ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ಪಬ್ ಮತ್ತು ಡಿಸ್ಕೊಟೆಕ್ ನಡೆಸುತ್ತಿದ್ದವರಿಗೆ ಸಿಸಿಬಿ ಪೋಲಿಸರು ಶಾಕ್ ನೀಡಿದ್ದಾರೆ. ಪಬ್ಲಿಕ್ ಎಂಟರ್ಟೈಮೆಂಟ್ 2005 ಕಾಯ್ದೆಗೆ ಉಲ್ಲಂಘಿಸಿದ ಸುಮಾರು 107 ಪಬ್ಗಳನ್ನು ಪರಾವನೆಗೆ ರದ್ದುಗೊಳಿಸಿರುವುದಾಗಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೇಲ್ ತಿಳಿಸಿದ್ದಾರೆ.

ಸುದ್ಧಿ ಗೋಷ್ಟಿಯಲ್ಲಿ ಮಾಹಿತಿ ನೀಡಿದ ಸಂದೀಪ್ ಪಾಟೇಲ್ ಅವರು ಬೆಂಗಳೂರಿನ ಯಾವದೇ ಪಬ್ ಹಾಗೂ ಹೋಟೆಲ್ಗಳಲ್ಲಿ ಮನೋರಂಜನಾತ್ಮಕ ಕಾರ್ಯಕ್ರಮ ನಡೆಸಲು, ನಗರ ಪೋಲೀಸ್ ಆಯುಕ್ತರ ಅನುಮತಿ ಕಡ್ಡಾಯ, ಇತ್ತೀಚಿಗೆ ನಗರ ಪೋಲೀಸ್ ಆಯುಕ್ತರ ಅನುಮತಿ ಇಲ್ಲದೆ ಕೆಲವರು ಪಬ್ ಹಾಗೂ ಹೋಟೆಲ್ಗಳಲ್ಲಿ ಬೇರೆ ಬೇರೆ ಎಂಟರ್ಟೈಮೆಂಟ್ ಕಾರ್ಯಕ್ರಮ ನಡೆಸಲಾಗುತ್ತಿತ್ತು.

ಈ ಹಿನ್ನಲೆ ದಾಳಿ ನಡೆಸಿದಾಗ ಪಬ್ ಮಾಲೀಕರು ಕಟ್ಟಡದ ದಾಖಲಾತಿಗಳನ್ನು ನೀಡಿಲ್ಲ. ಅಗ್ನಿ ಶಾಮಕ ಸಿಬ್ಬಂದಿಯ ಎನ್.ಒ.ಸಿ.ಯನ್ನು ಪಡಿಯದೇ ಇರುವುದು ಬೆಳಕಿಗೆ ಬಂದಿದೆ. ಹೀಗಾಗಿ ಹಲವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಇನ್ನು ಪೋಲೀಸರ ಕಣ್ಣು ತಪ್ಪಿಸಿ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದರೆ,ಕಾನೂನಿನ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸಂದೀಪ್ ಪಾಟೇಲ್ ಎಚ್ಚರಿಕೆಯನ್ನ ನೀಡಿದ್ದಾರೆ.
