ಮೊಡವೆ ಸಮಸ್ಯೆಯಿಂದ ಮುಕ್ತರಾಗಲು ಇಲ್ಲಿದೆ ಸರಳ ಮನೆ ಮದ್ದು..!

0
249

ಮೊಡವೆ ಸಮಸ್ಯೆ ಇಂದಿನ ಯುವಕ, ಯುವತಿಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ ಎನ್ನಬಹುದು. ತಮ್ಮ ಸುಂದರ ಮುಖದಲ್ಲಿ ಒಂದೆ ಒಂದು ಮೊಡವೆ ಆದರೆ ನಮ್ಮ ಯುವಕರಿಗೆ ಆದರಲ್ಲೂ ಯವತಿಯರಿಗೆ ಬಹಳ ಹಿಂಸೆ ಆಗುವುದಂತೂ ಖಂಡಿತ ಎನ್ನಬಹುದು. ಮೊಡವೆ ಆದರೆ ಸಾಕು, ಮನೆಯಿಂದ ಹೊರ ಬರಲು ಹತ್ತು, ಹಲವು ಭಾರಿ ಯೋಚನೆ ಮಾಡುತ್ತಾರೆ.

ಇಂಥ ಸಮಸ್ಯೆಗೆ ವೈದ್ಯರ ಬಳಿ ಹೋಗುವ ಮುನ್ನ,ನಿಮ್ಮ ಮನೆಯಲ್ಲಿ ಸಿಗುವ ಔಷಧವನ್ನು ಬಳಸಿಕೊಂಡು ಮೊಡವೆ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು. ಮನೆಯಲ್ಲೇ ಸಿಗುವ ಸುಲಭ ಮನೆ ಮದ್ದು ಇಲ್ಲಿದೆ ನೋಡಿ ಅನುಸರಿಸಿ,

  1. ಆಲೋವೆರಾ : ಆಲೋವೇರಾದಲ್ಲಿ ಆಂಟಿ-ಬ್ಯಾಕ್ಟಿರಿಯಲ್ ಹಾಗೂ ನೀರಿನ ಅಂಶ ಹೆಚ್ಚಿರುವ ಕಾರಣ ಮೊಡವೆಯನ್ನು ನಿವಾರಿಸುವಲ್ಲಿ ಸಹಕಾರಿ. ಡ್ರೈ ಸ್ಕಿನ್ ಇರುವವರು, ಆಲೋವೆರಾ ಬಳಸುವುದು ಸೂಕ್ತ.
  2. ಜೇನುತುಪ್ಪ : ಜೇನುತುಪ್ಪ ಹಲವು ಸಮಸ್ಯೆಗಳಿಗೆ ಪರಿಣಾಮಕಾರಿ ಔಷಧವಾಗಿದೆ. ಜೇನುತುಪ್ಪದಲ್ಲಿ ಹೆಚ್ಚು ಆಂಟಿ-ಆಂಕ್ಸಿಡೆಂಟ್‍ಗಳ ಪ್ರಮಾಣ ಹೆಚ್ಚಿರುವ ಕಾರಣ, ಮೊಡವೆ ಸಮಸ್ಯೆಯನ್ನು ಕೂಡಲೆ ಶಮನ ಮಾಡುತ್ತದೆ.
  3. ಬೆಳ್ಳುಳ್ಳಿ : ಬೆಳ್ಳುಳ್ಳಿಯಲ್ಲಿ ಆನೇಕ ಔಷಧ ಗುಣಗಳಿದ್ದು, ಆಲರ್ಜಿ ಮತ್ತು ಬ್ಯಾಕ್ಟಿರಿಯಾ ಸಮಸ್ಯೆ ವಿರುದ್ಧ ತೀವ್ರವಾಗಿ ಹೋರಾಡುತ್ತದೆ.
  4. ಗ್ರೀನ್ ಟೀ : ಗ್ರೀನ್ ಟೀ ಸೇವಿಸುವುದು ಬಹಳ ಲಾಭದಾಯಕ. ಯಾಕೆಂದರೆ, ಗ್ರೀನ್ ಟೀಯಲ್ಲಿ ಹೆಚ್ಚು ಆಂಟಿ-ಆಂಕ್ಸಿಡೆಂಟ್‍ಗಳಿದ್ದು, ಮೊಡವೆ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಕರಿಸುತ್ತದೆ.

LEAVE A REPLY

Please enter your comment!
Please enter your name here