃಷ್ಟಿಯನ್ನು ತೋರಿದ್ದಾರೆ !

ಸದ್ಯ ಮುರಳಿ ಅಭಿನಯದ ಭರಾಟೆ ಚಿತ್ರತಂಡ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ನಿಂತಿದೆ ! ಸಾಂಗ್ ಚಿತ್ರೀಕರಣಕ್ಕಾಗಿ ವಿದೇಶದಲ್ಲಿರುವ ಚಿತ್ರತಂಡ , ಆಡಿಯೋ ಮಾರಾಟದಿಂದ ಬಂದ ಅಷ್ಟೂ ಲಾಭದ ಹಣವನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೀಡೋದಾಗಿ ಹೇಳಿದ್ದಾರೆ!

ಈ ಕುರಿತು ಮಾತನಾಡಿರುವ ನಟ ಶ್ರೀಮುರುಳಿ, ನಾವು ಸಾಂಗ್ ಶೂಟಿಂಗ್ ಗಾಗು ವಿದೇಶಕ್ಕೆ ಬಂದಿದ್ದೇವೆ,ಆದುದರಿಂದ ನಿಮ್ಮ ಸಹಾಯಕ್ಕೆ ನಾವು ಬರಲು ಆಗುತ್ತಿಲ್ಲ ! ನಿಮ್ಮ ಪರಿಸ್ಥಿತಿಯನ್ನು ಇಲ್ಲಿಂದಲೇ ಗಮನಿಸುತ್ತಿದ್ದೇವೆ. ನಿಜಕ್ಕೂ ನಿಮ್ಮ ಜೀವನ ಕಷ್ಟ ಸಾಧ್ಯ ,ನನಗೆ ತುಂಬಾನೇ ಬೇಸರ ತಂದಿದೆ,ನಮ್ಮ ಚಿತ್ರದ ಆಡಿಯೋ ಲಾಭದಲ್ಲಿ ಬರುವ ಅಷ್ಟೂ ಹಣವನ್ನು ನೆರೆ ಸಂತ್ರಸ್ತರಿಗೆ ನೀಡುವ ಮೂಲಕ ನಮ್ಮ ಕೈಯಲ್ಲಿ ಆದ ಕರ್ತವ್ಯವನ್ನು ಮಾಡುತ್ತೇವೆ ಎಂದು ಮುರುಳಿ ಹೇಳಿದ್ದಾರೆ

LEAVE A REPLY

Please enter your comment!
Please enter your name here