SIMA award, ಪಕ್ಷ ಪಾತ್ರವೇ ?

0
182

SIIMA ಅವಾರ್ಡ್ ,ದಕ್ಷಿಣ ಭಾರತ ತಾರೆಯರ ಅದ್ಧೂರಿ ಕಾರ್ಯಕ್ರಮ ಅಂತಾನೇ ಹೇಳಬಹುದು.ವರ್ಷಕ್ಕೊಮ್ಮೆ ನಡೆಯುವ ಈ ಅವಾರ್ಡ್ ಫಂಕ್ಷನ್ನಲ್ಲಿ, ದಕ್ಷಿಣ ಭಾರತದ ಚಿತ್ರ ತಾರೆಯರೆಲ್ಲ ಒಟ್ಟಾಗಿ ಸೇರುವಂತಹ ಬೃಹತ್ ವೇದಿಕೆ ಇದಾಗಿದೆ!

ಇನ್ನು ಈ ಬಾರಿಯೂ ಸಹ ಕಾತರ್ ನಲ್ಲಿ ನಡೆದ ಪ್ರಶಸ್ತಿ ಸಮಾರಂಭವು ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು ! ಕನ್ನಡದ ನೆಚ್ಚಿನ ನಟ ನಟಿಯರಿಗೆ ಹಾಗೂ ತಂತ್ರಜ್ಞರಿಗೆ ಗೌರವ ಸಲ್ಲಿಸುವ ವೇದಿಕೆ ಇದಾಗಿದೆ !
ಇನ್ನು ಈ ವೇದಿಕೆಯಲ್ಲಿ ಕನ್ನಡದ ಹೆಮ್ಮೆ ಹಾಗೂ ಕನ್ನಡ ಚಿತ್ರರಂಗದಲ್ಲಿ ಇತಿಹಾಸವನ್ನೇ ನಿರ್ಮಿಸಿದ , ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೆ ಬರೋಬ್ಬರಿ 8 ಅವಾರ್ಡ್ಗಳು ಬಂದಿವೆ !
ಮತ್ತು ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ ಚಿತ್ರ ಅಯೋಗ್ಯ ಚಿತ್ರಕ್ಕೆ 3 ಅವಾರ್ಡ್ ಗಳು ಲಭಿಸಿದೆ !
ಹಾಗೆಯೇ ಸುಕ್ಕ ಸೂರಿ ಮತ್ತು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರಕ್ಕೆ 3 ಅವಾರ್ಡ್ ಲಭಿಸಿದೆ..

ಉಳಿದಂತೆ ರಿಷಬ್ ಶೆಟ್ಟಿ ಅವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು, ಚಿತ್ರಕ್ಕೆ 1 ಅವಾರ್ಡ್ ಬಂದಿದೆ !

ಈ ರೀತಿ ಪ್ರಶಸ್ತಿ ಬಂದಿದ್ದು ಕೆಲವರಿಗೆ ಖುಷಿಯಾದರೆ ,ಇನ್ನು ಕೆಲವರಿಗೆ ಬೇಸರ ಉಂಟಾಗಿದೆ !

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಟಗರು ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಿ, ಯಶಸ್ವಿ ಒಂದು ವರ್ಷಗಳ ಕಾಲ ಪ್ರದರ್ಶನ ಕಂಡಿತ್ತು ! ಭಾರತದಲ್ಲದೆ, ಅಂತಾರಾಷ್ಟ್ರೀಯ ದಲ್ಲೂ ಟಗರು ಸದ್ದು ಮಾಡಿತ್ತು ! ಈ ಚಿತ್ರ ಸೂರಿಯವರಿಗೆ ಮಾತ್ರವಲ್ಲದೆ ಹಲವಾರು ಕಲಾವಿದರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ !
ಇನ್ನು ಈ ಚಿತ್ರಕ್ಕೆ ಕೇವಲ 3 ಪ್ರಶಸ್ತಿಗಳು ಬಂದಿರುವುದನ್ನು ನೋಡಿ ನಟ ಹಾಗೂ ನಿರ್ದೇಶಕ ರಘುರಾಮ್ ಸೈಮಾ ಅವಾರ್ಡ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಅವಾರ್ಡ್ಸ್ ಪಡೆದುಕೊಳ್ಳೋದು ಸಂಸ್ಕಾರ ಕೆಲವರ ಅವಶ್ಯಕತೆಗೆ ಮಿಕ್ಕವರ ಅನಿವಾರ್ಯತೆಗೆ ಪ್ರಶಸ್ತಿಗಳನ್ನ ಕೊಡೋದು ವ್ಯವಹಾರ ವಿಶ್ವಾದ್ಯಂತ ಜನಪ್ರಿಯವಾಗಿರೋ ಟಗರು ಚಿತ್ರಕ್ಕೆ ,ಹಾಡಿಗೆ,ಹಾಡುಗಾರನಿಗೆ, ಸಂಗೀತ ನಿರ್ದೇಶಕನಿಗೆ, ಚಿತಕಥೆಗೆ ,ಗುರುತು ಗೌರವ ಸಿಗದೇ ಇರೋದು

@SIIMA
ಅವರ ಪಕ್ಷಪಾತದ ನಿರ್ಧಾರ..
@kp_sreekanth
#Tagaru

ಎಂದು ಟ್ವೀಟ್ ಮಾಡುವ ಮುಖಾಂತರ ಸೈಮಾ ಅವಾರ್ಡ್ ಫಂಕ್ಷನ್ ನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ

LEAVE A REPLY

Please enter your comment!
Please enter your name here