ಇತ್ತೀಚಿಗೆ ದೂರದರ್ಶನಗಿಂತ ಸಾಮಾಜಿಕ ಜಾಲತಾಣಗಳ ಹಾವಳಿಯೇ ಜಾಸ್ತಿಯಾಗಿದೆ. ವರ್ಷಾನು ವರ್ಷ ಟಿ.ವಿ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು ಅಷ್ಟು ಖ್ಯಾತಿ ಪಡೆದಿರುವುದಿಲ್ಲ. ಆದರೆ ಈ ಸಾಮಾಜಿಕ ಜಾಲತಾಣಗಳಲ್ಲಿ ಬಿಡುವ ಹಾಡು ಮತ್ತು ನೃತ್ಯದ ವಿಡಿಯೋಗಳು, ಟಿಕ್ ಟಾಕ್ ವಿಡೀಯೊಗಳಿಂದ ರಾತ್ರೋರಾತ್ರಿ ದೊಡ್ಡ ಸ್ಟಾರ್ಸ್ ಆಗಿ ಬಿಡುತ್ತಾರೆ. ಈ ರೀತಿಯಾದ ಅದೆಷ್ಟೋ ಘಟನೆಗಳು ನಮ್ಮ ಕಣ್ಣಮುಂದೆಯೇ ಇದೆ.
ಸೋಶಿಯಲ್ ಮೀಡಿಯಾಗಳಲ್ಲಿ ಸ್ಟಾರ್ಸ್ ಗಳಾಗುವುದು ಹೆಣ್ಣುಮಕ್ಕಳಿಗೆ ಬಲು ಸುಲಭ ಅಂತಾನೆ ಹೇಳಬಹುದು. ತಮ್ಮ ಅರೆ ಬಟ್ಟೆ ಮತ್ತು ಮೈಕಾಂತಿಯನ್ನು ತೋರಿಸಿದರೇ ಸಾಕು ಲಕ್ಷ ಲಕ್ಷ ಪಾಲೋವರ್ಸ್ ಗಳನ್ನು ಸಂಪಾಧಿಸುತ್ತಾರೆ. ವಿಪರ್ಯಾಸವೇನೆಂದರೆ ಟಿಕ್ ಟಾಕ್ ಮಾಡುವವರೇ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿ ದೊಡ್ಡ ಪರೆದೆಯಲ್ಲೂ ಮಿಂಚಿತ್ತಿದ್ದಾರೆ. ಬರೀ ಟಿಕ್ ಟಾಕ್ ಕಲಾವಿದರಿಗೆ ಅವಕಾಶ ಕಲ್ಪಿಸಿಕೊಟ್ಟರೇ, ವರ್ಷಗಳ ಕಾಲ ರಂಗಾಯಣ, ನಿನಾಸಂನಂತಹ ರಂಗಭೂಮಿ ಕಲಾವಿದರ ಗತಿ ಏನು? ತರಬೇತಿ ಪಡೆದು ನಟನೆಯಲ್ಲಿ ನಿಪೂಣರಾದವರು, ದೊಡ್ಡ ಪರದೆಯಲ್ಲಿ ನಟಿಸುವ ಬದಲು ಟಿಕ್ ಟಾಕ್ ಮಾಡಿ ಫೇಮಸ್ ಆದ ನಂತರ ಸಿನಿಮಾಗೆ ಬರಬೇಕಾ?
ಇನ್ನೂ ಇತ್ತೀಚಿಗೆ ತಾವು ಖ್ಯಾತರಾಗಬೇಕು ಎಂಬ ಹುಚ್ಚು ಕನಸನ್ನು ಹೊಂದಿರುವ ಹೆಣ್ಣು ಮಕ್ಕಳುಗಳು, ತಮ್ಮ ಮೈಕಾಂತಿಯನ್ನು ತೋರಿಸಿ ನೆಟ್ಟಿಗರ ಕಣ್ಣಿಗೆ ತುತ್ತಾಗುತ್ತಾರೆ. ಇನ್ನೂ ಕೆಲವರೂ ವಿಡಿಯೋ ಮಾಡುವಾಗ ಮಾಡಿಕೊಳ್ಳುವ ಅವಾಂತರಗಳು ಒಂದೊಂದಲ್ಲ.! ಅಂತೆಯೇ ಬಾಲಿವುಡ್ ನಟಿ ಪ್ರೀತಿ ಜಿಂಟಾ ತರನೇ ಟವಲ್ ಕಟ್ಟಿಕೊಂಡು ತನ್ನ ಗೆಳತಿಯರೊಂದಿಗೆ ಸೆಕ್ಸಿ ಅವತಾರದಲ್ಲಿ ಬಾಲಿವುಡ್ ಹಾಡೊಂದಕ್ಕೆ ನೃತ್ಯ ಮಾಡಲು ಹೋಗಿ ತಮ್ಮ ಬಲಗಣ್ಣಿಗೆ ಪೆಟ್ಟು ಮಾಡಿಕೊಂಡಿದ್ದಾರೆ.
ಬಾಲಿವುಡ್ ನ ಖಾಸಾಗಿ ವಾಹಿನಿಯಲ್ಲಿ ಪ್ರಸಾರವಾಗುವ ಪ್ರಸಿಧ್ಧ ಧಾರಾವಾಹಿ ಕುಂಡಲಿ ಭಾಗ್ಯ ಧಾರಾವಾಹಿಯ ನಟಿ ಶ್ರಧ್ಧಾ ಆರ್ಯ ಅವರು ಈ ಎಡವಟ್ಟನ್ನು ಮಾಡಿಕೊಂಡಿದ್ದು, ಇದೀಗ ಈ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕುಂಡಲಿ ಭಾಗ್ಯ ಧಾರಾವಾಹಿಯ ಪ್ರೀತಾ ಪಾತ್ರದಾರಿ ಶ್ರದ್ಧಾ, ನೃತ್ಯಾ ಮಾಡುವುದರಲ್ಲಿ ನಿಪುಣರು, ಆದರೆ ಅವರು ಇತ್ತೀಚಿಗೆ ಸೆಕ್ಸಿಯಾಗಿ ಟವಲ್ ಡ್ಯಾನ್ಸ್ ಮಾಡಿ ಅದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸುವ ಪ್ಲಾನ್ ಮಾಡಿದ್ದರು. ಆದರೆ ಅವರು ಅಂದುಕೊಂಡಿದ್ದೆ ಒಂದು ಆಗಿದ್ದೇ ಒಂದು.
ಹೀಗೆ ಸೆಕ್ಸಿಯಾಗಿ ಬಾಲಿವುಡ್ ಹಾಡಿಗೆ ನೃತ್ಯ ಮಾಡಲು ಹೋಗಿ ಬಲಗಣ್ಣಿಗೆ ಪಟ್ಟು ಮಾಡಿಕೊಂಡಿರುವ ವಿಡೀಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಲು ಬಿಟ್ಟಿದ್ದಾರೆ. ಪ್ಲಾನ್ ಮಾಡಿದ ಹಾಗೆ ನೃತ್ಯ ಮಾಡಲು ಸಾಧ್ಯವಾಗದೇ ಹೋದರು, ಈ ಬ್ಲೂಪರ್ ವಿಡಿಯೋವನ್ನು ಅಪ್ಲೋಡ್ ಮಾಡಿ, ಅದಕ್ಕೆ ಪ್ಲಾನ್ ಮಾಡದಂತೆ ಆಗದೇ ಹೋದರೆ ಹೀಗಾಗುತ್ತದೆ ಎಂದು ಬರೆದುಕೊಂಡಿದ್ದಾರೆ.