ಸಂತ್ರಸ್ತರ ಆಕ್ರಂಧನ ಕೇಳಲಿಲ್ಲ, ರಾಹುಲ್ ಕರೆಗೆ ಓಗೊಟ್ಟು ದೆಹಲಿಗೆ ಜಿಗಿದ ಸಿದ್ದರಾಮಯ್ಯ…!

0
123

ಮಾಜಿ ಸಿಎಂ ಸಿದ್ದರಾಮಯ್ಯನವರ ನಡೆಗೆ ಉತ್ತರ ಕರ್ನಾಟಕದ ಮಂದಿ ಹಿಡಿ ಶಾಪ ಹಾಕುತ್ತಿದ್ದಾರೆ‌. ಅದರಲ್ಲೂ ಪ್ರವಾಹಕ್ಕೆ ತುತ್ತಾಗಿರುವ ಬಾದಾಮಿ ಕ್ಷೇತ್ರದ ಜನತೆಯಂತು ಸಿದ್ದು ವಿರುದ್ಧ ಆಕ್ರೋಶ ಕೊಂಡಿದ್ದಾರೆ.

ಇನ್ನು “ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿರುವ ನಾನು, ಪ್ರವಾಹದಿಂದ ನಲುಗಿರುವ ತಮ್ಮ ಕ್ಷೇತ್ರವಾದ ತೆರಳಲು ಆಗಿಲ್ಲ” ಎಂದು ಹೇಳಿಕೊಂಡಿದ್ದ ಸಿದ್ದರಾಮಯ್ಯ ಇದೀಗ ದಿಢೀರನೆ ದೆಹಲಿಗೆ ಹೋಗಿದ್ದಾರೆ. ಸ್ವಕ್ಷೇತ್ರಕ್ಕೆ ಬರಲು ಆರೋಗ್ಯ ಕಾರಣ ಕೊಟ್ಟ ಸಿದ್ದರಾಮಯ್ಯ ಇದೀಗ ರಾಹುಲ್ ಗಾಂಧಿ ಕರೆಗೆ ಓಗೊಟ್ಟು ದೆಹಲಿಗೆ ಹೋಗಿದ್ದು ಯಾಕೆ? ಎಂದು ಜನರು ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಬಾದಾಮಿಗೆ ಕಳುಹಿಸಿದ್ದಾರೆ. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಹಾಲಿ ಸಿಎಂ ಯಡಿಯೂರಪ್ಪ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here