ಹೆಚ್ಚುವಾಗ ಕಣ್ಣೀರು ತರಿಸುತ್ತಿದ್ದ ಈರುಳ್ಳಿ ಇದೀಗ ಕೈಗೆ ಎಟುಕದಂತಾಗಿದೆ. ಕೆಲವೆಡೆ ಮಾತ್ರ ಈರುಳ್ಳಿ ಬೆಲೆ ಕಡಿಮೆಯಾದರೂ ಇನ್ನೂ ಕೆಲವು ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಇನ್ನೂ ಇಳಿದಿಲ್ಲ.
ಈರುಳ್ಳಿಗೆ ಚಿನ್ನದಷ್ಟೇ ಬೆಲೆ ಇದೆ ಎಂದರೆ ತಪ್ಪಾಗುವುದಿಲ್ಲ. ಈರುಳ್ಳಿ ವಿಚಾರವಾಗಿ ಸಾಕಷ್ಟು ಜೋಕ್ಗಳು, ಟ್ರೋಲ್ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಕೆಲವರಂತೂ ಸ್ನೇಹಿತರ ಮದುವೆಗೆ ಈರುಳ್ಳಿಯನ್ನು ಪ್ಯಾಕ್ ಮಾಡಿ ಗಿಫ್ಟ್ ಆಗಿ ನೀಡಿದ್ದಾರೆ. ಇದೀಗ ನಟ ಅಕ್ಷಯ್ ಕುಮಾರ್ ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಅವರಿಗೆ ಈರುಳ್ಳಿ ಜುಮುಕಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಟ್ವಿಂಕಲ್ ಕೂಡಾ ಪತಿ ನೀಡಿದ ಈರುಳ್ಳಿಯಿಂದ ಮಾಡಿದ ಜುಮುಕಿಯನ್ನು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಈ ಜುಮುಕಿ ಫೋಟೊವನ್ನು ಟ್ವಿಂಕಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದು ‘ಕೆಲವೊಮ್ಮೆ ಚಿಕ್ಕ ಚಿಕ್ಕ ವಿಚಾರಗಳು ಕೂಡಾ ಮನಸ್ಸಿಗೆ ಬಹಳ ಆನಂದ ನೀಡುತ್ತದೆ’ ಎಂದು ಬರೆದುಕೊಂಡಿದ್ದಾರೆ. ನೀವು ಕೂಡಾ ನಿಮ್ಮ ಪ್ರೀತಿಪಾತ್ರರಿಗೆ ಈರುಳ್ಳಿ ಜುಮುಕಿ ನೀಡಿ ಅವರಿಗೆ ಸರ್ಪೈಸ್ ನೀಡಬಹುದು.