ಕ್ಯಾಮರಾ ಮುಂದೇ ಅಭಿನಯಿಸುತ್ತಿದ್ದ ಸ್ಟಾರ್ ನಟಿ ಸಂಗೀತಾ, ಈಗ ಕ್ಯಾಮರಾ ಹಿಂದೆ ಕೆಲಸ ಮಾಡುತ್ತಿದ್ದಾರೆ !

0
385

ಯಾರೇ ನೀನು ಚೆಲುವೆ ಖ್ಯಾತಿಯ ಕಮಲಿ ಪಾತ್ರಧಾರಿ ಸಂಗೀತ ಮಾಧವನ್ ನಾಯರ್ 90 ರ ದಶಕದಲ್ಲಿ ಸ್ಟಾರ್ ನಟಿಯಾಗಿ ಚತುರ್ ಬಾಷೆಯಲ್ಲಿ ಅಭಿನಯಿಸಿದ್ದರು. ಸದಾ ವಿಶಿಷ್ಟ ಪ್ರೇಮ ಕಥೆಯನ್ನು ತೆರೆಯ ಮೇಲೆ ತೋರಿಸುವ ನಟ, ನಿರ್ದೇಶಕ ವಿ. ರವಿಚಂದ್ರನ್ ಅವರು, ಯಾರೇ ನೀನು ಚೆಲುವೆ ಎಂಬ ಮುದ್ದಾದ ಕಥೆಯನ್ನು ತೆರೆಯ ಮೇಲೆ ತೋರಿಸಿ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ. ಇನ್ನು ಈ ಚಿತ್ರದಲ್ಲಿ ಕಮಲಿ ಪಾತ್ರದಲ್ಲಿ ಅಭಿನಯಿಸಿರುವ ಸಂಗೀತ ಅವರನ್ನು ಆಗಿನ ಕಾಲದ ಪಡ್ಡೆ ಹುಡುಗರು ಮರೆತಿಲ್ಲ.. ಕನ್ನಡದಲ್ಲಿ ಮಾಡಿರುವುದು ಕೆಲವೇ ಕೆಲವು ಸಿನಿಮಾಗಳದಾರು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ! ಅಲ್ಲದೇ ಪಡ್ಡೆ ಹೈಕಳ ನಿದ್ದೇ ಕದ್ದ ಪೋರಿಯೂ ಆಗಿದ್ದರು.

 

 

ಮೂಲತಹಃ ಮಲಯಾಳಿ ಭಾಷಿಗರ ಕಟುಂಬದಲ್ಲಿ ನಾಲ್ಕನೆಯ ಮಗಳಾಗಿ ಜನಿಸಿದ ಸಂಗೀತಾ, ಚೆನೈನಲ್ಲಿ ನೆಲೆಸಿದರು. ತಂದೆ ಮಾಧವನ್ ನಾಯರ್ ಮತ್ತು ತಾಯಿ ಪದ್ಮರವರು ಕೇರಳದಲ್ಲಿ ನಮ್ಮ ಜೀವನವನ್ನು ನಡೆಸುತ್ತಿದ್ದರು, ಆದರೆ ಅದೊಂದು ದಿನ ತಂದೆ ಹಣ್ಣಿನ ವ್ಯಾಪಾರಕ್ಕಾಗಿ ಕುಟುಂಬ ಸಮೇತ ಚೆನೈಗೆ ವಲಸೆ ಬಂದರು ಮತ್ತು ಅಲ್ಲಿಯೇ ನೆಲೆಯೂರಿದರು. ಸಂಗೀತಾ ಅವರು ತಮ್ಮ ಶಾಲಾ ದಿನಗಳನ್ನು ಚೆನೈನ ಶ್ರೀ ಗುಜರಾತಿ ವಿಡ್ ಮಟ್ರಿಕ್ಯುಲೇಷನ್ ಶಾಲೆಯಲ್ಲಿ ಮುಗಿಸಿದರು, ಅವರಿಗೆ ನಿತೀಶ್ ಎಂಬ ಸಹೋದರ ಮತ್ತು ಮಲ್ಲಿಕಾ,ಚಾರು ಎಂಬ ಇಬ್ಬರು ಸಹೋದರಿಯರಿದ್ದಾರೆ. ವಿಶೇಷವೆನೆಂದರೆ ಆಕೆಯ ನಟನೆಯ ಪುನ್ನಿಯಾವತಿ ಎಂಬ ಚಿತ್ರದಲ್ಲಿ ಆಕೆಯ ಸಹೋದರ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು !

 

 

ಸಂಗೀತಾ ಅವರು 1978 ರಲ್ಲಿ “ಸ್ನೇಹಿಕನ್ ಒರು ಪೆನ್ನು” ಎಂಬ ಮಲಯಾಳಂ ಚಿತ್ರದಿಂದ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು, 1978 ರಿಂದ 1987 ರವರೆಗೆ ಸುಮಾರು ಆರು ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ಅಭಿನಯಿಸಿದ ಸಂಗೀತಾ, 1978 ರಲ್ಲಿ ರಥಾಥಿನ್ ರಥಿಮೆ ಎಂಬ ಚಿತ್ರದ ಮೂಲಕ ತಮಿಳಿಗೆ ಬಾಲನಟಿಯಾಗಿ ಪಾದರ್ಪಣೆ ಮಾಡಿದರು. ಅಲ್ಲದೇ ಕನ್ನಡದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಅಭಿನಯದ ಶಾಂತಿ ಕ್ರಾಂತಿ ಚಿತ್ರದಲ್ಲಿಯೂ ಕೂಡ ಅಭಿನಯಿಸಿದ್ದು, ಸುಮಾರು 15 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

 

 

ಪ್ರಪ್ರಥಮವಾಗಿ ಪರಿಪೂರ್ಣವಾಗಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, 1995 ರಲ್ಲಿ ಬಿಡುಗಡೆಯಾದ ಎಲ್ಲಮೆ ಎನ್ ರಾಸಥನ್ ಎಂಬ ತಮಿಳು ಚಿತ್ರದಲ್ಲಿ. ಕನ್ನಡದಲ್ಲಿ ಎರಡ್ಮೂರು ಸಿನಿಮಾಗಳು, ತೆಲುಗಿನಲ್ಲಿ ಒಂದು ಸಿನಿಮಾ ಸೇರಿದಂತೆ, ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತೊಂಬ್ಬತ್ತರ ದಶಕದಲ್ಲಿ ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಚಿತ್ರರಂಗವನ್ನು ಆಳಿದ್ದಾರೆ.

 

 

ಮಲಯಾಳಂ ನ ಖ್ಯಾತ ನಿರ್ದೇಶಕ ಶ್ರೀನಿವಾಸನ್ ಅವರು ಬರೆದು ನಿರ್ದೇಶಿಸಿದ್ದ, ಚಿಂತವಿಷ್ಟಯ್ಯ ಶ್ಯಾಮಲಾ(1998), ಚಿತ್ರದಲ್ಲಿ ಶ್ಯಾಮಲಾ ಪಾತ್ರವನ್ನು ಅಭಿನಯಿಸಿ ಅಪಾರ ಪ್ರಶಂಸೆಯನ್ನು ಪಡೆದುಕೊಂಡರು, ಅಲ್ಲದೇ ಈ ಚಿತ್ರದಲ್ಲಿ ಅವರ ಅಭಿನಯಕ್ಕಾಗಿ, ಅತ್ಯುತ್ತಮ ನಟಿಯಾಗಿ ಕೇರಳ ರಾಜ್ಯ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ ಮತ್ತು ಸಿನಿಮಾ ಎಕ್ಸ್‌ಪ್ರೆಸ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು ಮತ್ತು ತಮಿಳು ನಟ ವಿಜಯ್ ಅವರ ಪೂವ್ ಉನಕ್ಕಾಗಾ(1996), ಚಿತ್ರದಲ್ಲಿ ನಿರ್ಮಲಾ ಮೇರಿ ಪಾತ್ರದಿಂದ ಸಾಕಷ್ಟು ಪ್ರಸಿದ್ದರಾದರು !

 

 

ನಟಿ ಸಂಗೀತ ಅವರು ಚಲನಚಿತ್ರೋದ್ಯಮದಲ್ಲಿ ಸಾಧನೆಗಳನ್ನು ಮಾಡುವ ಸಮಯದಲ್ಲೇ, ಚಿತ್ರರಂಗದಿಂದ ಹೊರ ಬಂದರು. ಕಾರಣ 2000ರಲ್ಲಿ ತಮಿಳಿನ ಖ್ಯಾತ ಛಾಯಾಗ್ರಾಹಕ ಸರವಣನ್ ಅವರನ್ನು ವಿವಾಹವಾದರು ನಂತರ ಚಿತ್ರರಂಗದಿಂದ ನಿವೃತ್ತಿ ಘೋಷಿಸಿದರು. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ, ನಿಜ ಜೀವನದಲ್ಲೂ ಕೂಡ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಸಾಮಾನ್ಯ ಜೀವನವನ್ನು ಇಷ್ಟಪಡುವ ಸಂಗೀತಾ, ಹೆಚ್ಚಾಗಿ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದಿಲ್ಲ !

 

 

ನಟಿ ಸಂಗೀತಾ, ತನ್ನ ಪತಿ ಸರವಣನ್ ಅವರು ಯಾವುದಾದರು ಸಿನಿಮಾಗಳಲ್ಲಿ, ಛಾಯಾಗ್ರಾಹಕರಾಗಿ ಕೆಲಸ ಮಾಡಿದರೆ, ಸಹಾಯಕಿಯಾಗಿ ಆತನ ಜೊತೆ ಕೆಲಸ ಮಾಡುತ್ತಾರೆ. 90ರ ದಶಕದಲ್ಲಿ ಖ್ಯಾತ ನಟಿಯಾಗಿ ಕ್ಯಾಮರಾಗಳ ಮುಂದೆ ನಿಲ್ಲುತ್ತಿದ್ದ ಸಂಗೀತಾ, ಇಂದು ಕ್ಯಾಮರಾಗಳ ಹಿಂದೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಈ ಕೆಲಸ ಮಾಡಲು ಯಾವುದೇ ಮುಜುಗರವಿಲ್ಲ ಎಂದು ಹೇಳುತ್ತಾರೆ. ನಾನು ಕೆಲಸ ಮಾಡುತ್ತಿರುವುದು ನನ್ನ ಪತಿಯ ಜೊತೆಯಾಗಿ, ಮತ್ತು ಅವರಿಗಾಗಿ.. ಈ ಕಾರಣಕ್ಕೆ ಈ ಕೆಲಸ ನನಗೆ ಬಹಳ ಖುಷಿ ಕೊಡುತ್ತದೇ ಎಂದು ಹೇಳಿಕೊಂಡರು. ಅಲ್ಲದೆ ಈ ದಂಪತಿಗಳಿಗೆ ಸಾಯಿ ತೇಜಸ್ವತಿ ಎಂಬ ಮುದ್ದಾದ ಮಗಳಿದ್ದಾಳೆ !

 

 

ತನ್ನ ಗಂಡನ ಕೆಲಸಕ್ಕೆ ಸಾತ್ ನೀಡುತ್ತಿರುವ ಸಂಗೀತಾ ಮಾಧವ್ ನಾಯರ್ ಅನ್ನು ಮಡದಿಯಾಗಿ ಪಡೆದ ಸರವಣನ್ ಅವರು ಪುಣ್ಯವಂತರು

LEAVE A REPLY

Please enter your comment!
Please enter your name here