ಸಿದ್ಧಾರ್ಥ್ ಕೇವಲ 30 ಸಾವಿರದಿಂದ 22 ಸಾವಿರ ಕೋಟಿ ರೂ ಒಡೆಯನಾಗಿದ್ದು ಹೇಗೆ…!

0
181

ಕೆಫೆ ಕಾಫಿ ಡೇ
ಬಹುಶಃ ಈ ಹೆಸರನ್ನು ಕೇಳದವರೇ ಇಲ್ಲ
ಬೆಂಗಳೂರಿನಲ್ಲಿ ಅಂದು ಆರಂಭಗೊಂಡಿದ್ದ ಆ ಪುಟ್ಟ ಕಾಫಿ ಡೇ ಇಂದು ವಿಶ್ವದಾದ್ಯಂತ ಪ್ರಖ್ಯಾತಿಯನ್ನು ಪಡೆದುಕೊಂಡಿದೆ.
ಹಲವು ರಾಷ್ಟ್ರಗಳಲ್ಲಿ 1500 ಕ್ಕೂ ಅಧಿಕ ಮಳಿಗೆಗಳನ್ನು ಹೊಂದುವ ಮೂಲಕ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರನ್ನು ಇಂದು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದೆ.

ಅಂದು ತಂದುಕೊಟ್ಟ ಕೇವಲ 30 ಸಾವಿರ ರೂಪಾಯಿಯಲ್ಲಿ ಸಿದ್ಧಾರ್ಥ್ ಇಪ್ಪತ್ತು 22 ಸಾವಿರ ಕೋಟಿ ರೂಪಾಯಿ ಒಡೆಯನಾಗಿದ್ದು ಹೇಗೆ ಎನ್ನುವ ರೋಚಕ ಸ್ಟೋರಿಯನ್ನು
ಇವತ್ತು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಜನಿಸಿದ್ದ ಸಿದ್ಧಾರ್ಥ್
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ರು.

1983-1984 ರಲ್ಲಿ ಮುಂಬೈಗೆ ತೆರಳಿದ್ದ ಸಿದ್ದಾರ್ಥ್
ಜೆ ಎಂ ಪೈನಾನ್ಶಿಯಲ್ ಲಿಮಿಟೆಡ್ ನಲ್ಲಿ ಉದ್ಯೋಗಕ್ಕೆ ಸೇರಿಕೊಂಡರು
ನಂತರದಲ್ಲಿ ಮಹೀಂದ್ರ ಕಂಪನಿ ನೇತೃತ್ವದಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಪೋರ್ಟ್’ಪೋಲಿಯೊ ಮ್ಯಾನೇಜ್ಮೆಂಟ್ ಮತ್ತು ಸೆಕ್ಯೂರಿಟಿಸ್ ವಹಿವಾಟಿನಲ್ಲಿ ಮ್ಯಾನೇಜ್ಮೆಂಟ್ ಟ್ರೈನಿಯಾಗಿ ದುಡಿದರು.
ಎರಡು ವರ್ಷಗಳ ತರುವಾಯ ಊರಿಗೆ ಮರಳಿದ ಸಿದ್ದಾರ್ಥ್’ಗೆ ತಂದೆ 30 ಸಾವಿರ ರೂಪಾಯಿಗಳನ್ನು ಕೊಟ್ಟು ಸ್ವಂತ ಉದ್ಯೋಗ ಆರಂಭಿಸುವಂತೆ ಸೂಚಿಸಿದ್ದರು

ಅದರಂತೆಯೇ ಸಿದ್ದಾರ್ಥ್ ತನ್ನ 24ರ ವಯಸ್ಸಿನಲ್ಲಿ ಸ್ಟಾಕ್ ಮಾರ್ಕೆಟ್ ಕಾರ್ಡ್ನ ಖರೀದಿಸಿದರು
ಇದು ಮಾತ್ರವಲ್ಲ ಶಿವಂ ಸೆಕ್ಯೂರಿಟಿ ಅನ್ನುವ ಕಂಪನಿಯೊಂದನ್ನು ಆರಂಭಿಸಿದ್ದರು
ಆದರೆ ಶಿವಂ ಸೆಕ್ಯೂರಿಟಿಸ್ ಈಗ ವೇ ಟು ವೆಲ್ತ್ ಸೆಕ್ಯುರಿಟೀಸ್ ಲಿಮಿಟೆಡ್ ಅಂತ ಮರು ನಾಮಕರಣಗೊಳಿಸಲಾಗಿದೆ.

ಇದೆ ಕಂಪನಿ ಸಿದ್ಧಾರ್ಥ್’ಗೆ ಹೆಚ್ಚು ಲಾಭವನ್ನು ತಂದುಕೊಟ್ಟಿತು
ಸಿದ್ದಾರ್ಥ್ ದಿನೇದಿನೇ ಆರ್ಥಿಕವಾಗಿ ಸದೃಢವಾಗುತ್ತಲೇ ಸಾಗಿದ್ದರು.

ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್ ಎಂ ಕೃಷ ಅವರ ಪುತ್ರಿ ಮಾಳವಿಕ ಅವರನ್ನು ವಿವಾಹವಾಗಿದ್ದರು.
ಮೂಡಿಗೆರೆಯಲ್ಲಿ ತಮ್ಮ ತಂದೆಯ ಹೆಸರಿನಲ್ಲಿದ ಕಾಫಿ ತೋಟದ ಜೊತೆಗೆ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯಲ್ಲಿ ನಷ್ಟದಲ್ಲಿದ್ದ ಕಾಫಿ ತೋಟಗಳನ್ನು ಖರೀದಿ ಮಾಡಿದರೂ ಸಿದ್ದಾರ್ಥ್

ಹೀಗಾಗಿ ಅವರು ಎಬಿಸಿ ಕಂಪನಿಯ ಹೆಸರಿನಲ್ಲಿ ಸುಮಾರು 12 ಸಾವಿರ ಎಕರೆ ಕಾಫಿ ತೋಟದ ಮಾಲೀಕರಾಗಿದ್ದು
ಕೆಫೆ ಕಾಫಿಡೇಗೆ ಬೇಕಾಗುವ ಕಾಫಿಯನ್ನು ತಮ್ಮ ತೋಟದಲ್ಲಿ ಬೆಳೆಯುತ್ತಿದ್ದಾರೆ.

ಇನ್ನು ಚಿಕ್ಕಮಗಳೂರು ಹೊರವಲಯದಲ್ಲಿ ಅಂಬರ್ ವ್ಯಾಲಿ ಸ್ಕೂಲ್ ನಿರ್ಮಿಸಿದ ಸಿದ್ದಾರ್ಥ್ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ

ಜನಸಾಮಾನ್ಯರಿಗೆ ಪ್ರವೇಶ ಪಡೆಯುವುದಕ್ಕೆ ಸಾಧ್ಯವಿಲ್ಲ
ದುಬಾರಿ ಶುಲ್ಕವನ್ನು ಹೊಂದಿರುವುದರಿಂದಾಗಿ ಪ್ರತಿಷ್ಠಿತರ ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ
ಜೊತೆಗೆ ಚಿಕ್ಕಮಗಳೂರಿನಲ್ಲಿ ಸೆರಾಯ್ ರೆಸಾರ್ಟ್’ಅನ್ನು ಆರಂಭಿಸಿದರು ಸಿದ್ದಾರ್ಥ್.

ಹೋಟೆಲ್ ಉದ್ಯಮಗಳಲ್ಲಿ ಸೈ ಎನಿಸಿಕೊಂಡಿದ್ದರೂ
ಬದುಕನ್ನೇ ಬದಲಾಯಿಸಿತು ಈ ಕಾಫಿ
ಉದ್ಯಮ ಷೇರು ವ್ಯವಹಾರದಲ್ಲಿ ಸುಮಾರು 15 ವರ್ಷಗಳ ಕಾಲ ತನ್ನನ್ನು ತೊಡಗಿಸಿಕೊಂಡಿದ್ದ ಸಿದ್ದಾರ್ಥ್.

ನಂತರದಲ್ಲಿ ತನ್ನ ಹುಟ್ಟೂರಿನಲ್ಲಿ ಕಾಫಿ ಉದ್ಯಮವನ್ನು ಆರಂಭಿಸಿದರು
ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ 1993ರಲ್ಲಿ ಅಮಾಲ್ ಮೇಟೆಡ್ ಬೀನ್ ಕಂಪನಿಯನ್ನು ಸ್ಥಾಪನೆ ಮಾಡಿದ್ದ ಸಿದ್ಧಾರ್ಥ್’ಗೆ ಕಾಫಿ ಉದ್ಯಮ ಚೆನ್ನಾಗಿ ಕೈ ಹಿಡಿದಿತ್ತು.

ಚಿಕ್ಕಮಗಳೂರು ,ಹಾಸನ ಹಾಗೂ ಮಡಿಕೇರಿ ಜಿಲ್ಲೆಯಲ್ಲಿ ಬೆಳೆಯುವ ಕಾಫಿಯನ್ನು ಖರೀದಿ ಮಾಡುತ್ತಿದ್ದ
ಎಬಿಸಿ ಆರಂಭದಲ್ಲಿ ವಾರ್ಷಿಕ ಸುಮಾರು 28 ಸಾವಿರ ಟನ್ ಕಾಫಿಯನ್ನು ರಫ್ತು ಮಾಡುತ್ತಿತ್ತು

ಕಂಪನಿ ಬೆಳೆಯುತ್ತಿದ್ದಂತೆಯೇ ಹಾಸನ ಜಿಲ್ಲೆಯಲ್ಲಿ ಅನಾರೋಗ್ಯದಲ್ಲಿದ್ದ ಕಾಫಿ ಕ್ಯೂರಿಂಗ್ ಘಟಕವನ್ನು ಖರೀದಿ ಮಾಡಿದರು
ಈಗ ಸುಮಾರು 75 ಸಾವಿರ ಟನ್ ಗಳಷ್ಟು ಕಾಫಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಕಂಪನಿ ಹೊಂದಿದೆ .

ಕಾಫಿ ಡೇ ಬ್ರ್ಯಾಂಡ್’ನ ಕಾಫಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಉತ್ತಮ ಬೇಡಿಕೆ ಇದೆ
ಅಲ್ಲದೆ ಹಸಿರು ಕಾಫಿಯನ್ನು ರಫ್ತು ಮಾಡುವ ಭಾರತದ ಅತಿ ದೊಡ್ಡ ರಫ್ತುದಾರ ಕಂಪನಿ ಹಾಗೂ ಏಷ್ಯಾದ ಎರಡನೇ ದೊಡ್ಡ ಕಂಪನಿ ಅನ್ನುವ ಖ್ಯಾತಿಯನ್ನು ಎಬಿಸಿ ಪಾತ್ರವಾಗಿದೆ

1996 ರಲ್ಲಿ ಕಾಫಿ ಡೇ ಆರಂಭ
90ರ ದಶಕದಲ್ಲಿ ಜನರೆಲ್ಲ ಕಾಫಿ ಕುಡಿಯಬೇಕು ಅಂದ್ರೆ ಹೋಟೆಲ್ಗಳಿಗೆ ಹೋಗಬೇಕಾಗಿತ್ತು
ಆದರೆ ಕಾಫಿ ಪೌಡರ್ ತಯಾರಿಕೆಯನ್ನು ಆರಂಭಿಸಿದ ಸಿದ್ದಾರ್ಥ್ ತಾವೆ ಕಾಫಿ ಕೆಫೆ ಯೊಂದನ್ನು ಆರಂಭಿಸುವುದಕ್ಕೆ ಮುಂದಾದರು

1996 ರಲ್ಲಿ ಬೆಂಗಳೂರಿನ ಎಂ ಜಿ ರಸ್ತೆಯಲ್ಲಿ
ಕಾಫಿ ಡೇ ಹೆಸರಲ್ಲಿ ಕೆಫೆಯನ್ನು
ತೆರೆದರು
ಆ ಕಾಲದಲ್ಲಿ ಕಾಫಿ ಡೇ ಆರಂಭವಾದಾಗ ಕೆಫೆಯಲ್ಲಿ ಕುಳಿತು ಕಾಫಿ ಹೀರೋದಕ್ಕೆ ಯುವ ಸಮೂಹವೇ ಮುಂದಾಗಿತ್ತು.

ಮೊದಲ ಕೆಫೆ ಕಾಫಿಡೇ ಉತ್ತಮ ವ್ಯವಹಾರ ಮಾಡುವುದಕ್ಕೆ ಶುರುವಾಗುತ್ತಿದ್ದಂತೆ
ಸಿದ್ದಾರ್ಥ್ ನಂತರದಲ್ಲಿ ಹಂತ ಹಂತವಾಗಿ ಔಟ್ಲೆಟ್ಗಳನ್ನು ವಿಸ್ತರಣೆ ಮಾಡುವುದಕ್ಕೆ ಮುಂದಾದರೂ .
ಅದೇ ಸಮಯದಲ್ಲಿ ಬೆಂಗಳೂರಿನಲ್ಲಿ ಐಟಿ ಉದ್ಯಮ ಕೂಡ ಬೆಳೆಯೋದಿಕ್ಕೆ ಶುರುವಾಗಿತ್ತು

ಇದನ್ನು ಗಮನಿಸಿದ ಸಿದ್ದಾರ್ಥ್ ಐಟಿ ಕಂಪನಿಗಳಲ್ಲಿ ಕಾಫಿ ಡೇ ಔಟ್ ಲೆಟ್ ಗಳನ್ನು ಆರಂಭಿಸಿದರು
ನಂತರದಲ್ಲಿ ದೇಶದಲ್ಲಿರುವ ವಿಮಾನ ನಿಲ್ದಾಣದಲ್ಲಿ ಕೆಪೆ ಕಾಫಿ ಡೇ ಕಾರ್ಯನಿರ್ವಹಿಸುವುದಕ್ಕೆ ಶುರುವಾಯ್ತು

ಇಷ್ಟೇ ಅಲ್ಲ ವಿದೇಶಗಳಲ್ಲಿ ಕೂಡ ಕೆಫೆ ಕಾಫಿಡೇಯನ್ನು ತೆಗೆದ್ರು

ಇದೀಗ ಕಾಫಿ ಡೇ ವಿಶ್ವದಾದ್ಯಂತ ಕಾಫಿ ಡೇ ಲೇಔಟ್ಗಳನ್ನು ಮುಂದೊಂದು ಕೆಫೆಗಳು ವಾರ್ಷಿಕವಾಗಿ ಸುಮಾರು 40 ಸಾವಿರದಿಂದ 50 ಸಾವಿರ ಪ್ರವಾಸಿಗರನ್ನು ಆಕರ್ಷಿಸುತ್ತೆ.

ಐಟಿ ಕಂಪನಿಗಳಲ್ಲಿ ಷೇರು ಹೂಡಿಕೆ
ಕಾಫಿ ಹಾಗೂ ಷೇರು ಉದ್ಯಮದ ಮೂಲಕವೇ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದ
ನಂತರದಲ್ಲಿ 2002 ದಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವವರಿಗೆ ಮಾರ್ಗದರ್ಶನವನ್ನು ನೀಡುವ ಸಲುವಾಗಿಯೇ ಗ್ಲೋಬಲ್ ಟೆಕ್ನಾಲಜಿ ವೆಂಚರ್ಸ್ ಲಿಮಿಟೆಡ್ ಆರಂಭಿಸಿದ್ದರು
ಅಲ್ಲದೆ ಜಿಟಿವಿ , ಮೈಂಡ್ ಟ್ರೀ , ಲಿಕ್ವಿಡ್ ಕ್ರಿಸ್ಟಲ್ ,
ವೇ ಟು ವೆಲ್ತ್ ಮತ್ತು ಇಂಟಿಯಂ ಕಂಪನಿಗಳಲ್ಲಿ ಬೋರ್ಟ್ ಸೀಟುಗಳನ್ನು ಹೊಂದಿದ್ದಾರೆ.

ಪೀಠೋಪಕರಣ ತಯಾರಿಕಾ ಕಂಪನಿ ಆರಂಭ
ಕಾಫಿ ಉದ್ಯಮದ ಜೊತೆಗೆ ಸಿದ್ದಾರ್ಥ್ ಚಿಕ್ಕಮಗಳೂರಿನಲ್ಲಿರುವ ಕತ್ತಲೆ ಕಾಡು ಎಸ್ಟೇಟಲ್ಲಿ
ಸುಮಾರು ಆರು ಲಕ್ಷ ಚದುರಾದ ಅಡಿ ವಿಸ್ತಾರದಲ್ಲಿ ಪೀಠೋಪಕರಣಗಳನ್ನು ಸಿದ್ಧಪಡಿಸುವ ಕಾರ್ಖಾನೆಯನ್ನು ತೆರೆಯುವುದಕ್ಕೆ ಪ್ಲ್ಯಾನ್ ರೂಪಿಸಿದರು

ಭಾರತದ ಕಾಫಿ ತೋಟದಲ್ಲಿರುವ ಬೆಲೆ ಬಾಳುವ ಮರಗಳನ್ನು ತಂದು ಪೀಠೋಪಕರಣ ತಯಾರಿಸುವುದಕ್ಕೆ ಮುಂದಾಗಿದ್ರು.

ಅಲ್ಲದೆ ಗಯಾನಾದ ದಲ್ಲಿರುವ ಮಳೆ ಗಾರ್ಡ್’ನಿಂದ ಮರಗಳನ್ನು ತರೋದಕ್ಕೂ ಯೋಜನೆಯನ್ನು ರೂಪಿಸಿದ್ದಾರೆ ಎಂದು ದಕ್ಷಿಣ ಅಮೆರಿಕದ ಗಯಾನಾದಲ್ಲಿ ಸುಮಾರು 30 ವರ್ಷಗಳ ಅವಧಿಗೆ
ಒಂದು 1.85 ದಶಲಕ್ಷ ಹೆಕ್ಟೇರ್ ಅಮಾಜಾನಿನ್ ಅರಣ್ಯ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ಖರೀದಿಸಿದರು.

50 ಸಾವಿರ ಮಂದಿಗೆ ಉದ್ಯೋಗದಾತ

ಕಳೆದ ಮೂರು ದಶಕಗಳ ಅವಧಿಯಲ್ಲಿಯೇ ವಿಶ್ವದ ಪ್ರಸಿದ್ಧ ಉದ್ಯಮಿಯಾಗಿ ರೂಪುಗೊಂಡಿದ್ದ ಸಿದ್ದಾರ್ಥ್ ಕಾಫಿ ಡೇ ಹಾಗೂ ಗ್ಲೋಬಲ್ ಟೆಕ್ನಾಲಜಿ ವೆಂಚರ್ಸ್ ಲಿಮಿಟೆಡ್ ಮೂಲಕವಾಗಿಯೇ 50 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗವನ್ನು ನೀಡಿದ್ರು

ಅದರಲ್ಲೂ ಕಾಫಿ ಡೇ ಸಂಸ್ಥೆಯ ಮೂಲಕ ಜಗತ್ತಿನಾದ್ಯಂತ ಸುಮಾರು 30 ಸಾವಿರ ಮಂದಿ ಉದ್ಯೋಗ ವನ್ನು ಪಡೆದು
ಐಟಿ ಕಂಪನಿಯ ಮೂಲಕ 20 ಸಾವಿರ ಮಂದಿಗೆ ಉದ್ಯೋಗ ದಾತರಾಗಿದ್ದರು ಸಿದ್ದಾರ್ಥ್ .

ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವ ಮೂಲಕ ತಂದೆಯ ಕನಸನ್ನು ನನಸು ಮಾಡುವ ಪಣ ತೊಟ್ಟಿದ್ರು ಕೆಫೆ ಕಾಫಿ ಡೇ ಮೂಲಕವೇ ಜಗತ್ತಿನ ಶ್ರೀಮಂತ ಉದ್ಯಮಿಗಳ ಸಾಲಿನಲ್ಲಿ ನಿಂತಿದ್ದ ಸಿದ್ಧಾರ್ಥ್
ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದರು.

ಕಾಫಿ ಉದ್ಯಮದಲ್ಲಿ ವಿ ಜಿ ಸಿದ್ಧಾರ್ಥ್ ಯಶಸ್ಸು ಕಾಣುತ್ತಿದ್ದಂತೆ
ಈ ಹಿಂದೆ ಅಮೆರಿಕದ
ಖ್ಯಾತ ಕಾಫಿ ಮಳಿಗೆಯಾಗಿ ಇರುವ ಸ್ಟಾರ್ ಬಕ್ಸ್ ಹಾಗೂ ಟಾಟಾ ಸಂಸ್ಥೆಯ ಜೊತೆಯಾಗಿ ವಿಶ್ವದಾದ್ಯಂತ ಕಾಫಿ ಔಟ್ಲೆಟ್ಗಳನ್ನು ಆರಂಭಿಸುವುದಕ್ಕೆ ಒಂದಾಗಿತ್ತು
ಆದರೆ ಅಷ್ಟು ಸುಲಭಕ್ಕೆ ಕಾಫಿ ಡೇ ವ್ಯವಹಾರವನ್ನು ಕಸಿಯೋದಕ್ಕೆ ಸಾಧ್ಯವಾಗದರ ಮಟ್ಟಿಗೆ ಉದ್ಯಮವನ್ನು ಕಟ್ಟಿ ಬೆಳೆಸಿದರು.

ಇದಿಷ್ಟು ಕೆಫೆ ಕಾಫಿ ಡೇ ಮಾಲೀಕರಾದ ವಿ ಜಿ ಸಿದ್ದಾರ್ಥ್ ಅವರ ಬಗ್ಗೆ ಮಾಹಿತಿ.

ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ
ಧನ್ಯವಾದಗಳು.

LEAVE A REPLY

Please enter your comment!
Please enter your name here