ಅಧಿಕಾರ ಇಲ್ಲದಿದ್ರು ಮಾಜಿ ಸಿಎಂ ದರ್ಬಾರ್..! ಛೀ..ತೂ.. ಎಂದ ಜನ..!

0
969

ಅಧಿಕಾರದಿಂದ ಕೆಳಗಿಳಿದು ವರ್ಷಗಳೇ ಕಳೆದ್ರು ಮಾಜಿ ಸಿಎಂ ಸಿದ್ದರಾಯ್ಯನವರ ಪುಕ್ಕಟೆ ದರ್ಬಾರ್ ಮಾತ್ರ ಇಂದಿಗೂ ಮುಂದುವರೆದಿದೆ. ಸದಾ ನ್ಯಾಯದ ಪರ ಮಾತನಾಡುವ ಸಿದ್ದರಾಮಯ್ಯನವರೇ ಸ್ವತಃ ಜನಸಾಮಾನ್ಯರ ತೆರಿಗೆ ಹಣದಲ್ಲೇ ಓಡಾಟ ನಡೆಸಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹೌದು, ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಕೆಳಗಿಳಿದರೂ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಕಾರನ್ನೇ ಬಳಸುತ್ತಿರುವ ವಿಚಾರ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯನವರ ಈ ನಡೆಗೆ ಜನಸಾಮಾನ್ಯರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಹೌದು, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿದರೂ ಅಂದು ಸರ್ಕಾರ ನೀಡಿದ್ದ ಸರ್ಕಾರಿ ಕಾರನ್ನು ಇಂದಿಗೂ ವಾಪಾಸು ನೀಡಿಲ್ಲ. ಅಚ್ಚರಿ ಎಂದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿದ್ದಾಗ ಸಿದ್ದರಾಮಯ್ಯನವರು ಅವರು ಐದು ಕಾರುಗಳನ್ನು ಬಳಕೆ ಮಾಡುತ್ತಿದ್ದರು. ಈಗಲೂ ಅವರು ಆ ಐದು ಕಾರನ್ನು ಬಳಕೆ ಮಾಡುತ್ತಿದ್ದಾರೆ. ಜನಸಾಮಾನ್ಯರ ತೆರಿಗೆ ಹಣದಲ್ಲಿ ಪುಕ್ಕಟೆ ಓಡಾಟ ನಡೆಸುತ್ತಿದ್ದಾರೆ. ಸರ್ಕಾರಿ ನಿಯಮದ ಪ್ರಕಾರ ಮಾಜಿ ಸಿಎಂಗಳಿಗೆ 3 ಕಾರುಗಳು ಬಳಕೆ ಮಾಡಲು ಅವಕಾಶ ಇದೆ. ಆದರೆ, ಸಿದ್ದರಾಮಯ್ಯನವರು 5 ಕಾರು ಬಳಕೆ ಮಾಡುತ್ತಿದ್ದಾರೆ. ಇದು ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಇನ್ನು ಸರ್ಕಾರಿ ವಾಹನಗಳನ್ನು ವಾಪಸ್ ಕಳಿಸಿ ಎಂದು ಮಾಜಿ ಸಿಎಂಗೆ ಪೊಲೀಸ್ ಇಲಾಖೆ ಸೂಚನೆ ನೀಡಿದ್ದರು ಅವರು ಸೊಪ್ಪು ಹಾಕುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ತಕ್ಷಣಕ್ಕೆ ಈ ಬಗ್ಗೆ ಆದೇಶ ನೀಡಬೇಕು, ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಶೀಘ್ರವೇ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೂ ಸರ್ಕಾರಿ ಕಾರಿನ ವ್ಯಾಮೋಹ ಹೋಗಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯನವರ ಈ ದರ್ಬಾರ್ ಗೆ ಎಲ್ಲೆಡೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

LEAVE A REPLY

Please enter your comment!
Please enter your name here