ನಟಿ ಶ್ರದ್ಧಾ ಕಪೂರ್ `ಮಾನಸಿಕ ಒತ್ತಡದಿಂದ’ ಬಳಲುತ್ತಿರಲು ಕಾರಣವೇನು ಗೊತ್ತಾ..?

0
506

ನಟಿ ಶ್ರದ್ಧಾ ಕಪೂರ್ ಬಾಲಿವುಡ್‍ನ ಬಹು ಬೇಡಿಕೆಯ ನಟಿಯಾಗಿದ್ದಾರೆ. 2010 ರಲ್ಲಿ ಬಾಲಿವುಡ್ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ್ದ, ನಟಿ ಶ್ರದ್ಧಾ 2013 ರಲ್ಲಿ `ಆಶಿಕಿ 2’ರ ಸಿನಿಮಾ ಮೂಲಕ ಬಹು ಪ್ರೇಕ್ಷಕರನ್ನು ಸಂಪಾದಿಸುವಲ್ಲಿ ಯಶಸ್ವಿಯಾದರು. ಬಾಲಿವುಡ್ ಚಿತ್ರರಂಗದಲ್ಲಿ ಅದ್ಭುತ ಸಿನಿಮಾಗಳನ್ನು ಮಾಡಿಕೊಂಡು ಉತ್ತಮ ಹೆಸರನ್ನು ಮಡಿರುವ ನಟಿ ಶ್ರದ್ಧಾ ಕಪೂರ್ ಅಭಿಮಾನಿಗಳಿಗೆ ಅಶ್ಚರ್ಯ ಸುದ್ಧಿಯೊಂದನ್ನು ನೀಡಿದ್ದಾರೆ. ಹೌದು, ಶ್ರದ್ಧಾ ಅವರು ಕಳೆದ 6 ವರ್ಷಗಳಿಂದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರಂತೆ.

ಈ ವಿಚಾರವನ್ನು ಸ್ವತಃ ಶ್ರದ್ಧಾ ಅವರೇ ಹೇಳಿಕೊಂಡಿದ್ದಾರೆ. ಕಳೆದ ಆರು ವರ್ಷಗಳಿಂದ ಮಾನಸಿಕ ಒತ್ತಡದ ಜೊತೆಗೆ ಆತಂಕದ ಭಾವದಲ್ಲಿ ಹೋರಾಟ ಮಡುತ್ತಿದ್ದೇನೆ ಯಾಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಆಶಿಕಿ ಸಿನಿಮಾದ ಬಳಿಕ ನಾನು ಈ ಒಂದು ಸಮಸ್ಯೆಗೆ ಹೆಚ್ಚಾಗಿ ತುತ್ತಾಗಿದ್ದೇನೆ ಎಂದಿದ್ದಾರೆ. ದೈಹಿಕವಾಗಿ ಇದನ್ನು ನಿರ್ಧರಿಸಲು ಆಗುತ್ತಿಲ್ಲ, ಅದರೆ ಮಾನಸಿಕವಾಗಿ ಖಂಡಿತ ಗುರುತಿಸಬೇಕು. ಈ ಸಮಸ್ಯೆ ಕುರಿತು ನಾನು ವೈದ್ಯರನ್ನು ಈಗಾಗಲೇ ಭೇಟಿ ಮಾಡಿದ್ದೇನೆ. ಹಲವು ವೈದ್ಯ ಪರೀಕ್ಷೆಗಳನ್ನು ಮಾಡಿಸಿದರು ಕೂಡ ಯಾವ ರೀತೀಯ ಸಮಸ್ಯೆ ಎಂಬುದನ್ನು ವೈದ್ಯರು ಗುರುತಿಸಲು ವಿಫಲರಾದರು.

ನನ್ನ ಬಗ್ಗೆ ನಾನೇ ಆನೇಕ ಪ್ರಶ್ನೆಗಳನ್ನು ಕೇಳಿಕೊಂಡು ಮುಂದೆ ಸಾಗುವುದನ್ನು ಕಲಿತೆ. ಈ ಸಮಸ್ಯೆ ಬಗ್ಗೆ ನಾನು ಅಷ್ಟು ತಲೆಕಡಿಸಿಕೊಳ್ಳದೆ, ನನ್ನ ಕೆಲಸದ ಮಾರ್ಗದ ಕಡೆ ಹೆಚ್ಚು ಗಮನ ನೀಡುತ್ತಿದ್ದೇನೆ. ಪ್ರೀತಿಯ ಮೂಲಕವೇ ಈ ಆತಂಕದ ಸಮಸ್ಯೆಯನ್ನು ನಿವಾರಿಸುಕೊಳ್ಳುವುದು ಉತ್ತಮ. ನಮಗೆ ನಾವು ಏನು ಮತ್ತು ನಮ್ಮ ಸಾಮಥ್ರ್ಯವನ್ನು ಅರಿತುಕೊಂಡು ಮುಂದೆ ಸಾಗುವುದು ಉತ್ತಮ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here