`ಸಿದ್ದು’ಗೆ ಎದುರಾಯಿತು ದೊಡ್ಡ ಸಂಕಷ್ಟ..!!

0
536

ಮಾಜಿ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯನವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಅಕ್ರಮ ಡಿ-ನೋಟಿಫಿಕೇಶನ್ ಪ್ರಕರಣ ಕುರಿತಂತೆ ಆಗಸ್ಟ್ 26 ಸೋಮವಾರದಂದು ಖದ್ದಾಗಿ ಹಾಜರಾಗಲು ಆದೇಶ ಹೊರಡಿಸಿದೆ. ತಮ್ಮ ವಿಶೇಷ ಮಾತಿನ ವೈಖರಿಯಿಂದಲೇ ಸದಾ ಎಲ್ಲರ ಗಮನ ಸೆಳೆಯುವ ಸಿದ್ದರಾಮಯ್ಯನವರು ಈಗ ದೊಡ್ಡ ಸಮಸ್ಯೆಯೊಂದಕ್ಕೆ ಒಳಾಗಾಗಿದ್ದಾರೆ. ಹೌದು, ಸಿದ್ದರಾಮಯ್ಯನವರು ಆಧಿಕಾರದಲ್ಲಿದ್ದ ಸಮಯದಲ್ಲಿ ಈ ಹಿಂದೆಯೇ ಡಿನೋಟಿಫಿಕೇಶನ್ ಮಾಡಿರುವ ಆರೋಪ ಎಲ್ಲರಿಗೂ ತಿಳಿದಿರುವ ವಿಷಯ. ಆ ಆರೋಪದ ಮೇಲೆ ಕೋರ್ಟ್ ಕೂಡ ಸಮನ್ಸ್ ಜಾರಿ ಮಾಡಿತ್ತು. ಆದರೆ ಈಗ ಮತ್ತೆ ಸಿದ್ದು ಇಂಥ ಒಂದು ಸಮಸ್ಯಗೆ ಸಿಲುಕಿದ್ದಾರೆ.

ಸರ್ಕಾರ ಕೊಟ್ಟಿರುವ ಜವಬ್ದಾರಿಯನ್ನು ನಿಷ್ಟೆಯಿಂದ ಮಾಡಬೇಕಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರು ಜಿಲ್ಲೆಯ ಹಿನಕಲ್ ಗ್ರಾಮದಲ್ಲಿ ಅಕ್ರಮವಾಗಿ ನಿವೇಶನ ಖರೀದಿ ಮಾಡಿ ಅದನ್ನು ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಈ ಕೆಲಸ ಮಾಡಿದ್ದಾರೆ ಎಂದು ಗಂಗರಾಜು ಎಂಬುವವರು ನ್ಯಾಯಾಲಯಕ್ಕೆ ದೂರನ್ನು ನೀಡಿದ್ದಾರೆ. ದೂರಿನ ಹಿನ್ನಲೆ ನಗರದ ಲಕ್ಷ್ಮಿಪುರಂ ಠಾಣೆ ಪೋಲಿಸರು ಹೆಚ್ಚಿನ ತನಿಖೆ ನೆಡಿಸಿದ್ದು, ಅದರ ಬಿ-ವರದಿಯನ್ನು ನ್ಯಾಯಾಲಯಕ್ಕೆ ಸಲಿಸಿದ್ದರು ಎನ್ನಲಾಗಿದೆ. ಇದಕ್ಕೆ ಆಕ್ಷೇಪಣೆ ಮಾಡಿದ ಗಂಗರಾಜು ಸಂಪೂರ್ಣವಾಗಿ ಒಪ್ಪಿಲ್ಲ. ಇದನ್ನು ಗಮನಿಸಿದ ನ್ಯಾಯಾಲಯ ಪ್ರಕರಣ ಕುರಿತು ಹೆಚ್ಚಿನ ತನಿಖೆಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಸ್ತಾತರಿಸಲಾಗಿದೆ.

LEAVE A REPLY

Please enter your comment!
Please enter your name here