ಸ್ಲಿಮ್ ಆಗಲು ಸಿಕ್ಕಾಪಟ್ಟೆ ಹಣ ಖರ್ಚು ಮಾಡಿದ್ದೀರ? ನೀವು ಸ್ಲಿಮ್ ಆಗ್ಬೇಕೆ? ಅದಕ್ಕಿಲ್ಲಿದೆ ಸಿಂಪಲ್ ಟಿಪ್ಸ್.
ದೇಹದ ತೂಕವಿಳಿಸಲು ಇವನ್ನು ಸೇವಿಸಿ:
ದಿನ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬೂದಗುಂಬಳ ಜ್ಯೂಸ್ ಅನ್ನು ಸೇವಿಸಿ. ಈರೀತಿ ಸೇವಿಸಿದರೆ ತಿಂಗಳಿಗೆ 2 ರಿಂದ 3 ಕೆಜಿಯವರೆಗೂ ತೂಕ ಇಳಿಸಬಹುದು. ದಿನ ನಿತ್ಯ ಕುಡಿಯುವ ನೀರಿಗೆ ನಿಂಬೆಹಣ್ಣು ಸೇರಿಸಿ ಕುಡಿದರೆ ದೇಹದ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ದೇಹದಲ್ಲಿನ ಇಂಟಾಕ್ಸಿಕೆಂಟ್ಸ್ ನ್ನು ಕೂಡ ಹೊರಹಾಕುತ್ತದೆ.
ದಿನ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ನಿಂಬೆ ರಸ ಹಾಗು ಜೇನುತುಪ್ಪ ಸೇರಿಸಿ ಕುಡಿದರೆ ನಿಧಾನವಾಗಿ ದೇಹದಲ್ಲಿನ ಬೊಜ್ಜು ಕ್ರಮೇಣವಾಗಿ ಕರಗುತ್ತದೆ. ಗರಿಕೆ ಹುಲ್ಲಿನ ರಸ, ತುಳಸಿ ರಸ, ಬಿಳಿಎಳ್ಳಿನ ರಸ, ಶುಂಠಿ ರಸ ಎಲ್ಲವನ್ನು ಮಿಶ್ರಣ ಮಾಡಿ ಪ್ರತಿದಿನ ಒಂದು ಗ್ಲಾಸ್ ಕುಡಿಯುತ್ತಾ ಬಂದರೆ ಅಸಿಡಿಟಿ ಕಡಿಮೆಯಾಗುವುದರ ಜೊತೆಗೆ ದೇಹದ ತೂಕ ಇಳಿಸಲು ಸಹಾಯಮಾಡುತ್ತದೆ. ಅಲ್ಲದೆ ದೇಹವನ್ನು ತಂಪಾಗಿರಿಸುತ್ತದೆ.
ಪ್ರತಿ ನಿತ್ಯ ಗ್ರೀನ್ ಟೀ ಸೇವಿಸಿದರೆ ದೇಹದ ತೂಕವನ್ನು ಕ್ರಮೇಣವಾಗಿ ಇಳಿಸಬಹುದು. ತರಕಾರಿ ಸಲಾಡ್..ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ಬೆಚ್ಚಗಿನ ನೀರಿಗೆ ನಿಂಬೆ ರಸ, ಪುದೀನ, ಜೀರಿಗೆ ಸೇರಿಸಿ ಕುಡಿಯುವುದರಿಂದ ದೇಹದ ತೂಕ ಇಳಿಸಬಹುದು.
ದೇಹದ ತೂಕಿವಿಳಿಸಲು ನಿಮ್ಮ ರುಟೀನ್ ಹೀಗಿರಲಿ:
1. ಮುಂಜಾನೆ ಅರ್ಧ ಗಂಟೆಯಿಂದ ಒಂದು ಗಂಟೆಯವರೆಗು ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.
ದೇಹಕ್ಕೆ ಅವಶ್ಯಕ ಪೋಷಕಾಂಶವನ್ನು ನೀಡಲೇಬೇಕು. ಹಾಲು, ಧಾನ್ಯಗಳು, ಮೊಟ್ಟೆ, ಮತ್ತು ಫೈಬರ್ ಅಂಶವಿರುವ ತರಕಾರಿ ನಿಮ್ಮ ಆಹಾರದೊಂದಿಗಿರಲಿ. ತಿಂಡಿ ಹಾಗು ಊಟವನ್ನು ನಿಗದಿತ ಸಮಯಕ್ಕೆ ಮಾಡಲು ಅಭ್ಯಾಸ ಮಾಡಿಕೊಳ್ಳಿ. ಜಂಗ್ ಫುಡ್ಸ್, ಎಣ್ಣೆ ಪದಾರ್ಥಗಳನ್ನು ತಿನ್ನದಿರುವುದು ಒಳ್ಳೆಯದು.
ಹಿತ ಮಿತವಾದ ಆಹಾರ ಸೇವನೆ ನಿಮ್ಮದಾಗಲಿ. ಹೆಚ್ಚು ನೀರು ಕುಡಿಯುವುದರಿಂದ ದೇಹದ ಬೊಜ್ಜು ಕರಗುತ್ತದೆ.
ಒಂದೇ ಸಲ ಜಾಸ್ತಿ ತಿನ್ನುವುದರ ಬದಲು 2ಗಂಟೆಗೆ ಒಂದು ಸಲ ತನ್ನುವುದು ಒಳ್ಳೆಯದು.
ದಿನಕ್ಕೆ 6 ರಿಂದ 7 ಗಂಟೆಯ ಕಾಲ ನಿದ್ರೆ ಮಾಡಲೇಬೇಕು. ನಿದ್ದೆಗೆಡುವುದರಿಂದಲೂ ದೇಹದ ತೂಕ ಹೆಚ್ಚುತ್ತದೆ.