ದೊಡ್ಡ ಗ್ಯಾಪ್ ನಂತರ ಮತ್ತೆ ಸಿನಿ ಪಯಣಕ್ಕೆ ಹಿಂದಿರುಗಿದ ಶಿಲ್ಪಾ ಶೆಟ್ಟಿ.!

0
108

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ೧೩ ವರ್ಷಗಳ ಗ್ಯಾಪ್ ನಂತರ ನಾಯಕಿಯಾಗಿ ಮತ್ತೆ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ. ೨೦೦೭ರಲ್ಲಿ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದರೂ, ಬಳಿಕ ೨೦೦೯ರಲ್ಲಿ ರಾಜ್ ಕುಂದ್ರಾ ಜೊತೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದಾದ ಬಳಿಕ ಶಿಲ್ಪಾ ಶೆಟ್ಟಿ ಅವರು ಯಾವ ಚಿತ್ರಗಳಲ್ಲೂ ನಟಿಸಲಿಲ್ಲ. ಕೆಲ ಚಿತ್ರಗಳಲ್ಲಿ ಗೆಸ್ಟ್ ರೋಲ್ನಲ್ಲಿ ಅಭಿನಯಿಸುತ್ತಿದ್ದರು,ಇದೀಗ ಪೂರ್ಣ ಪ್ರಮಾಣದಲ್ಲಿ ಹೊಸ ಚಿತ್ರಕ್ಕೆ ನಾಯಕಿಯಾಗಿ ತೆರೆ ಮೇಲೆ ಮತ್ತೆ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಇದರ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿಲ್ಪಾ ಶೆಟ್ಟಿ ಸಿನಿಮಾಗಾಗಿ ನಾನು ಸಂಪೂರ್ಣವಾಗಿ ಸಿದ್ಧಳಾಗಿದ್ದೇನೆ, ಸಿನಿಮಾಗೆ ಹೊಸ ತಯಾರಿಗಳನ್ನು ಮಾಡಿಕೊಂಡಿದ್ದೇನೆ. ಈ ಸಿನಿಮಾ ಒಂದು ಕಂಪ್ಲೀಟ್ ರೊಮ್ಯಾಂಟಿಕ್, ಕಾಮಿಡಿ ಜಾನರ್’ನಲ್ಲಿ ಮೂಡಿಬರಲಿದೆ. ಚಿತ್ರವನ್ನು ಸಬೀರ್ ಖಾನ್ ನಿರ್ದೇಶಿಸಲಿದ್ದಾರೆ. ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವಿದೆ ಎಂದು ಹೇಳಿದರು.

ಶಿಲ್ಪಾಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಒಂದಾಗೋಣ ಬಾ,ಪ್ರೀತ್ಸೋದ್ ತಪ್ಪಾ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಸ್ಸನ್ನು ಕೊಡ ಗೆದ್ದಿದ್ದರು. ಮದುವೆ ಆದ ಬಳಿಕ ಜಿಮ್ನಲ್ಲಿ ಹೆಚ್ಚು ಸಮಯ ಕಳೆದಿದ್ದು,ವರ್ಕೌಟ್ ಮಾಡುವ ಮೂಲಕ ಈಗ ಫಿಟ್ ಅಂಡ್ ಫೈನ್ ಆಗಿದ್ದಾರೆ ಎಂದೇ ಹೇಳಬಹುದು. ಹೊಸ ಚಿತ್ರದೊಂದಿಗೆ ಅವರು ಮತ್ತೆ ಸಿನಿ ಪಯಣಕ್ಕೆ ವಾಪಸ್ ಆಗುತ್ತಿರುವುದು ಅವರ ಅಭಿಮಾನಿಗಳಿಗೆ ಭಾರೀ ಸಂತಸ ತಂದಿದೆ ಎನ್ನಬಹುದು.

LEAVE A REPLY

Please enter your comment!
Please enter your name here