ಕ್ಯಾನ್ಸರ್ ಎಂಬ ಮಾರಕ ಖಾಯಿಲೆ ಗೆದ್ದ ಕನ್ನಡದ ಖ್ಯಾತ ನಟಿ

0
807

ಕನ್ನಡದ ಖ್ಯಾತ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದ ಖ್ಯಾತ ನಟಿ ಇದೀಗ ಕ್ಯಾನ್ಸರ್ ಗೆದ್ದು , ತಮ್ಮ ಸಿನಿಮಾ ಕೆಲಸಕ್ಕೆ ಮರಳಿದ್ದಾರೆ . ಹೌದು , ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಅವ್ರ ಜೊತೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು ಆ ನಟಿ ಬೇರಾರು ಅಲ್ಲ ಸೋನಾಲಿ ಬೇಂದ್ರೆ. ಸೋನಾಲಿ ಬೇಂದ್ರೆ ಈ ಮುಂಚೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತನಗೆ ಅಪಾಯಕಾರಿ ಕ್ಯಾನ್ಸರ್ ಆಗಿರುವುದನ್ನ ಕೆಲವು ತಿಂಗಳುಗಳ ಹಿಂದೆ ಪೋಸ್ಟ್ ಮಾಡಿದ್ದರು.

“ಈ ಕಾಯಿಲೆ ಹೇಗೆ ನನ್ನ ಆವರಿಸಿತ್ತು ಅನ್ನೋದು ನನಗೆ ಗೊತ್ತೇ ಆಗಿರಲಿಲ್ಲ . ಸಣ್ಣ ಪುಟ್ಟ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ನಾನು ಪರೀಕ್ಷೆಗೆ ಒಳಗಾಗಬೇಕಾಯಿತು . ಹಾಗಾಗಿ ಅಪಾಯಕಾರಿ ಕ್ಯಾನ್ಸರ್ ರೋಗ ಇರೋದು ಪತ್ತೆಯಾಗಿತ್ತು” ಅಂತ ತಿಳಿಸಿದ್ದರು ಸೋನಾಲಿ. ಇನ್ನು ಆ ಸಂದರ್ಭದಲ್ಲಿ ನ್ಯೂಯಾರ್ಕ್ ಗೆ ಚಿಕಿತ್ಸೆಗೆ ತೆರಳುತ್ತಿದ್ದ ಸೋನಾಲಿ ಅವರಿಗೆ ಈ ರೀತಿ ಹೇಳಿಕೊಂಡಿದ್ದರು . “ನನ್ನ ಕುಟುಂಬ ಮತ್ತು ಸ್ನೇಹಿತರ ಬಲ ನನ್ನೊಂದಿಗೆ ಇದೆ ಹಾಗಾಗಿ ಯುದ್ದಕ್ಕೆ ಮುನ್ನಡಿ ಇಡುತ್ತಿದ್ದೇನೆ ಅಂತ ಹೇಳಿದ್ದರು”.

ಅದೇ ರೀತಿ ಈಗ ಅಪಾಯಕಾರಿ ಕ್ಯಾನ್ಸರ್ ರೋಗವನ್ನ ಗೆದ್ದು ಬಂದಿದ್ದಾರೆ ಸೋನಾಲಿ . ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ, “ತಾನು ಗುಣಮುಖರಾಗಿದ್ದೇನೆ ಮರಳಿ ನನ್ನ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ” ಅಂತ ಹೇಳಿದ್ದಾರೆ ಸೋನಾಲಿ ಬೇಂದ್ರೆ . ಹಾಗಾಗಿ ಸೋನಾಲಿ ಬೇಂದ್ರೆಗೆ ಇನ್ನಷ್ಟು ಒಳ್ಳೆಯದಾಗಲಿ ಅಂತ ಹೇಳ್ತಾ ನೀವು ಕೂಡ ಅವರಿಗೆ ಒಳ್ಳೆಯದಾಗಲಿ ಅಂತ ಹಾರೈಸಿ ಕಾಮೆಂಟ್ ಮೂಲಕ ತಿಳಿಸಿ

LEAVE A REPLY

Please enter your comment!
Please enter your name here