ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಮೊಣಕಾಲಿಗೆ ಶಸ್ತ್ರಚಿಕಿತ್ಸೆ.!

0
136

ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಿರುವ ಹಿನ್ನಲೆಯಲ್ಲಿ ಮುಂಬರುವ ದೇಶೀಯ ಆವೃತ್ತಿಯ ಹೆಚ್ಚಿನ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ಗಾಯದಿಂದ ಬಳಲುತ್ತಿದ್ದ ಸುರೇಶ್ ರೈನಾ ಅವರು ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಚೇತರಿಸಿಕೊಳ್ಳಲು ನಾಲ್ಕರಿಂದ ಆರು ವಾರಗಳ ಸಮಯ ಅಗತ್ಯವಿದೆ.” ಎಂದು ಬಿಸಿಸಿಐ ಟ್ವೀಟ್ ಮಾಡಿದೆ. ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುವ ಸುರೇಶ್ ರೈನಾ ಮುಂದಿನ ಆರು ವಾರ ಕ್ರಿಕೆಟ್ ಆಡುವಂತಿಲ್ಲ.

ಹೀಗಾಗಿ ಈ ಋತುವಿನ ದೇಶೀಯ ಕ್ರಿಕೆಟ್ ಪಂದ್ಯಾವಳಿಗಳು ಇನ್ನೇನು ಆರಂಭವಾಗಲಿದ್ದು, ರೈನಾ ಆರಂಭದ ಕೆಲವು ಪಂದ್ಯಗಳಿಂದ ದೂರ ಉಳಿಯಲಿದ್ದಾರೆ. ೩೨ರ ಪ್ರಾಯದ ಎಡಗೈ ಬ್ಯಾಟ್ಸ್‌ಮನ್ ೨೦೧೮ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಏಕದಿನ ಪಂದ್ಯವಾಡಿದ್ದರು. ೨೦೧೧ರ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ರೈನಾ ಆಡಿದ್ದರು. ೧೮ ಟೆಸ್ಟ್, ೨೨೬ ಏಕದಿನ ಹಾಗೂ ೭೮ ಟಿ-೨೦ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

LEAVE A REPLY

Please enter your comment!
Please enter your name here