ಮುಂದಿನ ತಿಂಗಳು ಸೆಟ್ಟೇರಲಿದೆ ಶಿವಣ್ಣನ ಪ್ಯಾನ್ ಇಂಡಿಯಾ ಸಿನಿಮಾ !

0
292

ಭಜರಂಗಿ 2013 ರಲ್ಲಿ ತೆರೆ ಕಂಡ ಶಿವಣ್ಣನ ಸೂಪರ್ ಹಿಟ್ ಸಿನಿಮಾ .. ಇನ್ನು ಶಿವಣ್ಣನ ಜೊತೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು ಸಾಂಡಲ್ ವುಡ್ ಬ್ಯೂಟಿಫುಲ್ ಕ್ಯೂಟ್ ನ‌ಟಿ ಐಂದ್ರಿತಾ ರೈ .

ನೃತ್ಯ ಸಂಯೋಜಕ-ನಿರ್ದೇಶಕ ಹರ್ಷ ನಿರ್ದೇಶನದಈ ಚಲನಚಿತ್ರವು 12 ಡಿಸೆಂಬರ್ 2013 ರಂದು ಬಿಡುಗಡೆಯಾಗಿ ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯಿತು.
ಭಜರಂಗಿ ತನ್ನ 25 ದಿನಗಳ ಓಟದಲ್ಲಿ ಒಟ್ಟು 12.5 ಕೋಟಿಗಳನ್ನು ಸಂಗ್ರಹಿಸಿ 2013 ರ ಅತಿ ಹೆಚ್ಚು ಗಳಿಕೆಯ ಕನ್ನಡ ಚಿತ್ರವಾಗಿತ್ತು .
ಇನ್ನು ಚಿತ್ರದಲ್ಲಿ ಶಿವಣ್ಣನ ಮಾಸ್ ಖದರ್​ ಮತ್ತು ಪಂಚಿಂಗ್ ಡೈಲಾಗ್​ಗಳು ಸಿನಿಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿತ್ತು. ​

ನಂತರ ನಿರ್ದೇಶಕ ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಬಂದ ಎರಡನೇ ಸಿನಿಮಾ ವಜ್ರಕಾಯ, ಈ ಸಿನಿಮಾ 2015 ರಲ್ಲಿ ತೆರೆಕಂಡಿದ್ದು ಶಿವಣ್ಣ ರ ಜೊತೆ ನಭಾ ನಟೇಶ್,ಕಾರುಣ್ಯ ರಾಮ್,ಹಾಗೂ ಸುಮನ್ ಅಭಿನಯಿಸುವುದರ ಮೂಲಕ ಮೋಡಿ ಮಾಡಿದ್ದರು !

ಈಗ ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್ನ ಹ್ಯಾಟ್ರಿಕ್ ಸಿನಿಮಾ ಸೆಟ್ಟೇರುತ್ತಿದೆ ..
ಇನ್ನು ಈ ಸಿನಿಮಾಗೆ ಭಜರಂಗಿ -2 ಎಂದು ನಾಮಕರಣ ಮಾಡಲಾಗಿದೆ.. ಅಂದಹಾಗೆ ಶಿವಣ್ಣನನ್ನು ಮತ್ತೆ ರಗಡ್​ ಲುಕ್​ನಲ್ಲಿ ತೋರಿಸೋಕೆ ಹರ್ಷ ಭರ್ಜರಿ ಪ್ಲಾನ್ ಮಾಡ್ತಿದ್ದು ಶೂಟಿಂಗ್​​ಗೆ ತಯಾರಿ ನಡೆಸಿದ್ದಾರೆ. ಸದ್ಯ ಈಗಾಗಲೇ ಬಹುತೇಕ ಕನ್ನಡ ಸಿನಿಮಾಗಳು ವಿಶ್ವದಾದ್ಯಂತ ರಿಲೀಸ್ ಆಗಿ ದಾಖಲೆಯ ಯಶಸ್ಸು ಗಳಿಸುತ್ತಿವೆ.

ಅದೇ ರೀತಿ ಶಿವಣ್ಣ ಮತ್ತು ಹರ್ಷ ಅವರ ಭಜರಂಗಿ ೨, ಸಿನಿಮಾ ಕೂಡ ಪಂಚಭಾಷೆಯಲ್ಲಿ ಬಿಡುಗಡೆಮಾಡಿಲು ಪ್ಲಾನ್ ಮಾಡಿದೆಯಂತೆ..

ಸೆಪ್ಟೆಂಬರ್ 9 ರಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಸದ್ಯ ಸಿನಿಮಾ ಹಲವು ಭಾಷೆಗಳಲ್ಲಿ ನಿರ್ಮಾಣವಾಗ್ತಿರೋದು ಶಿವಣ್ಣನ ಅಭಿಮಾನಿಗಳಲ್ಲಿ ದೊಡ್ಡ ಸಂತಸ ತಂದಿದೆ.

LEAVE A REPLY

Please enter your comment!
Please enter your name here