ಗಟ್ಟಿಮೇಳ ಸೀರಿಯಲ್‍ ನಟಿ ಅಮೂಲ್ಯ ರಿಯಲ್‍ ಲೈಫ್ ..!

0
1380

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳಲ್ಲಿ ಗಟ್ಟಿಮೇಳ ಕೂಡ ಒಂದಾಗಿದೆ. ಪ್ರಸಾರವಾಗಲು ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಹೆಚ್ಚು ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದು, ಅಮೂಲ್ಯ ಪಾತ್ರಧಾರಿಯೂ ಹೆಚ್ಚು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಮೂಲ್ಯ ಎಂಬ ಪಾತ್ರವನ್ನು ನಿರ್ವಹಿಸುತ್ತಿರುವ ನಿಜವಾದ ಹೆಸರು ನಿಶಾ. ಗಟ್ಟಿಮೇಳ ಧಾರವಾಹಿಗೂ ಮುನ್ನಾ ಅವರು ಬೇರೆ ಧಾರವಾಹಿಗಳಲ್ಲೂ ನಟನೆ ಮಾಡುತ್ತಿದ್ದರು. ಸ್ಟಾರ್‍ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರ್ವ ಮಂಗಳ ಮಾಂಗಲ್ಯೇ ಧಾರವಾಹಿಯಲ್ಲೂ ನಟನೆ ಮಾಡುತ್ತಿದ್ದರು.

ಈಗ ಗಟ್ಟಿಮೇಳ ಧಾರವಾಹಿಯಲ್ಲಿ ಅಮೂಲ್ಯ ಪಾತ್ರದಲ್ಲಿ ನಿಶಾ ಅವರು ಮಿಂಚುತ್ತಿದ್ದಾರೆ. ಈ ಧಾರವಾಹಿಯಲ್ಲಿ ವೇದಾಂತ್‍ ಮತ್ತು ಅಮೂಲ್ಯ ಅವರ ಕ್ಯೂಟ್‍ ಆದ ಜಗಳವನ್ನು ನೋಡಲು ಪ್ರೇಕ್ಷಕರು ಕಾಯುತ್ತಿರುತ್ತಾರೆ. ನಟಿ ನಿಶಾ ಅವರು ಮಾಡೆಲ್‍ ಕೂಡ ಹೌದು. ಅವರ ನಟನೆ ತುಂಬಾ ಚೆನ್ನಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

LEAVE A REPLY

Please enter your comment!
Please enter your name here