ಮದುವೆ ಆದರೂ ತಮ್ಮ ಜೀವನದಲ್ಲಿ ಮಕ್ಕಳಾಗದೇ, ಒಂದು ಮಗುವಿನ ಕಿಲಕಿಲ ಸದ್ದು ಸಹ ಕೇಳದೆ, ಮಾನಸಿಕ ನೆಮ್ಮದಿ ಕಳೆದುಕೊಂಡ ದಂಪತಿಗಳ ಬಾಳಿಗೆ ಬೆಳಕು ತುಂಬಿದ ಮಹಿಳೆಯರೊಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನಲ್ಲಿದ್ದಾರೆ !
ಇನ್ನು ಇವರ ಹೆಸರು ರಾಮಕ್ಕ ಕಡಬ ತಾಲೂಕಿನ ನೆಲ್ಲಯುಂಡಿ ಸಮೀಪದ ಗೋಳಿತೊಟ್ಟಿಯಲ್ಲಿರುವ ಈ ನಾಟಿ ವೈದ್ಯೆ ಸಂತಾನಭಾಗ್ಯ ಇಲ್ಲದವರಿಗೆ ಭಾಗ್ಯದಾತೆ! ಮಕ್ಕಳಾಗದೇ ವೈದ್ಯರ ಬಳಿ ಹೋಗಿ ನಿರಾಸೆ ಯಾದವರಿಗೆ ರಾಮಕ್ಕ ಬಳಿ ಪರಿಹಾರ ಸಿಗುತ್ತದೆ .
ಹೀಗೆ ಬಂದ ಸಾವಿರಾರು ಮಂದಿಗೆ ನಾಟಿ ವೈದ್ಯೆ ರಾಮಕ್ಕ ಮದ್ದು ನೀಡಿ ಸಂತಾನ ಭಾಗ್ಯ ಕರುಣಿಸಿದ್ದಾರೆ.. ಪಾರಂಪರಿಕವಾಗಿ ಬಂದ ನಾಟಿ ಮದ್ದು ಪದ್ಧತಿ ನೋಡಿ ರಾಮಕ್ಕ ಕಲಿತಿದ್ದಾರಂ..
ತೆ ಇನ್ನು ರಾಮಕ್ಕ ಅವರ ತಂದೆ ಕೂಡ ನಾಟಿ ವೈದ್ಯರಾಗಿದ್ದರು.. ಅವರು ಸಹಿತ ಸಂತಾನ ಭಾಗ್ಯ ಇಲ್ಲದವರಿಗೆ ಮದ್ದು ಕೊಡುತ್ತಿದ್ದರಂತೆ ..ಆದರೆ ಅದನ್ನು ರಾಮಕ್ಕಗೆ ಹೇಳಿಕೊಟ್ಟಿರಲಿಲ್ಲವಂತೆ ..
ತಂದೆ ಕೆಲಸ ಮಾಡುತ್ತಿದ್ದನ್ನು ಪ್ರತಿನಿತ್ಯ ನೋಡುತ್ತಿದ್ದ ರಾಮಕ್ಕ ನೋಡುತ್ತಲೇ ಕಳೆದುಕೊಂಡರಂತೆ.. ಸುಮಾರು ನಾಲ್ಕು ದಶಕಗಳಿಂದ ಮದ್ದು ನೀಡುತ್ತಲೇ ಬಂದಿದ್ದಾರೆ ರಾಮಕ್ಕ .. ಮಹಿಳೆಯಲ್ಲಿ ಮಕ್ಕಳಾಗದ ದೋಷ ಇದ್ದರೆ ಮದ್ದು ಕೊಡುತ್ತಾರೆ.. ಪುರುಷರಲ್ಲಿ ಸಮಸ್ಯೆಯಿದ್ದರೆ ರಾಮಕ್ಕ ಮದ್ದು ನೀಡುವುದಿಲ್ಲ.. ಮಕ್ಕಳಾಗದೇ ಇರುವ ಮಹಿಳೆಯರು, ರುತುಸ್ತ್ರಾವದ ಬಳಿಕದ ಮೂರನೇ ದಿನದಲ್ಲಿ ಇವರ ಬಳಿ ಬಂದರೆ ಮನೆಯಲ್ಲಿಯೇ ಮದ್ದು ನೀಡುತ್ತಾರೆ ರಾಮಕ್ಕ.. ಹೀಗೆ ಬಂದ ಸಾವಿರಾರು ಜನರು ಇವರ ನಾಟಿ ಮದ್ದಿನಿಂದ ಸಂತಾನ ಭಾಗ್ಯ ಪಡೆದಿದ್ದಾರೆ ..
ಇನ್ನು ರಾಮಕ್ಕನ ಈ ಸೇವೆಗೆ ಹಲವಾರು ಪ್ರಶಸ್ತಿಗಳು ಸಹ ಬಂದಿದೆ