ಕಾಡುಗಳ್ಳ ವೀರಪ್ಪನ್ ನಿ೦ದ ‘ಅಪ್ಪಾಜಿ’ ಬಿಡುಗಡೆಗೆ ಕೈಜೋಡಿಸಿದ್ದ ಸಿದ್ಧಾರ್ಥ್

0
144

ವೀರಪ್ಪನ್ ನಿಂದ ಕರುನಾಡ ಆರಾಧ್ಯ ದೈವ ಡಾ ರಾಜ್ಕುಮಾರ್ ಅವರ ಅಪಹರಣವಾಗಿತ್ತು !

ಅಂದು ಜುಲೈ 30,2000ನೇ ಇಸ್ವಿ, ಕರ್ನಾಟಕ ರಾಜ್ಯದಲ್ಲಿ ಆತಂಕ ,ರೋಷ ,ಕಿಚ್ಚು ಎಲ್ಲವೂ ಸಹ ಒಟ್ಟಾಗಿ ಮುಗಿಲು ಮುಟ್ಟಿತ್ತು .. ಯಾಕೆಂದರೆ ಕನ್ನಡ ಚಲನಚಿತ್ರೋದ್ಯಮದ ಪ್ರಸಿದ್ಧ ನಟ ಡಾ ರಾಜ್ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ .. 108 ದಿನಗಳಾದರೂ ಅಪ್ಪಾಜಿಯವರ ಬಗ್ಗೆ ಸರಿಯಾದ ಮಾಹಿತಿಗಳು ಸಿಗುತ್ತಿರಲಿಲ್ಲ ..
ಈ ಅಪಹರಣದಿಂದಾಗಿ ಭಾರತದ ರಾಜ್ಯಗಳಾದ ತಮಿಳುನಾಡು ಮತ್ತು ಕರ್ನಾಟಕ ನಡುವಿನ ಸಂಬಂಧಗಳು ಮತ್ತಷ್ಟು ಹದಗೆಟ್ಟಿದ್ದವು ಮತ್ತು ಎರಡು ರಾಜ್ಯಗಳಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಿತ್ತು ..

ತದನಂತರ108 ದಿನಗಳ ನಂತರ ವೀರಪ್ಪನ್ ತನ್ನ ವಶದಿಂದ ನವೆಂಬರ್ 15,2000ರಂದು ಅಪ್ಪಾಜಿ ಅವರನ್ನು ಬಿಡುಗಡೆ ಮಾಡಿದ..

ಅಂದು ಕರ್ನಾಟಕ ರಾಜ್ಯದಲ್ಲಿ ಯುಗಾದಿ ಹಬ್ಬ ಎಂದೇ ಹೇಳಬಹುದು.. ಕರ್ನಾಟಕದ ಜನರಿಗೆ ಖುಷಿ ಮುಗಿಲು ಮುಟ್ಟಿತ್ತು

ಅಣ್ಣಾವ್ರನ್ನು ಆ ನರಕದಿಂದ ಹೊರ ತರಲು ರಾಜ್ಯ ಸರ್ಕಾರ ಮಾತ್ರವಲ್ಲದೆ ಅದರಲ್ಲಿ ಇನ್ನೊಬ್ಬರ ಕೈವಾಡವೂ ಸಹ ಇದೆ..
ಆದರೆ ಆ ವ್ಯಕ್ತಿ ಯಾರು ಎಂದು ಯಾರಿಗೂ ಗೊತ್ತಿಲ್ಲ ಮತ್ತು ಎಲ್ಲೂ ರಿವಿಲ್ ಕೂಡ ಮಾಡಿಲ್ಲ ..ಆದರೆ ಅಣ್ಣಾ ಅವರನ್ನು ಸೇಫ್ ಆಗಿ ಕರೆತರುವದರಲ್ಲಿ ಅವರು ಸಹಿತ ಯಶಸ್ವಿಯಾಗಿದ್ದರು .. ಅವರೇ ಇಂದು ನಿಗೂಢವಾಗಿ ಮೃತಪಟ್ಟಿರುವ ಕಾಫಿ ಡೇ ಸಂಸ್ಥಾಪಕರು ಸಿದ್ಧಾರ್ಥ್ !

ಹೌದು ಅಪ್ಪಾಜಿ ಅಪಹರಣವಾದ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದು ಸಿದ್ಧಾರ್ಥ್ ಅವರ ಮಾವ ಎಸ್ಎಂ ಕೃಷ್ಣ !

ಈ ವೇಳೆ ಮಾವನ ಸಹಾಯಕ್ಕೆ ಸಿದ್ಧಾರ್ಥ್ ಅವರು ಸಹಿತ ನಿಂತಿದ್ದರು !
ಇಲಾಖೆಗಳ ಜೊತೆ ಜೊತೆಗೆ ಎಸ್​ಎಂಕೆಗೆ ಸಂಧಾನಕ್ಕಾಗಿ ಹೊರಗಿನವರ ಸಹಾಯದ ಅವಶ್ಯಕತೆ ಇತ್ತು. ಇದನ್ನ ಯಾವುದೇ ಭಯವಿಲ್ಲದೆ ಸಿದ್ದಾರ್ಥ್​ ಮಾಡಿದ್ದರು. ಮೊದಲು ಸಿದ್ದಾರ್ಥ್​ ತಮಿಳುನಾಡಿನ ಹೋರಾಟಗಾರ ನೆಡುಮಾರನ್​, ಪತ್ರಕರ್ತ ನಕ್ಕಿರನ್ ಗೋಪಾಲ್​ ಸೇರಿ ಹಲವರನ್ನ ಭೇಟಿಯಾಗಿ ರಾಜ್​ಕುಮಾರ್​ ಅವರನ್ನ ಕರೆತರುವ ಬಗ್ಗೆ ಮಾತುಕತೆ ನಡೆಸಿದ್ರು. ಬಳಿಕ ಈ ವ್ಯಕ್ತಿಗಳು ಅಂದು ವೀರಪ್ಪನ್​ ಜೊತೆ ಮಾತುಕತೆ ನಡೆಸಿ ಡಾ.ರಾಜ್​ಕುಮಾರ್​ ಅವರನ್ನ ಬಿಡಿಸುವಲ್ಲಿ ದೊಡ್ಡ ಪಾತ್ರವಹಿಸಿದ್ದರು.

ಹೀಗೆ ಅಂದು ಅಪಹರಣವಾಗಿದ್ದ ಡಾ. ರಾಜ್​ಕುಮಾರ್​ ಅವರನ್ನ ಪತ್ತೆ ಹಚ್ಚುವಲ್ಲಿ, ಬಳಿಕ ಕರೆತರುವಲ್ಲಿ ಕಾಫಿ ಡೇ ಕಿಂಗ್​ ಅವರ ಪಾತ್ರ ಮಹತ್ತರವಾದದ್ದು

LEAVE A REPLY

Please enter your comment!
Please enter your name here