Come back ಅಂದ್ರೆ ಸಿಂಧುಗೆ ಕೆಂಡದಂತ ಕೋಪ

0
98
Loading...

ವಿವಾಹವಾದ ಬಳಿಕ ನಟಿಯರು ತೆರೆಯಿಂದ ಮರೆಗೆ ಸರಿಯುತ್ತಾರೆ. ಗಂಡ ಕುಟುಂಬ ಮಕ್ಕಳು ಎನ್ನುವ ಕಾರಣಕ್ಕೆ ಬಣ್ಣ ಹಚ್ಚುವುದನ್ನು ನಿಲ್ಲಿಸುತ್ತಾರೆ. ಒಬ್ಬೊಬ್ಬರು ಎಲ್ಲ ಮುಗಿದ ಮೇಲೆ ಎರಡನೇ ಇನ್ನಿಂಗ್ಸ್ ಕೂಡ ಶುರುಮಾಡುತ್ತಾರೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ವಿವಾಹದ ಬಳಿಕ ಚಿತ್ರರಂಗದಲ್ಲಿ ಮುಂದುವರಿದವರು ಇದ್ದಾರೆ. ಹಿಂದೆ ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರನ್ನಿಂಗ್ ಅಲ್ಲೇ ಇರುತ್ತಾರೆ. ಪ್ರಿಯಾಮಣಿ, ಮೇಘನಾರಾಜ್, ಐಂದ್ರಿತಾ ರೇ, ಹೀಗೆ ಹಲವು ನಟಿಯರು ಎರಡನೇ ಇನ್ನಿಂಗ್ಸ್ ಶುರು ಮಾಡಿದ ಹಿನ್ನೆಲೆಯಲ್ಲಿ ಸಿಂಧೂಲೋಕನಾಥ್ ಅವರು ಕೂಡ ಸೇರ್ಪಡೆಯಾಗುತ್ತಿದ್ದಾರೆ.

2009ರಲ್ಲಿ ಪರಿಚಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸಿಂಧು ಲೋಕನಾಥ್ 2011 ರಲ್ಲಿ ತೆರೆಕಂಡ ಲೈಫು ಇಷ್ಟೇನೆ ಚಿತ್ರದ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡರು. ನಂತರ ಡ್ರಾಮಾ ,ಯಾರೇ ಕೂಗಾಡಲಿ, ಕೇಸ್ ನಂಬರ್ 89, ಕಾಫಿ ವಿತ್ ಮೈ ವೈಫ್ , ನನ್ನ ಲೈಫಲ್ಲಿ ,ಲವ್ ಇನ್ ಮಂಡ್ಯ, ಜೈ ಭಜರಂಗಬಲಿ ,ರಾಕ್ಷಸಿ ಹೀಗೊಂದು ದಿನ, ಎಂದೆಂದು ನಿನಗಾಗಿ ಹೀಗೆ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸಿದರು ನಂತರ ಬೇಡಿಕೆ ಕಳೆದುಕೊಂಡ ಸಿಂಧೂ ತೆಲುಗು ಸಿನಿಮಾಗಳಲ್ಲಿ ನಟನೆಯನ್ನು ಶುರುಮಾಡಿದರು. ಅಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದರು. ಅಲ್ಲಿ ಕೂಡ ಅದೃಷ್ಟ ಕೈಹಿಡಿಯಲಿಲ್ಲ. ನಂತರ ಕೆಲವು ಕಂಪನಿಗಳ ರಾಯಬಾರಿ ಕೂಡ ಆದರು ನಂತರ ವೆಬ್ ಸೀರಿಸ್ ನಲ್ಲಿ ಕೂಡ ಕಾಣಿಸಿಕೊಂಡರು.

ಹಾಗೆ ಚಿತ್ರರಂಗದಿಂದ ಮರೆಯಾದ ಸಿಂಧು ಈಗ ಸುದ್ದಿಯಾಗಿದ್ದು ಜಿಎಸ್ ಕೋಡಿಯಾಲ್ ಎನ್ನುವವರನ್ನು ವರಿಸುವ ಮೂಲಕ ಮದುವೆಯ ನಂತರ ಚಂದನವನದಿಂದ ದೂರವಾದ ಸಿಂಧು ಮನೆ ,ಮಕ್ಕಳು, ಕುಟುಂಬ ಎಂದು ಬ್ಯುಸಿಯಾದರು ಅವರು ಚಿತ್ರರಂಗಕ್ಕೆ ಬರುವುದಿಲ್ಲ ಎಂದು ಜನರು ಭಾವಿಸಿದ್ದರು ಆದರೆ ಜನರ ಮಾತನ್ನು ಸುಳ್ಳು ಮಾಡಿ ಕೃಷ್ಣ ಟಾಕೀಸ್ ಚಿತ್ರದ ಮೂಲಕ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಅಜಯ್ ರಾವ್ ಜೊತೆ ತೆರೆ ಮೇಲೆ ಬರುವ ಸಿಂಧು ಅಂದುಕೊಂಡಂತೆ ನಡೆದರೆ ಈ ವರ್ಷದ ಕೊನೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ ಈ ಚಿತ್ರವನ್ನು ಕಂಬ್ಯಾಕ್ ಸಿನಿಮಾ ಎಂದರೆ ಅದನ್ನು ಒಪ್ಪಿಕೊಳ್ಳಲು ನಟಿ ಸಿದ್ದವಿಲ್ಲ ನಾನು ಹತ್ತು ವರ್ಷದಿಂದ ಕನ್ನಡ ಚಿತ್ರರಂಗದಲ್ಲಿದ್ದೇನೆ. ಒಂದರ ಹಿಂದೆ ಒಂದು ಚಿತ್ರವನ್ನು ಮಾಡುತ್ತಿದ್ದೇನೆ.

ಕಳೆದವರ್ಷ ನನ್ನ ಚಿತ್ರದಲ್ಲಿ ಬಿಡುಗಡೆಯಾಗಿತ್ತು. ಯೋಗರಾಜ್ ಭಟ್ಟರ ಜೊತೆ ಕಾಣದಂತೆ ಮಾಯವಾದನು ಚಿತ್ರದಲ್ಲಿ ನಟಿಸಿದ್ದು ಅದು ರಿಲೀಸ್ ಆಗಬೇಕಷ್ಟೇ ಮದುವೆಯಿಂದ ಅವಕಾಶ ಕಡಿಮೆಯಾಗಿಲ್ಲ. ನಾನು ಸಿಕ್ಕಾಪಟ್ಟೆ ಚೂಸಿ ಹಾಗಾಗಿ ನನಗೆ ಸಿಗುವ ಪಾತ್ರಗಳು ಕಡಿಮೆ ನಾನು ಇಷ್ಟಪಡುವ ಅಂತ ಪಾತ್ರಗಳು ಸಿಕ್ಕರೆ ಅವು ಕಂಫರ್ಟ್ ಆಗಿದ್ದರೆ ನಾನು ಅದರಲ್ಲಿ ನಟಿಸುತ್ತೇನೆ .ಎಂದು ಸಿಂಧು ಅವರು ಎಲ್ಲಾ ನಟಿಯರ ರೀತಿಯೇ ಸಿಂಧು ಹೇಳಿದ್ದಾರೆ. ಆದರೆ, ಅವರು ನಟಿಸಿದ ಎಲ್ಲ ಚಿತ್ರಗಳಲ್ಲಿ ಗಲ್ಲ ಪೇಟೆಯಲ್ಲಿ ಸುದ್ದಿಮಾಡಿದ ಚಿತ್ರಗಳು ಎಷ್ಟು ಜನರ ಮನಸ್ಸಿಗೆ ತಲುಪಿದ್ದು ಎಷ್ಟು ಅನ್ನುವುದಷ್ಟೇ ಮುಖ್ಯ ಸಿಂಧು ಸಿನಿ ಜರ್ನಿಯ ಏರುಪೇರು ಎಲ್ಲರಿಗೂ ಗೊತ್ತಿದೆ.

ಮದುವೆಯ ನಂತರ ಕೃಷ್ಣ ಟಾಕೀಸ್ ಮೂಲಕ ಸಿಂಧು ಮೆಟ್ಟಿಲು ಹತ್ತುತ್ತಿದ್ದಾರೆ. ಎಂಟ್ರಿ ಯಲ್ಲಿ ಸಖತ್ ಸದ್ದು ಮಾಡಿದ ಕೊಡಗಿನ ಬೆಡಗಿ ನಂತರ ಸದ್ದು ಮಾಡಲಿಲ್ಲ. ಈಗೀಗ ಮದುವೆ ನಂತರ ಸಿಂಧು ಲೋಕನಾಥ್ ಅವರ ಅದೃಷ್ಟ ರೇಖೆ ಹೇಗಿದೆ ಎಂದು ಪರೀಕ್ಷೆ ಮಾಡಬೇಕು. ಜೈ ಭಜರಂಗಿ ಚಿತ್ರದ ನಂತರ ಸಿಂಧೂಲೋಕನಾಥ್ ಅಜಯ್ ರಾವ್ ಜೊತೆ ನಟಿಸುತ್ತಿದ್ದಾರೆ. ಲೈಫ್ ತ್ರಿಲ್ಲರ್ ಜಾರರ್ ಕಥೆಯಲ್ಲಿ ಇದ್ದು ,ಕಾಲೇಜ್ ಮುಗಿಸಿರುವ ಮಧ್ಯಮ ಹುಡುಗಿಯ ಪಾತ್ರದಲ್ಲಿ ಸಿಂಧು ಕಾಣಿಸಿಕೊಳ್ಳುತ್ತಿದ್ದಾರೆ ಸಿಂಧೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ ಎಂದು ಆಸೆ ಕನಸು ಇಟ್ಟುಕೊಳ್ಳಬೇಡಿ ಹಿಂದಿನ ಚಿತ್ರಗಳಲ್ಲಿ ಗ್ಲಾಮರಸ್ ಪಾತ್ರ ಈ ಚಿತ್ರದಲ್ಲಿ ಇಲ್ಲ.

Loading...

LEAVE A REPLY

Please enter your comment!
Please enter your name here