ಸದ್ದಿಲ್ಲದೆ ರಿಲೀಸ್ ಗೆ ರೆಡಿಯಾಗಿದೆ ಆಯುಷ್ಮಾನ್ ಭವ !

0
169

ಆಪ್ತಮಿತ್ರ, ಆಪ್ತರಕ್ಷಕ, ಆರಕ್ಷಕ ಶಿವಲಿಂಗ ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿರುವ ನಿರ್ದೇಶಕ ಪಿ.ವಾಸು ಅವರು ಸದ್ದಿಲ್ಲದೆ ಮತ್ತೊಂದು ಸಿನಿಮಾದ ಚಿತ್ರೀಕರಣ ಮುಗಿಸಿ ಬಿಡುಗಡೆ ಮಾಡಲು ರೆಡಿಯಾಗಿದ್ದಾರೆ. ಪಿ.ವಾಸು ಅವರ ಸಿನಿಮಾಗಳೇ ಹಾಗೆ, ವಿಭಿನ್ನವಾದ ದೃಶ್ಯಾವಳಿಗಳು,ಬೆಚ್ಚಿ ಬೀಳಿಸುವಂತಹ ಸ್ಕ್ರೀನ್ ಪ್ಲೇ ಮತ್ತು ಪ್ರೇಕ್ಷಕರ ಮನಸ್ಸಿಗೆ ನಾಟುವಂತಹ ಭಾವನೆಗಳನ್ನು ಸಿನಿಮಾದಲ್ಲಿ ಅಳವಡಿಸಿರುತ್ತಾರೆ..

ಕನ್ನಡದ ಪ್ರತಿಷ್ಠಿತ ದ್ವಾರಕೀಶ್ ಚಿತ್ರ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಚಿತ್ರದಲ್ಲಿ ನಾಯಕನಟನಾಗಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯಿಸಿದ್ದಾರೆ. ಈಗಾಗಲೆ ಪಿ. ವಾಸು ಮತ್ತು ಶಿವಣ್ಣ ಅವರ ಜೋಡಿಯಲ್ಲಿ ಮೂಡಿಬಂದ ಶಿವಲಿಂಗ ಸಿನಿಮಾ ಬಾಕ್ಸ್ ಆಫೀಸ್‌ ನಲ್ಲಿ ಧೂಳೆಬ್ಬೆಸಿತ್ತು. ಈಗ ಮತ್ತೊಂದು ಸಿನಿಮಾದ ಮೂಲಕ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಅಂದಹಾಗೆ ಈ ಸಿನಿಮಾಗೆ ಮೊದಲು ಆನಂದ್ ಎಂಬುವ ಟೈಟಲ್ ಫಿಕ್ಸ್ ಮಾಡಿದ್ದರು,ಆದರೆ ಕೆಲವು ಕಾರಣದಿಂದ ಆನಂದ್ ಬದಲಿಗೆ ಆಯುಷ್ಮಾನ್ ಭವ ಎಂದು ಮರುನಾಮಕರಣ ಮಾಡಲಾಗಿದೆ..

ವಿಶೇಷ ಸಂಗತಿ ಏನೆಂದರೆ ಇದೇ ಮೊದಲ ಬಾರಿಗೆ ಶಿವಣ್ಣ ಅವರು ದ್ವಾರಕೀಶ್ ಅವರ ಬ್ಯಾನರ್ ನಲ್ಲಿ ಅಭಿನಯಿಸುತ್ತಿದ್ದಾರೆ. ಚೌಕ, ಅಮ್ಮಾ ಐ ಲವ್ ಯೂ ನಂತಹ ಸೂಪರ್ ಹಿಟ್ ಫ್ಯಾಮಿಲಿ ಸಿನಿಮಾಗಳನ್ನು ನೀಡಿದಂತಹ ದ್ವಾರಕೀಶ್ ಬ್ಯಾನರ್, ಈಗ ಆಯುಷ್ಮಾನ್ ಭವ ಸಿನಿಮಾದ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದೆ. ಇದೊಂದು ಕುಟುಂಬ ಸಮೇತರಾಗಿ ಕುಳಿತುಕೊಂಡು ನೋಡುವಂತಹ ಸಿನಿಮಾವಾಗಿದ್ದು, ಶಿವಣ್ಣನಿಗೆ ಜೋಡಿಯಾಗಿ ರಚಿತಾರಾಮ್ ಅಭಿನಯಿಸಿದ್ದಾರೆ. ಜೊತೆಗೆ ಪೋಷಕ ಪಾತ್ರದಲ್ಲಿ ಮೊಸ್ಟ್ ಎನರ್ಜೆಟಿಕ್ ಹೀರೋ ಅನಂತನಾಗ್ ಬಣ್ಣ ಹಚ್ಚುತ್ತಿದ್ದು, ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದಾರೆ.ಒಟ್ಟಾರೆ ಚಿತ್ರತಂಡ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದೆ.

LEAVE A REPLY

Please enter your comment!
Please enter your name here