ಸಂಪುಟದಿಂದ ಹೊರಗೆ ಬರಲು ಶ್ರೀರಾಮುಲು ಸಜ್ಜು?

0
181

ಬೆಂಗಳೂರು: ಮಂತ್ರಿಸ್ಥಾನ ನನಗೆ ಸಾಕಾಗಿ ಹೋಗಿದೆ ಎಂದು ಆಪ್ತರ ಬಳಿ ಸಚಿವ ಶ್ರೀರಾಮುಲು ಅಳಲು ತೋಡಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಶ್ರೀರಾಮುಲುಗೆ ಮುಖ್ಯಮಂತ್ರಿ ಬಿಎಸ್ ವೈ ಬಿಕ್ ಶಾಕ್ ಕೊಟ್ಟಿದ್ದಾರೆ. ತಮ್ಮ ಬಳಿ ಇದ್ದ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆಯನ್ನು ಹಿಂಪಡೆದು, ಸಮಾಜ ಕಲ್ಯಾಣ ಇಲಾಖೆ ಮಾತ್ರ ನೀಡಿದ್ದು ಭಾರೀ ಅಸಮಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಆಪ್ತರ ಬಳಿ ಅಳಲು ತೋಡಿಕೊಂಡಿರುವ ಅವರು, ನನಗೇ ಯಾವುದೇ ಮಂತ್ರಿಸ್ಥಾನ ಬೇಡ ಎಂದು ಅಳಲು ತೋಡಿಕೊಂಡಿದ್ದು, ಸಂಪುಟದಿಂದ ಹೊರಗೆ ಬರಲು ಶ್ರೀರಾಮುಲು ಚಿಂತಿಸಿದ್ದಾರಾ ಎಂಬ ಪ್ರಶ್ನೆ ದಟ್ಟವಾಗಿ ಕಾಡ್ತಿದೆ.

ಶ್ರೀರಾಮುಲು ಶ್ರೀಘ್ರ ದೆಹಲಿಯತ್ತ

ಶೀಘ್ರ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಗೆ ಶ್ರೀರಾಮುಲು ನಿರ್ಧಾರ ಮಾಡಿದ್ದಾರೆ. ಆಪ್ತರ ಬಳಿ ಹೇಳಿಕೊಂಡಿರುವ ಶ್ರೀರಾಮುಲು, ಆರೋಗ್ಯ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದು ಬಹಳ ಅಸಮಾಧಾನವಾಗಿದೆ. ಯಾವ ಖಾತೆಯೂ ಬೇಡ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಹೈಕಮಾಂಡ್ ಬಳಿ ಮಾತನಾಡುತ್ತೇನೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

ಕೊರೋನಾ ಸಂಕಷ್ಟ ಕಾಲದಲ್ಲಿ ಸಚಿವ ಬಿ ಶ್ರೀರಾಮುಲು ಅವರು ಖಾತೆ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದರು ಎಂಬ ಮಾತು ಕೇಳಿ ಬಂದಿತ್ತು. ಕೊರೋನಾ ನಿರ್ವಹಣೆಯಲ್ಲಿ ಕೆ ಸುಧಾಕರ್​ ಹೆಚ್ಚಿನ ಜವಾಬ್ದಾರಿ ಹೊತ್ತಿದ್ದಕ್ಕೆ ಶ್ರೀರಾಮುಲು ಅಸಮಾಧಾನವನ್ನು ಹೊರಹಾಕಿದ್ದರು. ಇಬ್ಬರು ನಡುವಿನ ಈ ಗುದ್ದಾಟ ರಾಜ್ಯದ ಜನತೆ ಮುಂದೆ ಕೂಡ ಬಹಿರಂಗವಾಗಿತ್ತು. ಬಳಿಕ ಇದಕ್ಕೆ ತೇಪೆ ಹಚ್ಚಲು ಮುಂದಾದ ಸುಧಾಕರ್​, ಶ್ರೀರಾಮುಲು ಅಣ್ಣ ನನ್ನ ನಡುವೆ ಯಾವುದೇ ಮುನಿಸಿಲ್ಲ ಎಂದಿದ್ದರು. ಆದರೆ, ಇದೇ ಕಾರಣಕ್ಕೆ ರಾಮುಲು ಅವರ ಸ್ಥಾನವನ್ನು ಬದಲಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದಕ್ಕೆ ತಮ್ಮ ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿರುವ ಸಚಿವ ಶ್ರೀರಾಮುಲು, “ಕೋವಿಡ್ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಬಾರದಿತ್ತು. ಕೋವಿಡ್ ಕಡಿಮೆ ಆದ ಮೇಲೆ ಬದಲಿಸಬೇಕಿತ್ತು. ಸಿಎಂ ಅವರ ಈ ನಿರ್ಧಾರದಿಂದಾಗಿ ಇದೀಗ ಆರೋಗ್ಯ ಇಲಾಖೆ ನಿರ್ವಹಿಸುವಲ್ಲಿ ನಾನು ಅಸಮರ್ಥ ಎಂಬ ಸಂದೇಶ ರಾಜ್ಯದ ಜನತೆಗೆ ರವಾನೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಇದೀಗ ಒಂದೇ ಖಾತೆ ಕೊಟ್ಟಿರೋದು ಶ್ರೀರಾಮುಲುಗೆ ಭಾರೀ ಅಸಮಾಧಾನ ಕ್ಕೆ ಕಾರಣ ಎನ್ನಲಾಗಿದೆ.

LEAVE A REPLY

Please enter your comment!
Please enter your name here