ಪಾಕಿಸ್ತಾನದಲ್ಲಿ ಸುನ್ನಿ-ಶಿಯಾ ಪಂಥಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ಪಾಕಿಸ್ತಾನದಲ್ಲಿ ಶಿಯಾ ವಿರೋಧಿ ರ್ಯಾಲಿಗಳು ನಡೆಯುತ್ತಿದ್ದು, ಶಿಯಾ ಪಂಥವು ಇಮ್ರಾನ್ ಸರ್ಕಾರದ ಮೇಲೆ ಕೆಂಡಾಮAಡಲವಾಗಿದೆ. ಇಮ್ರಾನ್ ಸರ್ಕಾರ ಪರೋಕ್ಷವಾಗಿ ಸುನ್ನಿ ಪಂಥದ ಪರವಾಗಿ ಕೆಲಸ ಮಾಡುತ್ತಿದೆ. ಶಿಯಾ ವಿರೋಧಿ ರ್ಯಾಲಿಗಳಿಗೆ ಅನುಮತಿ ನೀಡುತ್ತಿರುವುದಾದರೆ ಏಕೆ ಎಂಬ ಪ್ರಶ್ನೆಯನ್ನು ಇಮ್ರಾನ್ ಸರ್ಕಾರದ ಮುಂದಿಟ್ಟಿದೆ ಶಿಯಾ ಪಂಥ. ಸದ್ಯ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಈ ಸಂಘರ್ಷಕ್ಕೆ ಮೂಲ ಕಾರಣ ಶಿಯಾ ಪಂಥದ ಪ್ರಭಾವಿ ಧರ್ಮಗುರುವೊಬ್ಬರನ್ನ ಗುಂಡಿಟ್ಟು ಕೊಂದ ಘಟನೆ. ಮೂವರು ದುಷ್ಕರ್ಮಿಗಳು ಮೌಲಾನಾ ಆದಿಲ್ ಖಾನ್ ಎಂಬ ಶಿಯಾ ಪಂಥದ ಮೌಲ್ವಿಯನ್ನು ಹತ್ಯೆ ಮಾಡಿದ್ದಾರೆ. ಈ ಪ್ರಕರಣ ಪಾಕಿಸ್ತಾನದಲ್ಲಿ ಸುನ್ನಿ ಹಾಗೂ ಶಿಯಾ ಪಂಥಗಳ ನಡುವೆ ತಾರಕಕ್ಕೇರಿರುವ ಕಲಹದ ಮುಂದುವರೆದ ಭಾಗವಾಗಿದೆ. ಈ ಹಿಂದೆಯೂ ಇಂತಹ ಹತ್ಯೆಗಳು ನಡೆದಿವೆ.
ಇನ್ನು ಈ ಸಂಘರ್ಷಕ್ಕೆ ಭಾರತವೇ ಕಾರಣ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಭಾರತದ ಮೇಲೆ ಗೂಬೆ ಕೂರಿಸಿದ್ದಾರೆ. ಪಾಕಿಸ್ತಾನದಲ್ಲಿ ಶಿಯಾ ಸುನ್ನಿ ಪಂಥಗಳ ನಡುವೆ ಕಲಹ ಉಂಟಾಗುವAತೆ ಮಾಡಲು ಭಾರತ ಗುಪ್ತಚರ ಸಂಸ್ಥೆ ರಾ ಪ್ರಯತ್ನಿಸಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದ ವಿರುದ್ದ ಆರೋಪ ಮಾಡಿದ್ದಾರೆ. ಅಚ್ಚರಿ ಎಂದರೆ ಪಾಕ್ ಪ್ರಧಾನಿಯ ಹೇಳಿಕೆಯನ್ನು ಶಿಯಾ ಮುಸ್ಲಿಮರೇ ಪ್ರಶ್ನಿಸಿದ್ದು, ಇದರಲ್ಲಿ ಭಾರತದ ಕೈವಾಡವಿದ್ದಾರೆ ಶಿಯಾ ವಿರೋಧಿ ರ್ಯಾಲಿ ನಡೆಸಲು ಸುನ್ನಿ ಸಂಘಟನೆಗಳಿಗೆ ಅನುಮತಿಯನ್ನು ಯಾಕೆ ನೀಡಿದಿರಿ..? ಎಂದು ಪ್ರಶ್ನಿಸಿದ್ದಾರೆ.
ಕಳೆದ ಅನೇಕ ದಶಕಗಳಿಂದ ಪಾಕಿಸ್ತಾನದಲ್ಲಿ ಶಿಯಾ-ಸುನ್ನಿ ಸಂಘರ್ಷ ನಡೆಯುತ್ತಿದ್ದು, ಆಳುವ ಸರ್ಕಾರಗಳು ಪರೋಕ್ಷವಾಗಿ ಈ ಸಂಘರ್ಷವನ್ನು ತಮ್ಮ ರಾಜಕೀಯ ಏಳಿಗೆಗಾಗಿ ಬಳಸಿಕೊಳ್ಳುತ್ತಿವೆ. ಇನ್ನು ಧಾರ್ಮಿಕ ಮುಖಂಡರ ಹತ್ಯೆಗಳು ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿವೆ. ಎರಡು ಪಂಥಗಳ ಅನೇಕ ಧಾರ್ಮಿಕ ಮುಖಂಡರು ಈ ಸಂಘರ್ಷದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಪಾಕ್ ಸರ್ಕಾರ ಮಾತ್ರ ಭಾರತದ ವಿರುದ್ದ ಆರೋಪ ಮಾಡುತ್ತಾ ಕಾಲ ಕಳೆಯುತ್ತಿದೆ.
ಇನ್ನು ಕೊಲೆಯಾದ ಆದಿಲ್ ಖಾನ್, ದಿವಂಗತ ಮೌಲಾನಾ ಸಲೀಮ್-ಉಲ್ಲಾ-ಖಾನ್ ಅವರ ಮಗ. ಮೌಲಾನಾ ಸಲೀಮ್-ಉಲ್ಲಾ-ಖಾನ್ ಜಾಮಿಯಾ ಫರೂಕಿಯಾ ಅನ್ನೋ ಸೆಮಿನರಿಯನ್ನ ಸ್ಥಾಪಿಸಿದ್ದರು. ಇಲ್ಲಿ ದಿಯೋಬಂಧಿ ಪಂಗಡದ ಸುನ್ನಿ ಮುಸ್ಲಿಂ ಕುರಿತ ಬೋಧನೆಗಳನ್ನ ಮಾಡಲಾಗುತ್ತದೆ. ಈ ಸಂಘಟನೆಯ ಮೂಲಕ ಮೌಲಾನಾ ಸಲೀಮ್-ಉಲ್ಲಾ-ಖಾನ್ ಪ್ರಭಾವಿ ಧಾರ್ಮಿಕ ನಾಯಕನಾಗಿ ಗುರುತಿಸಿಕೊಂಡಿದ್ದರು. ರಾಜಕೀಯವಾಗಿಯೂ ಪ್ರಾಬಲ್ಯ ಸಾಧಿಸಿದ್ದರು. ಇನ್ನು ಮೌಲಾನಾ ಸಲೀಮ್-ಉಲ್ಲಾ-ಖಾನ್ ಮಗ ಆದಿಲ್ ಖಾನ್ ಇಸ್ಲಾಂ ಧರ್ಮ ಅಧ್ಯಯನದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದು, ಮಲೇಷ್ಯಾದಲ್ಲಿ ಧಾರ್ಮಿಕ ಬೋಧನೆ ಮಾಡುತ್ತಿದ್ದರು. ತಂದೆಯ ನಂತರ ಸಂಘಟನೆಯ ಜವಾಬ್ದಾರಿ ಹೊತ್ತಿದ್ದ ಆದಿಲ್ ಖಾನ್ ಪ್ರಭಾವಿ ಮುಖಂಡನಾಗಿ ಗುರುತಿಸಿಕೊಂಡಿದ್ದೆ ಕೊಲೆಗೆ ಕಾರಣ ಎನ್ನಲಾಗಿದೆ.