ಸಿನಿಮಾ ಚಿತ್ರೀಕರಣದ ವೇಳೆ ಸಾಕಷ್ಟು ಬಾರಿ ಎಷ್ಟೋ ಅವಘಡಗಳು ಸಂಭವಿಸಿವೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹ ಎಷ್ಟೋ ಘಟನೆಗಳು ಸಂಭವಿಸಿವೆ. ಬೇರೆಲ್ಲೋ ಏಕೆ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಇಂತಹ ದುರ್ಘಟನೆಗಳು ಸಂಭವಿಸಿವೆ.
‘ಲಾಕಪ್ಡೆತ್’ ಶೂಟಿಂಗ್ ವೇಳೆ ಬೈಕ್ ಚೇಸಿಂಗ್ ವೇಳೆ ಇಬ್ಬರು ಸಾವನ್ನಪ್ಪಿದ್ದರು. ‘ಮಾಸ್ತಿಗುಡಿ’ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ನೀರಿಗೆ ಬಿದ್ದ ಅನಿಲ್ ಹಾಗೂ ಉದಯ್ ಈಜು ಬಾರದೆ ಸಾವನ್ನಪ್ಪಿದ್ದರು. ‘ರಣಂ’ ಸಿನಿಮಾ ಶೂಟಿಂಗ್ ವೇಳೆ ಸಿಲಿಂಡರ್ ಬ್ಲ್ಯಾಸ್ಟ್ ಆಗಿ ತಾಯಿ ಮಗು ಸಾವನ್ನಪ್ಪಿದ್ದರು. ಇದೀಗ ಬಾಲಿವುಡ್ನ ‘ಜೆರ್ಸಿ’ ಚಿತ್ರೀಕರಣದ ವೇಳೆ ನಟ ಶಾಹಿದ್ ಕಪೂರ್ ತುಟಿಗೆ ಬಾಲ್ ಬಿದ್ದು ತುಟಿ ಸೀಳಾಗಿದೆ ಎನ್ನಲಾಗಿದೆ. ಇದು ತೆಲುಗಿನಲ್ಲಿ ನಾಣಿ ಹಾಗೂ ಶ್ರದ್ಧಾ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದ ತೆಲುಗಿನ ‘ಜೆರ್ಸಿ’ ಸಿನಿಮಾದ ರೀಮೇಕ್.
ಶಾಹಿದ್ ಕಪೂರ್ ಈಗಾಗಲೇ ವಿಜಯ್ ದೇವರಕೊಂಡ ಅಭಿನಯದ ‘ಅರ್ಜುನ್ರೆಡ್ಡಿ’ ರೀಮೇಕ್ ಕಬೀರ್ ಸಿಂಗ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಅವರಿಗೆ ಬ್ರೇಕ್ ನೀಡಿತ್ತು. ಈ ಸಕ್ಸಸ್ ಖುಷಿಯಲ್ಲಿ ಅವರು ಮತ್ತೊಂದು ತೆಲುಗು ರೀಮೇಕ್ನಲ್ಲಿ ನಟಿಸುತ್ತಿದ್ದಾರೆ. ಚಂಡೀಗಢ್ನಲ್ಲಿ ಕ್ರಿಕೆಟ್ ಅಭ್ಯಾಸ ಮಾಡುವ ವೇಳೆ ಶಾಹಿದ್ ತುಟಿಗೆ ಬಾಲ್ ಬಲವಾಗಿ ತಗುಲಿದ್ದರಿಂದ ತುಟಿಗೆ ಪೆಟ್ಟಾಗಿ ರಕ್ತ ಸುರಿಯಲಾರಂಭಿಸಿದೆ. ಕೂಡಲೇ ಶಾಹಿದ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಹಿದ್ ಪತ್ನಿ ಮೀರಾ ಹಾಗೂ ಇನ್ನಿತರರು ಶಾಹಿದ್ ಅವರನ್ನು ನೋಡಲು ಚಂಡೀಗಢ್ಗೆ ತೆರಳಿದ್ದಾರೆ.