ಸುಳ್ಳು ಭರವಸೆ ನೀಡಬೇಡಿ ಯಾಕೆ ಈ ರೀತಿ ಮಾಡುತ್ತಿರಾ.? ಎಂದು ನಟಿ ಶ್ವಾನಿ ಹೇಳಿದ್ದು ಯಾಕೆ..?

0
97
Loading...

ಕನ್ನಡ ಚಿತ್ರರಂಗದ ಮುದ್ದು ಮುದ್ದು ನಟಿ ಎಂದೇ ಬಹಳ ಖ್ಯಾತಿ ಪಡೆದಿರುವ ನಟಿ ಶ್ವಾನಿ ಶ್ರೀವಾತ್ಸವ್ ತಮ್ಮ ಬೇಸರ್ವನ್ನು ವ್ಯಕ್ತಪಡಿಸಿರುವ ಘಟನೆಯೊಂದು ನೆಡದಿದೆ. ಹೌದು, ಫಸ್ಟ್ ಟೈಂ ಮನಸ್ಸಿನಾಳದ ನೋವನ್ನು ಬಹಿರಂಪಡಿಸಿದ್ದಾರೆ ಶಾನ್ವಿ. ಕನ್ನಡ ಸಿನಿಮಾಗಳಾದ ಸುಂದರಾಂಗ ಜಾಣ, ಚಂದ್ರಲೇಖ, ಮಾಸ್ಟರ್ ಪೀಸ್ ಮತ್ತು ಇತ್ತೀಚಿಗೆ ತೆರೆಕಂಡ ಗೀತಾ ಸಿನಿಮಾದಲ್ಲಿ ನಟಿಸಿರುವ ಶಾನ್ವಿ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಬಿಝಿ ಆಗಿದ್ದಾರೆ. ಚಂದನವನದಲ್ಲಿ ಪ್ರತಿ ಭಾರಿ ಒಂದಲ್ಲ ಒಂದು ರೀತಿಯಲ್ಲಿ ವಿವಾದಗಳು ಕೇಳಿಬರುತ್ತಿರುವುದು ಸಾಮಾನ್ಯವಾಗಿ ಹೋಗಿದೆ.

ಇದೇ ರೀತಿಯಲ್ಲಿ ನಟಿ ಶಾನ್ವಿ ಕೂಡ ನಿರ್ದೇಶಕರ ವಿರುದ್ಧ ಸಿಡಿದೆದ್ದಿದ್ದಾರೆ. ಸಿನಿಮಾಗೆ ಹೋಗುವ ಮುನ್ನ ಹೇಳಿ ಹೋದ ಕಥೆ ಸಿನಿಮಾ ಸೆಟ್ಟಿಗೆ ಹೋದಾಗ ಯಾಕೆ ಬದಲಾಗುತ್ತದೆ. ಅವರಿಗೆ ಇಷ್ಟ ಬಂದ ಹಾಗೆ ಚಿತ್ರದ ಕಥೆಯನ್ನು ಬದಲು ಮಾಡುತ್ತಾರೆ ಇದರಿಂದ ನಟ, ನಟಿಯರ ದಾರಿಯನ್ನು ತಪ್ಪಿಸುತ್ತಿದ್ದಾರೆ ಇದು ಅನೈತಿಕ. ಸುಳ್ಳು ಭರವಸೆಯನ್ನು ಕೊಟ್ಟು ಕಲಾವಿದರಿಗೆ ಮೋಸ ಮಾಡಬೇಡಿ ಎಂದು ನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ನಟಿ ಶ್ವಾನಿ ಶ್ರೀವಾತ್ಸವ್. ಕನ್ನಡ ಚಿತ್ರರಂಗದಲ್ಲಿ ಪುರುಷ ಪ್ರಧಾನ ಸಿನಿಮಾಗಳು ಹೆಚ್ಚುತ್ತಿದೆ ಇದರಿಂದ ನಟಿಯರಿಗೆ ಪ್ರಾಮುಖ್ಯತೆ ಸಿಗುತ್ತಿಲ್ಲ. ನಟರಿಗೆ ನೀಡುವ ಸಂಬಾವನೆಗೂ ನಮಗೆ ನೀಡುವ ಸಂಬಾವನೆಗೂ ಬಹಳ ವ್ಯತ್ಯಾಸಗಳು ಕಂಡು ಬರುತ್ತಿದೆ.

ಸಿನಿಮಾಗೆ ಅಪ್ರೋಚ್ ಮಾಡುವಾಗ ಹೇಳುವುದು ಒಂದು ಕಥೆ ಅನಂತರ ಸೆಟ್ಟಿಗೆ ಹೋದರೆ ಹೊಸ ಕಥೆ ಹೇಳುವ ಮುಖಾಂತರ ನಮ್ಮ ದಾರಿಯನ್ನು ತಪ್ಪಿಸುತ್ತಾರೆ. ನಟಿಯ ವಿರುದ್ಧ ನಿರ್ದೇಶಕರು ಹೇರುವ ದೂರನ್ನು ನಾನು ಖಂಡಿಸುತ್ತೇನೆ, ನಟಿಯರು ಸರಿಯಾಗಿ ಶೂಟಿಂಗ್‍ಗೆ ಬರಲ್ಲ ಅವರು ಸಿನಿಮಾದ ಚಿತ್ರೀಕರಣ ಮುಗಿದ ನಂತರ ಪ್ರೋಮೋಷನ್ ಗಳಿಗೆ ಬರುವುದಿಲ್ಲ ಎಂಬ ಆರೋಪಗಳನ್ನು ಕೇಳಲು ಬೇಸರವಾಗುತ್ತದೆ ಎಂದು ಸುದೀರ್ಘ ಪತ್ರ ಬರೆದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವ ಸಿನಿಮಾ ಹಾಗೂ ಯಾವ ನಿರ್ದೇಶಕರ ವಿರುದ್ಧ ಹೇಳಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.

Loading...

LEAVE A REPLY

Please enter your comment!
Please enter your name here