ಸ್ಯಾಂಡಲ್ ವುಡ್ ನಲ್ಲಿ ಶುರುವಾಯ್ತು ಮತ್ತೆ ಸ್ಟಾರ್ ಕ್ಲಾಶ್ !

0
656

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಕ್ಲಾಶ್ ಗಳೇನು ಹೊಸದಲ್ಲ ! ಒಬ್ಬ ನಟನ ಸಿನಿಮಾಗೆ ಇನ್ನೊಬ್ಬ ನಟ ಚಾಲೆಂಜ್ ಹಾಕುವುದು ಸರ್ವೇಸಾಮಾನ್ಯ !
ಈಗ ಮತ್ತೆ ಭರಾಟೆ ಮುರುಳಿಗೆ, ಗೀತಾ ಗಣೇಶ್ ಚಾಲೆಂಜ್ ಮಾಡಲಿದ್ದಾರೆ !
ಕನ್ನಡ ಚಿತ್ರರಂಗದಲ್ಲಿ ವಾರಕ್ಕೆ ಹತ್ತಾರು ಸಿನಿಮಾಗಳು ಬಿಡುಗಡೆಯಾಗುತ್ತವೆ ,ಇದರಲ್ಲಿ ಕೆಲವೊಂದು ಸೂಪರ್ ಹಿಟ್ ಗಳಾದರೆ , ಕೆಲವು ಸದ್ದಿಲ್ಲದೆ ಮರೆಯಾಗುತ್ತವೆ, ಇನ್ನೂ ಕೆಲವು ಸಿನಿಮಾಗಳು ಮಿಶ್ರ ಪ್ರತಿಕ್ರಿಯೆಗೆ ಪಾತ್ರವಾಗುತ್ತವೆ ..

ಈಗ ಕನ್ನಡದ ಎರಡು ಬಹು ನಿರೀಕ್ಷಿತ ಚಿತ್ರಗಳು ಒಂದೇ ದಿನ ತೆರೆ ಕಾಣುತ್ತಿದ್ದೆ ಎಂದು ಗಾಂಧಿನಗರದಲ್ಲಿ ಸುದ್ದಿ ಹರಿದಾಡುತ್ತಿದೆ !
ಹೌದು ಭರಾಟೆ ಮತ್ತು ಗೀತಾ ಕನ್ನಡ ದ ಬಹು ನಿರೀಕ್ಷಿತ ಚಿತ್ರಗಳು ಈ ಚಿತ್ರಗಳಿಗಾಗಿ ಸ್ಯಾಂಡಲ್ ವುಡ್ ಚನ್ನು ಪ್ರೇಕ್ಷಕರು ಕಾದುಕುಳಿತಿದ್ದಾರೆ !ಮೂಲಗಳ ಪ್ರಕಾರ ಎರಡೂ ಸಿನಿಮಾವು ಸೆಪ್ಟೆಂಬರ್ 27 ರಂದೇ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದೆ !

ಈ ಹಿಂದೆಯೇ ಭರಾಟೆ ಚಿತ್ರ ತಂಡ ಸೆಪ್ಟೆಂಬರ್ ರಂದು ಬಿಡುಗಡೆ ಮಾಡುತ್ತಿದ್ದೇವೆ ಎಂದು ಘೋಷಿಸಲಾಗಿತ್ತು ! ಆದರೆ ಗೀತಾ ಚಿತ್ರ ತಂಡ ತಮ್ಮ ಚಿತ್ರವನ್ನು ಸಹಿತ ಸೆಪ್ಟೆಂಬರ್ 27 ರಂದೇ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದೆ

ಭರಾಟೆ- ಬಹದ್ದೂರ್ ಹಾಗೂ ಭರ್ಜರಿ ನಂತಹ ಹಿಟ್ ಸಿನಿಮಾಗಳನ್ನು ಕೊಟ್ಟ ಚೇತನ್, ಭರಾಟೆ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ಈಗಾಗಲೇ ಮೇಕಿಂಗ್ ಹಾಗೂ ಸಾಂಗ್ ಗಳಿಂದ ಸಾಕಷ್ಟು ಸದ್ದು ಮಾಡುತ್ತಿರುವ ಭರಾಟೆ, ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗುವ ಎಲ್ಲ ನಿರೀಕ್ಷೆಗಳನ್ನು ಹೊಂದಿದೆ !
ಉಗ್ರಂ ಹಾಗೂ ಮಫ್ತಿ ಚಿತ್ರದ ಮುಖಾಂತರ ತಮ್ಮದೇ ಆದ ಟ್ರೆಂಡ್ ಹಾಗೂ ಫ್ಯಾನ್ ಬೇಸ್ಮೆಂಟ್ ಕಟ್ಟಿಕೊಂಡಿರುವ ಶ್ರೀಮುರಳಿ ಅವರನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಹುಚ್ಚೆದ್ದು ಕಾಯುತ್ತಿದ್ದಾರೆ ….
ಇನ್ನು ಚಿತ್ರದಲ್ಲಿ ಮುರಳಿ ಅವರಿಗೆ ನಾಯಕಿಯಾಗಿ ಶ್ರೀಲೀಲಾ ಅಭಿನಯಿಸಿದ್ದಾರೆ..

ಗೀತಾ-ಗಣೇಶ್ ಅವರು ಇದೇ ಮೊದಲ ಬಾರಿಗೆ ಕನ್ನಡ ಪ್ರತಿಭಟನೆಗಾರನಾಗಿ ಅಭಿನಯಿಸುತ್ತಿರುವ ಚಿತ್ರ. ಈಗಾಗಲೇ ಚಿತ್ರದ ಟ್ರೈಲರ್ ನೋಡಿದ ಅಭಿಮಾನಿಗಳು ಸಾಕಷ್ಟು ಇಷ್ಟಪಟ್ಟಿದ್ದಾರೆ.. ಕನ್ನಡ ಪರ ಮಾತನಾಡುವ ಡೈಲಾಗ್ಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ ..
ಇನ್ನು ಚಿತ್ರದಲ್ಲಿ ಗಣೇಶ್ ಅವರ ಪುತ್ರ ಅಭಿನಯಿಸುತ್ತಿರುವುದು ವಿಶೇಷ .. ಇನ್ನು ಚಿತ್ರದಲ್ಲಿ ಗಣೇಶ್ ಅವರಿಗೆ ನಾಯಕಿ ನಟಿಯಾಗಿ ಶಾನ್ವಿ ಶ್ರೀವತ್ಸ ಅಭಿನಯಿಸಿದ್ದಾರೆ !
ಇನ್ನು ಚಿತ್ರಕ್ಕೆ ವಿಜಯ್ ನಾಗೇಂದ್ರ ಆಕ್ಷನ್ ಕಟ್ ಹೇಳಿದ್ರೆ, ಶಿಲ್ಪಾ ಗಣೇಶ್ ಅವರು ಬಂಡವಾಳ ಹೂಡಿತ್ತಾರೆ ..
ಒಟ್ಟಾರೆ ಈ ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆಗೆಯಾದರೆ ಪ್ರೇಕ್ಷಕ ಯಾವುದನ್ನು ಮೆಚ್ಚಿಕೊಳ್ಳುತ್ತಾನೆ? ಯಾವುದನ್ನು ಬಿಡುತ್ತಾನೆ? ಅಥವಾ ಎರಡನ್ನೂ ಮೆಚ್ಚಿಕೊಳ್ಳುತ್ತಾನ! ಕಾದು ನೋಡಬೇಕಾಗಿದೆ

LEAVE A REPLY

Please enter your comment!
Please enter your name here