ಸದ್ಯ ಸಾಕಷ್ಟು ನಿರೀಕ್ಷೆ ಹುಟ್ಟಿಸುತ್ತಿರುವ ಚಿತ್ರ ‘ರಾಬರ್ಟ್’, ಪ್ರಾರಂಭವಾದಾಗಿನಿಂದಲೂ ಒಂದಲ್ಲಾ ಒಂದು ರೀತಿ ಸದ್ದು ಮಾಡುತ್ತಲೇ ಇದೆ.ಚಿತ್ರದ ಮೊದಲ ಪೋಸ್ಟರ್ ಭಾರೀ ವೈರಲ್ ಆಗಿದ್ದು,ಚಿತ್ರಕ್ಕಾಗಿ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.. ಇನ್ನು ಪ್ರೇಕ್ಷಕರ ಮನ ಸೆಳೆಯಲು ನಿರ್ದೇಶಕ ತರುಣ್ ಸುಧೀರ್ ಹೊಸ ಹೊಸ ಪ್ರಯತ್ನ ಮಾಡುತ್ತಲೇ ಇರುತ್ತಾರೆ.. ಈಗಾಗಲೇ ಪಾಂಡಿಚೇರಿ, ಚೆನ್ನೈ, ಬೆಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಶೂಟಿಂಗ್ ಮುಗಿಸಿರುವ ಚಿತ್ರತಂಡ ಬನಾರಸ್ನತ್ತ ಮುಖ ಮಾಡಿದೆ.
ಇದೀಗ ರಾಬರ್ಟ್ ಚಿತ್ರ ತಂಡ ಚಿತ್ರೀಕರಣಕ್ಕಾಗಿ ಕಾಶಿಯಲ್ಲಿ ಬೇರೂರಿದ್ದು, ಪ್ರತಿಯೊಂದು ಶೆಡ್ಯೂಲ್ನಲ್ಲೂ ವಿಭಿನ್ನವಾದ ಜಾಗದಲ್ಲಿ ಚಿತ್ರೀಕರಣ ಮಾಡುತ್ತಿರುವುದರಿಂದ ಮೇಕಿಂಗ್ ಹೇಗಿರಬಹುದು ಎಂಬ ಕುತೂಹಲಗಳು ಡಿ.ಬಾಸ್ ಅಭಿಮಾನಿಗಳ ಮನದಲ್ಲಿ ಗೂಡು ಬಿಟ್ಟಿದೆ.
ಹಾಗೆಯೇ ನಿರ್ದೇಶಕ ತರುಣ್ ಸುಧೀರ್ ಅವರು ದರ್ಶನ್ ಅವರ ಕೆರಿಯರ್ನಲ್ಲೇ ಸೂಪರ್ ಡೂಪರ್ ಹಿಟ್ ನೀಡಲು ಪಣತೊಟ್ಟಿದ್ದು, ರಾಬರ್ಟ್ ಅನ್ನು ವಿಭಿನ್ನ ಕ್ವಾಲಿಟಿಯಲ್ಲಿ ಚಿತ್ರೀಕರಿಸುತ್ತಿದೆ. ಅದಕ್ಕಾಗಿ ಅತ್ಯಾಧುನಿಕ ಕ್ಯಾಮೆರಾ, ಅದ್ಧೂರಿ ಸೆಟ್ಗಳನ್ನು ನಿರ್ಮಿಸಲಾಗಿದೆ. ಒಂದು ಮೂಲದ ಪ್ರಕಾರ ಹಾಲಿವುಡ್ ಚಿತ್ರ ಡಾರ್ಕ್ ನೈಟ್ ಮಾದರಿಯಲ್ಲಿ ರಾಬರ್ಟ್ ಮೇಕಿಂಗ್ ನಡೆಯುತ್ತಿದೆಯಂತೆ.
ಸದ್ಯ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು ದೊಡ್ಡ ಸಂಚಲನವನ್ನೇ ಉಂಟು ಮಾಡಿದೆ.. ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ಆಶಾ ಭಟ್ ನಟಿಸುತ್ತಿದ್ದು, ಇತ್ತಿಚೆಗಷ್ಟೇ ತೇಜಸ್ವಿನಿ ಪ್ರಕಾಶ್ ಎಂಟ್ರಿ ಕೊಟ್ಟಿದ್ದರು. ಇದೀಗ ಮತ್ತೊಬ್ಬ ಚೆಲುವೆಯ ಆಗಮನವಾಗಿದೆ.
ಹೌದು, ಈ ಚಿತ್ರಕ್ಕೀಗ ‘ಶೃಂಗಾರದ ಹೂವು’ ಸೋನಲ್ ಮೊಂಥೆರೋ ನಟಿಸುತ್ತಿದ್ದು, ಮತ್ತೊಂದು ದೊಡ್ಡ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಂಡಿದ್ದಾರೆ ಈ ಮೊದಲು ಪಂಚತಂತ್ರ’ ಸಿನಿಮಾ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದ ಇವರು ಮೂಲತಃ ಮಂಗಳೂರಿನವರು..
ಇನ್ನು ತುಳು ಭಾಷೆಯ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ಸೋನಲ್, ‘ಎಕ್ಕ ಸಕ್ಕ’, ‘ಜೈ ತುಳು ನಾಡ್’, ‘ಪಿಲಿಬೈಲ್ ಯಮುನಕ್ಕ’ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಿರುವ ಇವರು ‘ಎಂಎಲ್ಎ’, ‘ಅಭಿಸಾರಿಗೆ’, ‘ಮದುವೆ ದಿಬ್ಬಣ’ ಮತ್ತು ‘ಪಂಚತಂತ್ರ’ ಚಿತ್ರಗಳಲ್ಲಿ ನಟಿಸಿದ್ದು, ‘ಬುದ್ದಿವಂತ-2’ ಮತ್ತು ‘ಡೆಮೋಪೀಸ್’ ಚಿತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ