ಮದ್ಯ ಪ್ರಿಯರಿಗೆ ಶಾಕ್ ನೀಡಿದ ‘ಹೈಕೋರ್ಟ್’..!

0
671

ಮದ್ಯ ಸೇವನೆ ಮಾಡುವವರಿಗೆ ಈ ಹಿಂದೆ ಒಂದು ಶುಭ ಸುದ್ಧಿ ಕೇಳಿಬಂದಿತ್ತು. ಆದರೆ ಈಗ ಆ ಸುದ್ಧಿಗೆ ಈಗ ಬ್ರೇಕ್ ಬಿದ್ದಿದೆ. ಹೌದು, ಮದ್ಯ ಮಾರಾಟ ಮಳಿಗೆಗಳು ತಮ್ಮ ಗ್ರಾಹಕರಿಗೆ ಮದ್ಯವನು ಮಧ್ಯರಾತ್ರಿಯ ಸಮಯವನ್ನು ಮೀರಿ ವ್ಯಾಪಾರ ಮಾಡುತ್ತಿತ್ತು. ಈ ವ್ಯವಸ್ಥೆಯನ್ನು ಕೂಡ ತಡೆಯಲಾಗಿತ್ತು. ಆದರೆ ಅಬಕಾರಿ ಇಲಾಖೆಯ ಆಯುಕ್ತರು ತಿಂಗಳ ಹಿಂದೆಯಷ್ಟೇ ಆನ್‍ಲೈನ್ ಮದ್ಯ ಮಾರಟಕ್ಕೆ ಅನುಮತಿ ನೀಡಿತ್ತು. ಅದರೆ ಈಗ ಆನ್‍ಲೈನ್ ಮದ್ಯ ಮಾರಾಟಕ್ಕೆ ನೀಡಿದ್ದ ಅನುಮತಿ ಪತ್ರವನ್ನು ಹಿಂಪಡೆದಿರುವದನ್ನು ಪ್ರಶ್ನಿಸಿ ಎಚ್‍ಐಪಿ ಬಾರ್ ಪ್ರೈವೇಟ್ ಲಿಮಿಟೆಡ್ ಹೈಕೋರ್ಟ್‍ಗೆ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಸದ್ಯ ವಜಾಗೊಳಿಸಿದೆ.

ಹೌದು, ಅನ್‍ಲೈನ್‍ನಲ್ಲಿ ಮದ್ಯ ಮಾರಾಟ ಮಾಡಲು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಸ್. ಸುಜಾತಾ ಅವರು ವಜಾಗೊಳಿಸಿದ್ದಾರೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ಅಡಿ ಪರವಾನಗಿ ನೀಡಿ ಮದ್ಯ ಅಂಗಡಿಗಳನ್ನು ತೆರಯಲು ಮಾತ್ರವೇ ಅವಕಾಶ ಇದೆ ಹೊರೆತು ಅನ್‍ಲೈನ್‍ನಲ್ಲಿ ಮದ್ಯ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಸಾಧ್ಯವಿಲ್ಲ ಎಂದು ಆದೇಶವನ್ನು ಹೊರಡಿಸುವ ಮೂಲಕ ಖಡಕ್ ಆಗಿ ತಿರಸ್ಕರಿಸಿದೆ. ಆನ್‍ಲೈನ್ ಮದ್ಯ ಮಾರಾಟದಿಂದ ಆಪ್ರಾಪ್ತರು ಮದ್ಯಪಾನದ ಚಟ್ಟಕ್ಕೆ ದಾಸರಾಗುತ್ತಾರೆ.

ಇದರಿಂದ ಯುವಪೀಳಿಗೆಯ ನಿಯಂತ್ರಣ ಅಸಾಧ್ಯವಾಗಳಿದೆ. ಆನ್‍ಲೈನ್‍ನಲ್ಲಿ ಮಾರಾಟ ಮಾಡುವುದರಿಂದ ಯಾವ ವಯಸ್ಸಿನ ಗ್ರಾಹಕರು ಬಂದು ಖರೀದಿ ಮಾಡಲಿದ್ದಾರೆ ಎಂಬುದನ್ನು ಗುರುತಿಸಲು ಕಷ್ಟವಾಗಲಿದೆ. ಜೊತೆಗೆ ಇದರ ವ್ಯಾಪಾರ, ವಹಿವಾಟುಗಳನ್ನು ಕಷ್ಟವಾಗಲಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.

LEAVE A REPLY

Please enter your comment!
Please enter your name here