ಇಲ್ಲಿಯವರೆಗೂ ಯಾರೂ ಮಾಡದ ಸಾಧನೆಯನ್ನು ಮಾಡಿದ ಸಿಂಧು!

0
548

ಸ್ವಿಜರ್‍ಲ್ಯಾಂಡ್‍ನ ಬಾಸೆಲ್'ನಲ್ಲಿ ಬಾನುವಾರ ನಡೆದ ಬಿ.ಡಬ್ಲು.ಎಫ್ ವರ್ಡ್ ಚಾಂಪಿಯನ್‍ಶಿಪ್ ಬ್ಯಾಡ್ಮಿಂಟನ್.. ಟೂರ್ನಿಯಲ್ಲಿ, ಭಾರತದ ಸ್ಟಾರ್ ಆಟಗಾರತಿ ಪಿ.ವಿ ಸಿಂಧೂ ಅವರು ಚಾಂಪಿಯನ್ ಪಟ್ಟವನ್ನು ಗೆದ್ದಿದ್ದಾರೆ. ಈ ಪಂದ್ಯಾಟದಲ್ಲಿಬಂಗಾರ’ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಿ.ವಿ ಸಿಂಧೂ ಪಾತ್ರರಾಗಿದ್ದಾರೆ.

ಮಹಿಳಾ ಸಿಂಗಲ್ ಪೈನಲ್ಸ್ ನಲ್ಲಿ ಸಿಂಧೂರವರು, ಜಪಾನಿನ ಬಲಿಸ್ಟ ಆಟಗಾರ್ತಿ ನೊಜೋಮಿ ಒಕೊಹರ' ವಿರುದ್ಧ 21-7 ರ ನೇರ ಸೆಟ್ ಗೆಲುವನ್ನ ಸಾದಿಸದರು. ಆರಂಭದಿಂದಲು ಮುನ್ನಡೆ ಸಾಧಿಸಿ ಬಂದ ಸಿಂಧೂ,ಎದುರಾಳಿಗೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದರು. B.W.F. World ಚಾಂಪಿಯನ್‍ಶಿಪ್ ಪೈನಲ್‍ಗೆ ಸಿಂಧೂ ಅರ್ಹತೆ ಗಿಟ್ಟಿಸಿಕೊಂಡಿರುವುದ, ಇದು ಮೂರನೇ ಬಾರಿ! ಈ ಮೂರನೇ ಫೈನಲ್ನಲ್ಲಿ ಸಿಂಧೂ ಅವರಿಗೆ ಪ್ರಶಸ್ತಿ ಲಬಿಸಿದೆ. 2018 ರ ಪೈನಲ್ಸ್ ನಲ್ಲಿ ಸಿಂಧೂ, ಸ್ಪೇನ್‍ನ ಬಲಿಷ್ಟೇ ಕೆರೊಳಿನ್ ಎದುರು ಪರಬಾವಗೊಂಡಿದ್ದರು, ಸೆಮಿಪೈನಲ್ಸ್ ನಲ್ಲಿ ಸಿಂಧೂ ಇಂಗ್ಲೇಂಡ್‍ನಲ್ಲಿ, ಆಲ್ ಇಂಗ್ಲೇಂಡ್ ಚಾಂಪಿಯನ್‍ಶಿಪ್ ಚೈನಿಸ್ ಆಟಗಾರ್ತಿಚೆನ್‍ಯುಪಿ ಎದುರು 21-7 ಮತ್ತು 21-14 ರ ನೇರಸೆಟ್ ಗೆಲುವನ್ನ ಸಾಧಿಸಿ ಪೈನಲ್ಸ್ ಗೆ ಲಗ್ಗೆ ಇಟ್ಟಿದ್ದರು.

ಈ ಬಾರಿ ಪೈನಲ್ಸ್ ನಲ್ಲಿ ಸಿಂಧೂ ವಿರುದ್ಧ ಸೋತಿರುವ `ನೊಜೋಮಿ ಒಕೊಹರ’ 2017 ರಲ್ಲಿ,ಇದೇ ಟೂರ್ನಿ ಚಾಂಪಿಯನ್ ಪಟ್ಟವನ್ನ ಗೆದ್ದಿದ್ದರು. ಒಟ್ಟಾರೆ ಭಾರತದ ಬ್ಯಾಡ್ಮಿಂಟನ್..
ಇತಿಹಾಸದಲ್ಲಿ ಇಲ್ಲಿಯವರೆಗೂ ಯಾರೂ ಮಾಡದ ಸಾಧನೆಯನ್ನು ಪಿ.ವಿ ಸಿಂಧೂ ಮಾಡಿದ್ದಾರೆ! ಪಿ.ವಿ ಸಿಂಧೂರವರ ಈ ಸಾಧನೆಗೆ ಭಾರತೀಯರು ಸಂತಸ ವ್ಯಕ್ತಪಡಿಸಿದ್ದು, ಎಲ್ಲೆಡೆ ಶುಭಾಷಯದ ಮಾಹಾಪೂರವೆ ಹರಿದುಬರುತ್ತಿವೆ!

LEAVE A REPLY

Please enter your comment!
Please enter your name here