ಸಿದ್ಧರಾಮಯ್ಯನವರ ಪುತ್ರ `ಯತೀಂದ್ರ’ ಕಾರು ನಿಯಂತ್ರಣ ತಪ್ಪಿ ಅಪಘಾತ..!!

0
128

ಮಾಜಿ ಮುಖ್ಯಮಂತ್ರಿ, ಸಿಎಲ್‍ಪಿ ನಾಯಕ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಅವರ ಟಯೋಟ ಫಾರ್ಚೂನರ್ ಕಾರು ಅಪಘಾತಕ್ಕಿಡಾಗಿದೆ. ಇಂದು ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ಪ್ರವಾಹಕ್ಕೆ ತುತ್ತಾಗಿರುವ ಸಂತ್ರಸ್ತರ ನರೆವಿಗೆ ಸಹಾಯ ಹಸ್ತ ನೀಡಲು ಸಿದ್ದರಾಮಯ್ಯನವರು ಭೇಟಿ ನೀಡಲು ಮುಂದಾಗಿದ್ದರು ಆದರೆ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಮಗ ಡಾ.ಯತೀಂದ್ರ ಅವರನ್ನು ಕಳುಹಿಸದ್ದರು.
ಯತೀಂದ್ರ ಅವರು ಬಾಗಲಕೋಟೆಗೆ ಭೇಟಿ ನೀಡಿ ಪ್ರವಾಹ ಪೀಡಿತರಿಗೆ ಸಹಾಯ ಹಸ್ತ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರವಾಹ ಸಂತ್ರಸ್ಥರನ್ನು ಭೇಟಿ ನೀಡಿ ಮೈಸೂರಿಗೆ ಹಿಂದಿರುಗುವಾಗ ಈ ದುರ್ಘಟನೆ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಚೆನ್ನಾಪುರ ಕ್ರಾಸ್ ಬಳಿ ಬರುವಾಗ ಕಾರ್ ವೇಗದಲ್ಲಿ ಇದ್ದ ಪರಿಣಾಮ ಎದರು ಬರುತ್ತಿದ್ದ ಬೈಕ್ ಸವಾರನಿಗೆ ಗುದ್ದಿದ್ದಾರೆ. ಬೈಕ್ ಹಾಗೂ ಸವಾರ ಪಕ್ಕದ ಹೊಲಕ್ಕೆ ಬಿದ್ದಿದ್ದಾರೆ. ಬೈಕ್ ನಜ್ಜುಗುಜ್ಜಾಗಿದ್ದು, ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ, ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಗಾಯಗೊಂಡ ವೈಕ್ತಿಯನ್ನು ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೋಲಿಸ್ ಅಧಿಕಾರಿಗಳು ವಾಹನ ಪರಿಶೀಲಿಸಿ ಯತೀಂದ್ರ ಅವರಿಗೆ ಬೈಕ್ ಸವಾರನ ಖರ್ಚನ್ನು ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here