ರಿಯಲ್ ಹೀರೋ ಸೋನು ಸೂದ್ ಗೆ ಶಿಲ್ಪಾ ಶೆಟ್ಟಿ ಮಗ ಗೌರವ ಸಲ್ಲಿಸಿದ್ದು ಹೇಗೆ ಗೊತ್ತಾ?

0
183

ಸೋನು ಸೂದ್ ಪರಿಚಯ ಯಾರಿಗಿಲ್ಲ ಹೇಳಿ? ತನ್ನ ನಟನೆಯಿಂದ ಗಮನಸೆಳೆವ ಸೋನು ಸೂದ್ ಖಡಕ್ ವಿಲನ್ ಆಗಿ ತೆರೆ ಮೇಲೆ ಘರ್ಜಿಸಿ ಬಣ್ಣದ ಲೋಕದಲ್ಲಿ ಮನೆ ಮಾತಾದವರು. ಅನುಷ್ಕಾ ಶೆಟ್ಟಿ ಅಭಿನಯದ ತೆಲುಗಿನ ಅರುಂಧತಿ ಸಿನಿಮಾ ಸೋನು ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಕಿಚ್ಚ ಸುದೀಪ್ ಅಭಿನಯದ ವಿಷ್ಣುವರ್ಧನ ಸಿನಿಮಾದಲ್ಲಿ ವಿಲನ್ ಆಗಿ ಅಭಿನಯಿಸಿದ್ದ ಸಂಗೀತ ಸೋನು ಅವರ ನಟನೆಯ ಹೊರತಾಗಿ ಸಾಮಾಜಿಕ ಕಾರ್ಯಗಳ ಮೂಲಕವೂ ಸಾಕಷ್ಟು ಸದ್ದು ಮಾಡಿದವರು. ಕೊರೋನಾ ಸಮಯದಲ್ಲಿ ಒಂದರ ಮೇಲೆ ಒಂದರಂತೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದ ಸೋನು ರೀಲ್ ಲೈಫ್ ನಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್ ನಲ್ಲಿಯೂ ಹೀರೋ ಆಗಿ ಮಿಂಚಿದವರು. ಲಾಕ್ ಡೌನ್ ಸಮಯದಲ್ಲಂತೂ ಸೋನು ಅವರು ಮಾಡಿದ ಕಾರ್ಯಕ್ಕೆ ಲೆಕ್ಕವಿಲ್ಲ!ತಾನು ಗಳಿಸಿದ್ದನ್ನು ಇತರರಿಗೆ ನೀಡುವ ಈ ನಟ ನಿಸ್ವಾರ್ಥಿಯೇ ಸರಿ.

ಅಂದ ಹಾಗೇ ಸೋನು ಸೂದ್ ಅವರ ಈ ಸಾಮಾಜಿಕ ಕಾರ್ಯಕ್ಕೆ ಫಿದಾ ಆಗದವರಿಲ್ಲ. ಸಾಮಾನ್ಯ ಜನರಿಂದ ಹಿಡಿದು ಸಿನಿಮಾ ಮಂದಿಯೂ ಕೂಡಾ ಸೋನು ಅವರ ಮಹತ್ಕಾರ್ಯಕ್ಕೆ ಸೋತಿದ್ದಾರೆ. ಮತ್ತು ಅವರನ್ನು ಕೊಂಡಾಡುತ್ತಿದ್ದಾರೆಮಿದರ ಜೊತೆಗೆ ಮಕ್ಕಳು ಕೂಡಾ ರಿಯಲ್ ಹೀರೋವಿನ ಅಭಿಮಾನಿಗಳಾಗಿ ಬಿಟ್ಟಿದ್ದಾರೆ. ಇನ್ನು ಸೆಲೆಬ್ರಿಟಿಗಳ ಮಕ್ಕಳೇ ಇವರನ್ನು ಆದರ್ಶವಾಗಿ ತೆಗೆದುಕೊಂಡಿದ್ದಾರೆ ಎಂದರೆ ಸೋನು ಸೂದ್ ಮಾಡಿರುವ ಕಾರ್ಯ ಉತ್ಕ್ರಷ್ಟವಾದುದೆಂಬುದರಲ್ಲಿ ಸಂಶಯವಿಲ್ಲ.

ಮಂಗಳೂರಿನ ಚೆಲುವೆ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಪುತ್ರ ವಿಯಾನ್ ರಾಜ್ ಕುಂದ್ರಾ ಸೋನು ಸೂದ್ ಅವರನ್ನು ತನ್ನ ಆದರ್ಶವೆಂದು ಪರಿಗಣಿಸಿದ್ದಾನೆ. ಅದಕ್ಕೆ ಅವನು ಮಾಡಿರುವಂತಹ ಅದ್ಭುತವಾದ ಪ್ರಾಜೆಕ್ಟ್ ಸಾಕ್ಷಿ. ಶಾಲೆಯಲ್ಲಿ ವಿಯಾನ್ ಗೆ ನೀಡಿರುವಂತಹ ಪ್ರಾಜೆಕ್ಟ್ ಅನ್ನು ನಟ ಸೋನು ಸೂದ್ ಅವರಿಗೆ ಸಮರ್ಪಣೆ ಮಾಡಿದ್ದಾನೆ.

ಕೊರೋನಾ ಸಮಯದಲ್ಲಿ ಸೋನು ಸೂದ್ ಹೇಗೆ ಕಾರ್ಮಿಕರಿಗೆ ಸಹಾಯ ಮಾಡಿದ್ದರು, ಬಡವರ ಪಾಲಿನ ಅಶಾಕಿರಣ ಆಗಿ ಸೋನು ಮೂಡಿದ್ದು ಹೇಗೆ, ನೊಂದ ಜೀವಗಳಿಗೆ ಹೇಗೆ ಆಸರೆ ಆದರು, ಎಂಬುದನ್ನೇ ವಿಷಯವನ್ನಾಗಿ ಆರಿಸಿಕೊಂಡ ವಿಯಾನ್ ಅದನ್ನೇ ಪ್ರಾಜೆಕ್ಟ್ ಆಗಿ ಸಲ್ಲಿಸಿದ್ದಾನೆ. ಪುಟ್ಟ ಪೋರ ವಿಯಾನ್ ಕಾರ್ಟೂನ್ ಗಳನ್ನು ಬಳಸಿ ಸೋನು ಸೂದ್ ಮಾಡಿರುವ ಅತ್ಯುತ್ತಮ ಕಾರ್ಯವನ್ನು ಮರುಸೃಷ್ಟಿ ಮಾಡಿದ್ದಾನೆ.

ಮಗ ತಯಾರಿಸಿದ ಅದ್ಭುತವಾದ ಪ್ರಾಜೆಕ್ಟ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ ಸೋನು ಸೂದ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಒಟ್ಟಿನಲ್ಲಿ ಸೋನು ಸೂದ್ ಅವರು ತಮ್ಮ ಕಾರ್ಯಗಳಿಂದ ದೊಡ್ಡವರ ಮನ ಮಾತ್ರವಲ್ಲ ಮಕ್ಕಳ ಮನಸ್ಸು ಕೂಡಾ ಗೆದ್ದಿದ್ದಾರೆ ಎಂಬುದು ದಿಟ.
– ಅಹಲ್ಯಾ

LEAVE A REPLY

Please enter your comment!
Please enter your name here